• Home  
  •  ಪರಿಶಿಷ್ಠ ಜಾತಿ–ಪರಿಶಿಷ್ಠ ಪಂಗಡ ಮಹಿಳಾ ಸಬಲೀಕರಣ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಮಹೇಶ್ ಶರ್ಮಾ ಆಯ್ಕೆ (Mahesh Sharma selected as State Media Spokesperson of Scheduled Caste-Scheduled Tribe Women Empowerment Committee)
- ಸಂಘ, ಸಂಸ್ಥೆಗಳು

 ಪರಿಶಿಷ್ಠ ಜಾತಿ–ಪರಿಶಿಷ್ಠ ಪಂಗಡ ಮಹಿಳಾ ಸಬಲೀಕರಣ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಮಹೇಶ್ ಶರ್ಮಾ ಆಯ್ಕೆ (Mahesh Sharma selected as State Media Spokesperson of Scheduled Caste-Scheduled Tribe Women Empowerment Committee)

Share: ಪ. ಜಾತಿ–ಪ. ಪಂಗಡ ಮಹಿಳಾ ಸಬಲೀಕರಣ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಮಹೇಶ್ ಶರ್ಮಾ ಆಯ್ಕೆ ​  ಸಂಘಟನೆಯ ಸಂಸ್ಥಾಪಕಿ, ರಾಜ್ಯಾಧ್ಯಕ್ಷೆ ಡಾ. ಭೀಮಾ ಪುತ್ರಿ ನಾಗಮ್ಮರವರ ಆದೇಶ (Bengaluru) ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ […]

(Bengaluru) ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಧ್ವನಿ ಎತ್ತುತ್ತಿರುವ ‘ಪರಿಶಿಷ್ಟ ಜಾತಿ–ಪರಿಶಿಷ್ಟ ಪಂಗಡ ಮಹಿಳಾ ಸಬಲೀಕರಣ ಹೋರಾಟ ಸಮಿತಿಯ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ ಹಾಗೂ ಸಾಮಾಜಿಕ ಹೋರಾಟಗಾರ ಮಹೇಶ್ ಶರ್ಮಾ ಅವರು ಅಧಿಕೃತವಾಗಿ ನೇಮಕಗೊಂಡಿದ್ದಾರೆ.

​  ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಭೀಮಾ ಪುತ್ರಿ ನಾಗಮ್ಮ ಅವರ ದೂರದೃಷ್ಟಿಯ ನೇತೃತ್ವದಲ್ಲಿ ಈ ಮಹತ್ವದ ಆದೇಶ ಹೊರಡಿಸಲಾಗಿದೆ.

  2026ರ ಮಾರ್ಚ್ 22ರಿಂದ ಈ ನೇಮಕಾತಿಯು ಜಾರಿಗೆ ಬಂದಿದೆ. ಸಂಘಟನೆಯ ಸಂಘಟನಾ ಚಟುವಟಿಕೆಗಳನ್ನು ರಾಜ್ಯಾದ್ಯಂತ ಮತ್ತಷ್ಟು ಬಲಪಡಿಸುವ ಮತ್ತು ಜನಪರ ಹೋರಾಟಗಳನ್ನು ಮಾಧ್ಯಮಗಳ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ ತಲುಪಿಸುವ ಪ್ರಮುಖ ಉದ್ದೇಶದಿಂದ ಈ ಜವಾಬ್ದಾರಿಯನ್ನು ನೀಡಲಾಗಿದೆ.

​  ಮುಂಬರುವ ದಿನಗಳಲ್ಲಿ ಸಂಘಟನೆಯ ಕಾರ್ಯಕ್ರಮಗಳು, ಹೋರಾಟಗಳು ಹಾಗೂ ಸಮಾಜಮುಖಿ ನಿಲುವುಗಳನ್ನು ಪತ್ರಿಕೆ, ದೃಶ್ಯ ಮಾಧ್ಯಮ (ಟಿವಿ), ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಮರ್ಪಕವಾಗಿ ಬಿಂಬಿಸುವ ದೊಡ್ಡ ಜವಾಬ್ದಾರಿ ಮಹೇಶ್ ಶರ್ಮಾ ಅವರ ಮೇಲಿದೆ. ಸಂಘಟನೆಯ ನಿಯಮಾವಳಿ ಹಾಗೂ ಮೂಲ ಉದ್ದೇಶಗಳಿಗೆ ಅನುಗುಣವಾಗಿ ಮಹಿಳಾ ಸಬಲೀಕರಣ, ಸಾಮಾಜಿಕ ನ್ಯಾಯ ಮತ್ತು ದಲಿತ-ಪರಿಶಿಷ್ಟ ವರ್ಗಗಳ ಹಕ್ಕುಗಳಿಗಾಗಿ ನೂತನ ಮಾಧ್ಯಮ ವಕ್ತಾರರು ಪ್ರಾಮಾಣಿಕವಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸಂಘಟನೆಯ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.