• Home  
  • ಕಟಪಾಡಿ ಎಸ್‌ವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 100 ಸೈಕಲ್ ವಿತರಣೆ (Distribution of 100 bicycles to students of Katapadi SVS Educational Institution)
- ಸಹಾಯ ಹಸ್ತ

ಕಟಪಾಡಿ ಎಸ್‌ವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 100 ಸೈಕಲ್ ವಿತರಣೆ (Distribution of 100 bicycles to students of Katapadi SVS Educational Institution)

Share: ಕಟಪಾಡಿ ಎಸ್‌ವಿಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ 100 ಸೈಕಲ್ ವಿತರಣೆ ಕೆನರಾ ರೋಬೆಕೊ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ಕೊಡುಗೆ ​(Katapadi) ಕಟಪಾಡಿ: ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕಿನ ಅಂಗಸಂಸ್ಥೆ ‘ಕೆನರಾ ರೋಬೆಕೊ’ (Canara Robeco) ತನ್ನ ಸಿಎಸ್ಆರ್ (CSR) ನಿಧಿಯಡಿ ಕಟಪಾಡಿ ಎಸ್‌ವಿಎಸ್ ವಿದ್ಯಾ ಸಂಸ್ಥೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗೆ 100 ಸೈಕಲ್‌ಗಳನ್ನು ದೇಣಿಗೆಯಾಗಿ ನೀಡಿದೆ. ​  ಸೈಕಲ್ ಹಸ್ತಾಂತರಿಸಿ ಮಾತನಾಡಿದ ಕೆನರಾ ರೋಬೆಕೊ ಮಂಗಳೂರು ವಿಭಾಗದ ಸೀನಿಯರ್ ಮ್ಯಾನೇಜರ್ ನಿತೇಶ್ ಶೆಣೈ […]

​(Katapadi) ಕಟಪಾಡಿ: ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದಾದ ಕೆನರಾ ಬ್ಯಾಂಕಿನ ಅಂಗಸಂಸ್ಥೆ ‘ಕೆನರಾ ರೋಬೆಕೊ’ (Canara Robeco) ತನ್ನ ಸಿಎಸ್ಆರ್ (CSR) ನಿಧಿಯಡಿ ಕಟಪಾಡಿ ಎಸ್‌ವಿಎಸ್ ವಿದ್ಯಾ ಸಂಸ್ಥೆಗಳ 8ನೇ ತರಗತಿಯ ವಿದ್ಯಾರ್ಥಿಗಳಿಗೆ 100 ಸೈಕಲ್‌ಗಳನ್ನು ದೇಣಿಗೆಯಾಗಿ ನೀಡಿದೆ.

​  ಸೈಕಲ್ ಹಸ್ತಾಂತರಿಸಿ ಮಾತನಾಡಿದ ಕೆನರಾ ರೋಬೆಕೊ ಮಂಗಳೂರು ವಿಭಾಗದ ಸೀನಿಯರ್ ಮ್ಯಾನೇಜರ್ ನಿತೇಶ್ ಶೆಣೈ ಮಾತನಾಡಿ, ಕೆನರಾ ರೋಬೆಕೊ ಸಂಸ್ಥೆಯು ತನ್ನ ಸಿಎಸ್ಆರ್ ನಿಧಿಯ ಮೂಲಕ ದೇಶದ ಲಕ್ಷಾಂತರ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದೆ. 2026ನೇ ಸಾಲಿನಲ್ಲಿ ದೇಶಾದ್ಯಂತ 24,000 ಶಾಲೆಗಳಿಗೆ ಸೈಕಲ್ ವಿತರಿಸುವ ಸಂಕಲ್ಪ ಮಾಡಲಾಗಿದ್ದು, ಅದರ ಭಾಗವಾಗಿ ಕಟಪಾಡಿ ಎಸ್‌ವಿಎಸ್ ಶಾಲಾ ವಿದ್ಯಾರ್ಥಿಗಳಿಗೂ 100 ಸೈಕಲ್‌ಗಳನ್ನು ನೀಡಲಾಗುತ್ತಿದೆ. ಇದೊಂದು ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹವಾಗಿದ್ದು, ವಿದ್ಯಾರ್ಥಿಗಳು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಇದರ ಸದ್ಬಳಕೆ ಮಾಡಿಕೊಳ್ಳಬೇಕು” ಎಂದರು.

ಈ ಸಂದರ್ಭ ದಾನಿಗಳಾದ ಶಿವ ಪಾಲ್ಚೂರು ಮತ್ತು ಶ್ರೀಮತಿ ಪಾಲ್ಚೂರು ದಂಪತಿಯನ್ನು ಗೌರವಿಸಲಾಯಿತು.

​  ವೇದಿಕೆಯಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಲಕ್ ರಾಜ್, ​ಶಾಲಾ ಸಂಚಾಲಕರಾದ ಸತ್ಯೇಂದ್ರ ಪೈ, ಇನ್ವೆಂಜರ್ ಸಂಸ್ಥೆಯ  ಟೆಕ್ನಾಲಜಿ ಪ್ರಬಂಧಕ ನರಸಿಂಹ ಮಲ್ಯ, H R ಕೃತಿಕಾ, ವಿವೇಕಾನಂದ ಪ್ರೌಢಶಾಲೆಯ  ಮುಖ್ಯೋಪಾಧ್ಯಾಯಿನಿಯರಾದ ಆಶಾಲತಾ ಮತ್ತು  ಸುಜಾ ಡಿಸೋಜ, ರಾಘವೇಂದ್ರ ಆಚಾರ್, ಬಿ. ಸಿ. ಪೈ, ವೆಂಕಟ್ರಮಣ ಭಟ್, ಗಣೇಶ್ ಕಿಣಿ, ದೇವೇಂದ್ರ ಹಾಗೂ ಸುಧಾಕರ್ ಬಿ. ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.