• Home  
  • ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ದಿ.  ಡೇವಿಡ್ ಡಿಸೋಜ ಅವರಿಗೆ ನುಡಿನಮನ (Letter to Mr. David D’Souza from the Kaup Block Congress Committee)
- ನಿಧನ

ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ದಿ.  ಡೇವಿಡ್ ಡಿಸೋಜ ಅವರಿಗೆ ನುಡಿನಮನ (Letter to Mr. David D’Souza from the Kaup Block Congress Committee)

Share:   ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ದಿ.  ಡೇವಿಡ್ ಡಿಸೋಜ ಅವರಿಗೆ ನುಡಿನಮನ ‌ ಮುದರಂಗಡಿ ಚರ್ಚ್ ಸಭಾಭವನದಲ್ಲಿ ನಡೆದ ನುಡಿ ನಮನ ಕಾರ್ಯಕ್ರಮ (Kaup) ಕಾಪು: ಇತ್ತೀಚೆಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ದಿವಂಗತ ಡೇವಿಡ್ ಡಿಸೋಜ ಅವರಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಮುದರಂಗಡಿ ಚರ್ಚ್‌ ಸಭಾಭವನದಲ್ಲಿ ನುಡಿನಮನ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿನಯಕುಮಾರ್‌ ಸೊರ ಸೊರಕೆ ಭಾಗವಹಿಸಿದರು. ಅವರು ಈ ಸಂದರ್ಭ ಮಾತನಾಡಿ, ಮುದರಂಗಡಿ ಗ್ರಾಮ […]

(Kaup) ಕಾಪು: ಇತ್ತೀಚೆಗೆ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾದ ದಿವಂಗತ ಡೇವಿಡ್ ಡಿಸೋಜ ಅವರಿಗೆ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಆಯೋಜನೆಯಲ್ಲಿ ಮುದರಂಗಡಿ ಚರ್ಚ್‌ ಸಭಾಭವನದಲ್ಲಿ ನುಡಿನಮನ ಕಾರ್ಯಕ್ರಮ ನೆರವೇರಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಿನಯಕುಮಾರ್‌ ಸೊರ ಸೊರಕೆ ಭಾಗವಹಿಸಿದರು.

ಅವರು ಈ ಸಂದರ್ಭ ಮಾತನಾಡಿ, ಮುದರಂಗಡಿ ಗ್ರಾಮ ಪಂಚಾಯಿತಿಯ ಮೂರು ಅವಧಿಗಳ ಅಧ್ಯಕ್ಷರಾಗಿ ಡೇವಿಡ್ ಡಿಸೋಜ ಅವರು ಜನಪ್ರತಿನಿಧಿಗಳ ಸಮನ್ವಯದೊಂದಿಗೆ ಮುದರಂಗಡಿ ಭಾಗದ ಸಮಗ್ರ ಅಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿದರು.

 ಜಾತ್ಯಾತೀತ ಮನೋಭಾವದವರಾಗಿದ್ದ ಡೇವಿಡ್‌ ಡಿಸೋಜಾರವರು ಚರ್ಚ್, ಮಸೀದಿ, ದೇವಸ್ಥಾನ ಹಾಗೂ ದೈವಸ್ಥಾನಗಳ ಅಭಿವೃದ್ಧಿಗೆ ಸಮಾನ ಕಾಳಜಿಯಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಮುದರಂಗಡಿ ಕುಂಜಿಗುಡ್ಡೆಯಲ್ಲಿ ಹಲವು ವರ್ಷಗಳಿಂದ ಗೌರವಾಧ್ಯಕ್ಷರಾಗಿ ಸಾರ್ವಜನಿಕ ಗಣೇಶೋತ್ಸವವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಅವರ ಸೇವೆ ಸರ್ವಧರ್ಮ ಸಮಭಾವದ ಜೀವಂತ ಉದಾಹರಣೆಯಾಗಿದೆ. ಅವರ ಅಂತ್ಯಕ್ರಿಯೆಯಲ್ಲಿ ಸರ್ವಧರ್ಮದ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದು, ಅವರು ಗಳಿಸಿದ್ದ ಪ್ರೀತಿ ಮತ್ತು ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.

  ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾದ ಎಂ.ಎ. ಗಫೂರ್, ಮುದರಂಗಡಿ ಚರ್ಚ್ ಧರ್ಮಗುರುಗಳಾದ ರೆವೆರೆಂಡ್ ಫಾದರ್ ವಿನ್ಸೆಂಟ್ ಕುವೆಲ್ಲೋ, ಮಾಜಿ ಕೆಎಂಎಫ್ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ, ಅದಾನಿ ಸಂಸ್ಥೆಯ ಅಯಕ್ಷ ಕಿಶೋರ್ ಆಳ್ವ, ಜಿತೇಂದ್ರ ಫುಟಾರ್ಡೋ ಹಾಗೂ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ವೈ. ಸುಕುಮಾರ್ ಅವರು ನುಡಿನಮನ ಸಲ್ಲಿಸಿದರು.

 ಈ ಸಂದರ್ಭದಲ್ಲಿ ಡೇವಿಡ್ ಡಿಸೋಜ ಅವರ ಕುಟುಂಬಸ್ಥರು, ವಿವಿಧ ಜನಪ್ರತಿನಿಧಿಗಳು ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.