• Home  
  • ನ. 27 ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ: ವಿನಯಕುಮಾರ್ ಸೊರಕೆ (Free Job Fair at Kapu on 27th: Vinayakumar Sorake)
- ಸಹಾಯ ಹಸ್ತ

ನ. 27 ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ: ವಿನಯಕುಮಾರ್ ಸೊರಕೆ (Free Job Fair at Kapu on 27th: Vinayakumar Sorake)

Share: ನ. 27 ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ: ವಿನಯಕುಮಾರ್ ಸೊರಕೆ ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ನಡೆಯಲಿರುವ ಉದ್ಯೋಗ ಮೇಳ (Kaup) ಕಾಪು : ಕೆಪಿಸಿಸಿ ಪ್ರಚಾರ ಸಮಿತಿ ಉಡುಪಿ ಜಿಲ್ಲೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನವೆಂಬರ್ 27ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ.  ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿನಯಕುಮಾರ್ ಸೊರಕೆ, ಕಾಪು […]

(Kaup) ಕಾಪು : ಕೆಪಿಸಿಸಿ ಪ್ರಚಾರ ಸಮಿತಿ ಉಡುಪಿ ಜಿಲ್ಲೆ ಹಾಗೂ ಕಾಪು ವಿಧಾನಸಭಾ ಕ್ಷೇತ್ರದ ವತಿಯಿಂದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ನವೆಂಬರ್ 27ರಂದು ಕಾಪುವಿನಲ್ಲಿ ಉಚಿತ ಉದ್ಯೋಗ ಮೇಳ ಆಯೋಜಿಸಲಾಗಿದೆ.

 ಕಾಪು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿನಯಕುಮಾರ್ ಸೊರಕೆ, ಕಾಪು ದಂಡತೀರ್ಥ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಬೆಳಗ್ಗೆ 8-30 ರಿಂದ ಮಧ್ಯಾಹ್ನ 2.30 ರವರೆಗೆ ಉದ್ಯೋಗ ಮೇಳ ನಡೆಯಲಿದೆ.

   ಐಟಿಐ, ಪದವಿ, ಸ್ನಾತಕೋತ್ತರ ಪದವಿ, ಎಂಬಿಎ ಹಾಗೂ ಎಂಜಿನಿಯರಿಂಗ್ ಸೇರಿದಂತೆ ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಅನುಭವಿಗಳು ಹಾಗೂ ಹೊಸದಾಗಿ ಉದ್ಯೋಗ ಅರಸುತ್ತಿರುವವರು ಭಾಗವಹಿಸಬಹುದು.

  ಐಟಿ-ಬಿಟಿ, ಬಿಪಿಒ, ಆಟೋಮೊಬೈಲ್, ಶಿಕ್ಷಣ, ರಿಟೇಲ್, ಮಾರ್ಕೆಟಿಂಗ್, ಹೌಸ್‌ಕೀಪಿಂಗ್, ಫಾರ್ಮಸಿ ಸೇರಿದಂತೆ ವಿವಿಧ ಕ್ಷೇತ್ರಗಳ 50ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಿದರು.

  ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ದಿವಾಕರ ಶೆಟ್ಟಿ ಕಾಪು, ಜಿತೇಂದ್ರ ಪುರ್ಟಾಡೋ, ಪ್ರಶಾಂತ್ ಜತ್ತಣ್ಣ, ಶೇಖ್ ವಾಹಿದ್, ಶರ್ಫುದ್ಧೀನ್ ಶೇಖ್, ಶ್ರೀನಿವಾಸ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.