• Home  
  • ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು (Udupi MLA makes derogatory remarks against Rahul Gandhi: Complaint filed)
- ಅಪರಾಧ

ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು (Udupi MLA makes derogatory remarks against Rahul Gandhi: Complaint filed)

Share: ಉಡುಪಿ ಶಾಸಕರಿಂದ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತು : ದೂರು ದಾಖಲು ಪಡುಬಿದ್ರಿ ಠಾಣೆಯಲ್ಲಿ ದೂರು ದಾಖಲಿಸಿದ ಕಾಪು ಯುವ ಕಾಂಗ್ರೆಸ್ ವತಿಯಿಂದ ದೂರು   (Padubidri) ಪಡುಬಿದ್ರಿ : ಲೋಕಸಭಾ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾಪು ಯುವ ಕಾಂಗ್ರೆಸ್ ವತಿಯಿಂದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್ ನೇತೃತ್ವದಲ್ಲಿ ಪಡುಬಿದ್ರಿ ಠಾಣೆಗೆ  ದೂರು ನೀಡಲಾಯಿತು. ಇತ್ತೀಚೆಗೆ […]

  (Padubidri) ಪಡುಬಿದ್ರಿ : ಲೋಕಸಭಾ ಸದಸ್ಯ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಕಾಪು ಯುವ ಕಾಂಗ್ರೆಸ್ ವತಿಯಿಂದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್ ನೇತೃತ್ವದಲ್ಲಿ ಪಡುಬಿದ್ರಿ ಠಾಣೆಗೆ  ದೂರು ನೀಡಲಾಯಿತು.

ಇತ್ತೀಚೆಗೆ ಉಡುಪಿ ಜಿಲ್ಲಾ ಕಾಂಗ್ರೆಸ್‌  ಆಯೋಜಿಸಿದ ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರವರು ಅಸಂವಿದಾನಿಕ ಶಬ್ದ ಬಳಸಿದ್ದರು.

   ಈ ಸಂದರ್ಭ ಮಾತನಾಡಿದ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಿಯಾಜ್, ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿದ್ದು ನೀಡಿದ  ಬೇಜವಾಬ್ದಾರಿ ಹೇಳಿಕೆಯನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ನಮ್ಮ ನೇತಾರ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡಿದ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

   ಕಾಂಗ್ರೆಸ್ ಪಕ್ಷದ ಪ್ರಮುಖರಾದ ಗಣೇಶ್ ಕೋಟ್ಯಾನ್, ಕೇಶವ ಸಾಲ್ಯಾನ್, ರಮೀಜ್ ಹುಸೇನ್, ಅಶ್ವಿನ್ ಕೋಟ್ಯಾನ್, ಶಫಿ ಕಲಂದ‌ರ್, ಅರಹಾ, ಎಂ.ಎಸ್.ಮನ್ಸೂರ್, ಜ್ಯೋತಿ ಮೆನನ್, ಸುಚರಿತ, ಸಂತೋಷ್ ಪಡುಬಿದ್ರಿ, ಕೀರ್ತಿ ಕಲ್ಲಟ್ಟೆ, ವಿಠಲ್ ಮಾಸ್ತರ್, ಬುಡಾನ್ ಸಾಹೇಬ್‌, ಸುನಂದ ಸಾಲ್ಯಾನ್, ಮುಬೀನಾ ಮುಂತಾದವರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.