ಪಲಿಮಾರು ಹೊಯಿಗೆ ಫ್ರೆಂಡ್ಸ್ ಪಲಿಮಾರು ಸಂಸ್ಥೆಯ ವತಿಯಿಂದ ಕಷಾಯ ವಿತರಣೆ
ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಷಾಯ ವಿತರಣೆ
(Palimaru) ಪಲಿಮಾರು: ಹೊಯಿಗೆ ಫ್ರೆಂಡ್ಸ್ ಪಲಿಮಾರು ಸಂಸ್ಥೆಯ ವತಿಯಿಂದ ಸತತ 7ನೇ ವರುಷ ಆಟಿ ಅಮಾವಾಸ್ಯೆಯ ಔಷಧೀಯ ಕಷಾಯ ವಿತರಿಸಲಾಯಿತು.
ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಷಾಯ ವಿರಣಾ ಕಾರ್ಯಕ್ರಮ ನಡೆಯಿತು.
ಕಷಾಯವನ್ನು 1000 ಕ್ಕೂ ಹೆಚ್ಚಿನ ಗ್ರಾಮಸ್ಥರು ಸ್ವೀಕರಿಸಿದರು.
ಈ ಸಂದರ್ಭ ಪಲಿಮಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಉಡುಪ, ಶರತ್ ಉಡುಪ, ಹೊಯಿಗೆ ಫ್ರೆಂಡ್ಸ್ ಸಂಸ್ಥೆಯ ಅಧ್ಯಕ್ಷ ರಿತೇಶ್ ದೇವಾಡಿಗ, ಸಂತೋಷ್ ದೇವಾಡಿಗ, ರಾಘವೇಂದ್ರ ಸುವರ್ಣ, ಲಕ್ಷ್ಮಣ್ ಕೋಟ್ಯಾನ್, ಸತೀಶ್ ಕುಮಾರ್, ಅರುಣ್ ಪೂಜಾರಿ, ರೋಷನ್, ಶ್ರೀಜಿತ್, ಅಂಕಿತ್, ವಿಜಯ್ ಉಪಸ್ಥಿತರಿದ್ದರು.

