• Home  
  • ಜೀವದ ಹಂಗು ತೊರೆದು ಪಕ್ಕದ ಮನೆಯವರನ್ನು ರಕ್ಷಸಿದ ಯುವಕರಿಗೆ ಸೀನಿಯರ್‌ ಛೇಂಬರ್‌ ಸನ್ಮಾನ (Senior Chamber honors youth who risked their lives to save neighbors)
- social service

ಜೀವದ ಹಂಗು ತೊರೆದು ಪಕ್ಕದ ಮನೆಯವರನ್ನು ರಕ್ಷಸಿದ ಯುವಕರಿಗೆ ಸೀನಿಯರ್‌ ಛೇಂಬರ್‌ ಸನ್ಮಾನ (Senior Chamber honors youth who risked their lives to save neighbors)

Share: ಜೀವದ ಹಂಗು ತೊರೆದು ಪಕ್ಕದ ಮನೆಯವರನ್ನು ರಕ್ಷಸಿದ ಯುವಕರಿಗೆ ಸೀನಿಯರ್‌ ಛೇಂಬರ್‌ ಸನ್ಮಾನ ಉಡುಪಿಯ ಪೆರಂಪಳ್ಳಿಯಲ್ಲಿ ಎಲೆಕ್ಟ್ರಿಕ್‌  ರಿಕ್ಷಾ ಹೊತ್ತಿ ಉರಿದ ಪ್ರಕರಣ  (Udupi) ಉಡುಪಿ : ಭಾನುವಾರ ಪೆರಂಪಳ್ಳಿಯಲ್ಲಿ ಎಲೆಕ್ಟ್ರಿಕ್‌  ರಿಕ್ಷಾ ಹೊತ್ತಿ ಉರಿದ ಪ್ರಕರಣದಲ್ಲಿ ಜೀವದ ಹಂಗು ತೊರೆದು ಮನೆಯವರನ್ನು ಮತ್ತು ಈಗಾಗಲೇ ಬೆಂಕಿ ಹತ್ತಿದ್ದ ಕಾರನ್ನು ರಕ್ಷಿಸಿ, ತಮ್ಮ ಜೀವದ ಹಂಗನ್ನೂ ತೊರೆದು ಬೆಂಕಿಯನ್ನು ನಿಯಂತ್ರಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಸಿವಿಲ್‌ ಇಂಜಿನಿಯರ್‌ ಮನೋಜ್‌ ಮತ್ತು ಯುವ ಉದ್ಯಮಿ […]

 (Udupi) ಉಡುಪಿ : ಭಾನುವಾರ ಪೆರಂಪಳ್ಳಿಯಲ್ಲಿ ಎಲೆಕ್ಟ್ರಿಕ್‌  ರಿಕ್ಷಾ ಹೊತ್ತಿ ಉರಿದ ಪ್ರಕರಣದಲ್ಲಿ ಜೀವದ ಹಂಗು ತೊರೆದು ಮನೆಯವರನ್ನು ಮತ್ತು ಈಗಾಗಲೇ ಬೆಂಕಿ ಹತ್ತಿದ್ದ ಕಾರನ್ನು ರಕ್ಷಿಸಿ, ತಮ್ಮ ಜೀವದ ಹಂಗನ್ನೂ ತೊರೆದು ಬೆಂಕಿಯನ್ನು ನಿಯಂತ್ರಿಸುವ ಮೂಲಕ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ ಸಿವಿಲ್‌ ಇಂಜಿನಿಯರ್‌ ಮನೋಜ್‌ ಮತ್ತು ಯುವ ಉದ್ಯಮಿ ಶರತ್‌ ಅವರನ್ನು ಸೀನಿಯರ್‌ ಛೇಂಬರ್‌ ಉಡುಪಿ-ಇಂದ್ರಾಳಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

  ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಜೇಸಿಐ ವಲಯ 15ರ ಪೂರ್ವ ವಲಯ ಉಪಾಧ್ಯಕ್ಷ, ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ಮಾತನಾಡಿ, ಬಹುದೊಡ್ಡ ಅನಾಹುತವನ್ನು ತಪ್ಪಿಸಿದ ಈ ಧೈರ್ಯವಂತ ಯುವಕರು ಪ್ರತಿಯೊಬ್ಬ ಯುವಕರಿಗೂ ಸ್ಪೂರ್ತಿಯಾಗಿದೆ. ಇಂದು ಅನಾಹುತಗಳು ಸಂಭವಿಸುವಾಗ ಮೊಬೈಲ್‌ ನಲ್ಲಿ ವಿಡಿಯೋ ಮಾಡುವವರ ಸಂಖ್ಯೆಯೇ ಹೆಚ್ಚು. ಅಂತದ್ದರಲ್ಲಿ  ಈ ಯುವಕರು ತಾವೂ ಮೊಬೈಲ್‌ ಬಳಕೆದಾರರಾಗಿದ್ದರೂ, ಆ ಬಗ್ಗೆ ಕಲೆಕೆಡಿಸಿಕೊಳ್ಳದೆ  ಮಾನವೀಯತೆಗೆ ಒತ್ತುಕೊಟ್ಟದ್ದು ಅಭಿನಂದನಾಹ೯. ಮಾನವೀಯತೆಯ ಭಾವನೆಗಳು ಕುಂಠಿತವಾಗುತ್ತಿರುವ ಈ ಸಮಯದಲ್ಲಿ ಈ ಯುವಕರು ತೋರಿದ ಅಪೂವ೯ ಮಾನವೀಯತೆ ಎಲ್ಲಾ ಯುವ ಸಮೂಹಕ್ಕೆ ಮಾದರಿಯಾಗಿದೆ ಎಂದರು.

ಈ ಸಂದರ್ಭ ಪದಾಧಿಕಾರಿಗಳಾದ ಪ್ರೀತಿ ಕಲ್ಯಾಣಪುರ, ಶೈನಿ ಸತ್ಯಭಾಮ, ಕೃಷ್ಣರಾಜ ತಂತ್ರಿ, ಶೆರ್ಲಿ ಮನೋಜ್‌ ಮತ್ತು ಸದಸ್ಯರು ಉಪಸ್ಥಿತರಿದ್ದರು.

   ಉಡುಪಿ ಇಂದ್ರಾಳಿಯ ಅಧ್ಯಕ್ಷ ಮನೋಜ್‌ ಕಡಬ ಸ್ವಾಗತಿಸಿದರು. ಕಾರ್ಯದರ್ಶಿ ಸೆಲ್ವರಾಜ್‌  ವಂದಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.