• Home  
  • ಪಾಂಗಾಳ: ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶಾಲಾ ಬ್ಯಾಗ್ ವಿತರಣೆ (Pangala: Uniforms and school bags distributed to Anganwadi children)
- ಶಾಲಾ ಕಾಲೇಜು

ಪಾಂಗಾಳ: ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶಾಲಾ ಬ್ಯಾಗ್ ವಿತರಣೆ (Pangala: Uniforms and school bags distributed to Anganwadi children)

Share:  ಪಾಂಗಾಳ: ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಶಾಲಾ ಬ್ಯಾಗ್ ವಿತರಣೆ ವಿವಿಧ ಸಂಘ, ಸಂಸ್ಥೆಗಳು ನೀಡಿದ ಪರಿಕರಗಳ ಕೊಡುಗೆ ಹಸ್ತಾಂತರಿಸಿದ ಸಮಾಜಸೇವಕಿ ಗೀತಾಂಜಲಿ ಸುವರ್ಣ (Katapadi) ಕಟಪಾಡಿ: ಪಾಂಗಾಳ ಅಂಗನವಾಡಿ ಕೇಂದ್ರ-2ರಲ್ಲಿ ಆಯೋಜಿಸಲಾಗಿದ್ದ ಸಮಗ್ರ ಬಾಲ ವಿಕಾಸ ಸಮಿತಿಯ ಸಭೆಯನ್ನು ಸಮಾಜ ಸೇವಕಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ಶ್ರೀಮತಿ ಗೀತಾಂಜಲಿ ಸುವರ್ಣ ಉದ್ಘಾಟಿಸಿದರು.     ಕಟಪಾಡಿ ಪೇಟೆಬೆಟ್ಟು ಕೊರಗಜ್ಜ ಸಾನಿಧ್ಯದಿಂದ ಪಾಂಗಾಳ ಅಂಗನವಾಡಿ ಮಕ್ಕಳಿಗೆ ಲಭಿಸಿದ ಈ ನೆರವನ್ನು ಹಸ್ತಾಂತರಿಸಿದ ಗೀತಾಜಲಿ ಸುವರ್ಣ ಮಾತನಾಡಿ, ಸಾಧನೆ […]

(Katapadi) ಕಟಪಾಡಿ: ಪಾಂಗಾಳ ಅಂಗನವಾಡಿ ಕೇಂದ್ರ-2ರಲ್ಲಿ ಆಯೋಜಿಸಲಾಗಿದ್ದ ಸಮಗ್ರ ಬಾಲ ವಿಕಾಸ ಸಮಿತಿಯ ಸಭೆಯನ್ನು ಸಮಾಜ ಸೇವಕಿ, ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯೆ ಶ್ರೀಮತಿ ಗೀತಾಂಜಲಿ ಸುವರ್ಣ ಉದ್ಘಾಟಿಸಿದರು.

    ಕಟಪಾಡಿ ಪೇಟೆಬೆಟ್ಟು ಕೊರಗಜ್ಜ ಸಾನಿಧ್ಯದಿಂದ ಪಾಂಗಾಳ ಅಂಗನವಾಡಿ ಮಕ್ಕಳಿಗೆ ಲಭಿಸಿದ ಈ ನೆರವನ್ನು ಹಸ್ತಾಂತರಿಸಿದ ಗೀತಾಜಲಿ ಸುವರ್ಣ ಮಾತನಾಡಿ, ಸಾಧನೆ ಮಾಡಿದ ಮಹನೀಯರ ಆದರ್ಶಗಳನ್ನು ಮಕ್ಕಳಿಗೆ ತಿಳಿಸಿಕೊಡಬೇಕು. ಮಕ್ಕಳ ಶಿಕ್ಷಣ, ನಡತೆ ಮತ್ತು ಆರೋಗ್ಯದ ಬಗ್ಗೆ ಹೆತ್ತವರು ಹಾಗೂ ಶಿಕ್ಷಕರು ವಿಶೇಷ ಕಾಳಜಿ ವಹಿಸಬೇಕು ಎಂದು ವಿನಂತಿಸಿದರು.

ವಿವಿಧ ಪರಿಕರಗಳ ಕೊಡುಗೆ:

​ಶ್ರೀ ಕ್ಷೇತ್ರ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ದೈವಸ್ಥಾನ ಹಾಗೂ ಕೊರಗಜ್ಜ ಸನ್ನಿಧಿಯ ಮುಖ್ಯಸ್ಥರಾದ ತುಕಾರಾಮ್ ಎಸ್. ಉರ್ವ, ಸಂಗಮ ಫ್ರೆಂಡ್ಸ್ ಕಟಪಾಡಿ ಮತ್ತು ಸಾಯಿ ಫ್ರೆಂಡ್ಸ್ ಕಟಪಾಡಿಯ ಕಿಶನ್, ಜಯಕರ್ ಹಾಗೂ ರಂಜಿತ್ ಕೋಟ್ಯಾನ್ ಅವರ ಸೌಜನ್ಯದೊಂದಿಗೆ ಅಂಗನವಾಡಿ ಮಕ್ಕಳಿಗೆ ಸಮವಸ್ತ್ರ, ಸ್ಕೂಲ್ ಬ್ಯಾಗ್, ಆಟಿಕೆ ಗೊಂಬೆಗಳು ಮತ್ತು ಡ್ರಾಯಿಂಗ್ ಸ್ಲೇಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು.

​  ಈ ಸಂದರ್ಭದಲ್ಲಿ ಸಂಗಮ ಫ್ರೆಂಡ್ಸ್‌ನ ರಂಜಿತ್ ಕೋಟ್ಯಾನ್, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶಾಲಿನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಲೋಚನಾ, ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮೀ ಎ., ಸಿಎಚ್‌ಒ ಶಾಲಿನಿ, ಬಾಲ ವಿಕಾಸ ಸಮಿತಿಯ ಸದಸ್ಯರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಗೂ ಪೋಷಕರು ಉಪಸ್ಥಿತರಿದ್ದರು.

  ಗೀತಾ ಪಾಂಗಾಳ ಸ್ವಾಗತಿಸಿದರು. ಅಂಗನವಾಡಿ ಶಿಕ್ಷಕಿ ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.