• Home  
  • ಬೈಲೂರು ಬಿ. ಗುರುರಾಜ ಆಚಾರ್ಯ ನಿಧನ (Bailur B. Gururaja Acharya passes away)
- ನಿಧನ

ಬೈಲೂರು ಬಿ. ಗುರುರಾಜ ಆಚಾರ್ಯ ನಿಧನ (Bailur B. Gururaja Acharya passes away)

Share: ಬೈಲೂರು ಬಿ. ಗುರುರಾಜ ಆಚಾರ್ಯ ನಿಧನ  ಐರೋಡಿ ರಾಧಾಕೃಷ್ಣ ಪೈ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಗುರುರಾಜ ಆಚಾರ್ಯ (Udupi) ಉಡುಪಿ: ಉಡುಪಿ ಬೈಲೂರು ನಿವಾಸಿ ಬಿ. ಗುರುರಾಜ ಆಚಾರ್ಯ (84) ಅವರು ಶುಕ್ರವಾರ  ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.   ಉಡುಪಿಯ ಪ್ರಖ್ಯಾತ ಐರೋಡಿ ರಾಧಾಕೃಷ್ಣ ಪೈ ಸಂಸ್ಥೆಯಲ್ಲಿ ಸುಮಾರು 49 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಉಡುಪಿ ಜಿಲ್ಲೆಯ ನೂರಾರು ದೇವಾಲಯಗಳು ಹಾಗೂ ದೈವಸ್ಥಾನಗಳ ವಿಗ್ರಹಗಳಿಗೆ ಕರಾರುವಕ್ಕಾಗಿ ಅಳತೆ ತೆಗೆದು, ಬೆಳ್ಳಿ ಹಾಗೂ ಇತರ ಲೋಹಗಳ […]

ಬೈಲೂರು ಬಿ. ಗುರುರಾಜ ಆಚಾರ್ಯ ನಿಧನ

(Udupi) ಉಡುಪಿ: ಉಡುಪಿ ಬೈಲೂರು ನಿವಾಸಿ ಬಿ. ಗುರುರಾಜ ಆಚಾರ್ಯ (84) ಅವರು ಶುಕ್ರವಾರ  ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

  ಉಡುಪಿಯ ಪ್ರಖ್ಯಾತ ಐರೋಡಿ ರಾಧಾಕೃಷ್ಣ ಪೈ ಸಂಸ್ಥೆಯಲ್ಲಿ ಸುಮಾರು 49 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅವರು, ಉಡುಪಿ ಜಿಲ್ಲೆಯ ನೂರಾರು ದೇವಾಲಯಗಳು ಹಾಗೂ ದೈವಸ್ಥಾನಗಳ ವಿಗ್ರಹಗಳಿಗೆ ಕರಾರುವಕ್ಕಾಗಿ ಅಳತೆ ತೆಗೆದು, ಬೆಳ್ಳಿ ಹಾಗೂ ಇತರ ಲೋಹಗಳ ಕವಚಗಳನ್ನು ನಿರ್ಮಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಮೂಲಕ ಧಾರ್ಮಿಕ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಸೇವೆ ಗಮನಾರ್ಹವಾಗಿದೆ.

 ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.