• Home  
  • ಕೈಪುಂಜಾಲು ಮೊಗವೀರ ಮಹಾ ಸಭಾ ಮಹಿಳಾ ಸಭಾದ ವತಿಯಿಂದ ಸಮುದ್ರ ಪೂಜೆ (Samudra Puja by Kaipunjalu Mogaveera Maha Sabha and Mahila Sabha)
- ಧಾರ್ಮಿಕ

ಕೈಪುಂಜಾಲು ಮೊಗವೀರ ಮಹಾ ಸಭಾ ಮಹಿಳಾ ಸಭಾದ ವತಿಯಿಂದ ಸಮುದ್ರ ಪೂಜೆ (Samudra Puja by Kaipunjalu Mogaveera Maha Sabha and Mahila Sabha)

Share: ಕೈಪುಂಜಾಲು ಮೊಗವೀರ ಮಹಾ ಸಭಾ ಮತ್ತು ಮಹಿಳಾ ಸಭಾದ ವತಿಯಿಂದ ಸಮುದ್ರ ಪೂಜೆ. ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಬಳಿಕ ಸಮುದ್ರಕ್ಕೆ ಹಾಲೆರೆದ ಮೊಗವೀರರು (Kaup) ಕಾಪು: ಕೈಪುಂಜಾಲು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಊರಿನ ಸಮಸ್ತರು ಸೇರಿ ಪಾರ್ಥನೆ ಸಲ್ಲಿಸಿ ತಾವು ಸಂಗ್ರಹಿಸಿದ ಹಾಲು ಹಾಗೂ ಸಿಹಿಯಾಳವನ್ನು ಭಜನೆಯ ಮೂಲಕ ಮೆರವಣಿಗೆಯಲ್ಲಿ ಸಮುದ್ರ ಬದಿಗೆ ತೆರಳಿ ಸಮುದ್ರ ರಾಜನಿಗೆ ಸಮರ್ಪಿಸಲಾಯಿತು. ಸಮುದ್ರ ಕಿನಾರೆಯಲ್ಲಿ ತಾವು ತಂದ ಹೂವು, ಹಣ್ಣು, ತೆಂಗಿನಕಾಯಿ ಹಾಗೂ ಸೀಯಾಳವನ್ನು ಜೋಡಿಸಿಟ್ಟು, ಸಾಮೂಹಿಕ […]

(Kaup) ಕಾಪು: ಕೈಪುಂಜಾಲು ಶ್ರೀ ಪಾಂಡುರಂಗ ಭಜನಾ ಮಂದಿರದಲ್ಲಿ ಊರಿನ ಸಮಸ್ತರು ಸೇರಿ ಪಾರ್ಥನೆ ಸಲ್ಲಿಸಿ ತಾವು ಸಂಗ್ರಹಿಸಿದ ಹಾಲು ಹಾಗೂ ಸಿಹಿಯಾಳವನ್ನು ಭಜನೆಯ ಮೂಲಕ ಮೆರವಣಿಗೆಯಲ್ಲಿ ಸಮುದ್ರ ಬದಿಗೆ ತೆರಳಿ ಸಮುದ್ರ ರಾಜನಿಗೆ ಸಮರ್ಪಿಸಲಾಯಿತು.

ಸಮುದ್ರ ಕಿನಾರೆಯಲ್ಲಿ ತಾವು ತಂದ ಹೂವು, ಹಣ್ಣು, ತೆಂಗಿನಕಾಯಿ ಹಾಗೂ ಸೀಯಾಳವನ್ನು ಜೋಡಿಸಿಟ್ಟು, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಸಮುದ್ರಕ್ಕೆ ಅರ್ಪಿಸಲಾಯಿತು.

  ಈ ಸಂದರ್ಭ ಮೊಗವೀರ ಮಹಾಸಭಾದ ಅಧ್ಯಕ್ಷ ಪ್ರವೀಣ್ ಶ್ರೀಯಾನ್, ಮಹಿಳಾ ಸಭಾದ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಚಂದ್ರಶೇಖರ ಅಮೀನ್, ಮೊಗವೀರ ಸಭಾದ ಉಪಾಧ್ಯಕ್ಷರುಗಳಾದ ಲಕ್ಷ್ಮೀನಾರಾಯಣ ಕೋಟ್ಯಾನ್, ಸದಾಶಿವ ಅಮೀನ್, ಪ್ರಧಾನ ಕಾರ್ಯದರ್ಶಿ ವಿನೋದ್ ಕಾಂಚನ್, ಕೋಶಾಧಿಕಾರಿ ವಾದಿರಾಜ್ ಕುಂದರ್ ಮತ್ತು ನೂರಾರು ಸಂಖ್ಯೆಯಲ್ಲಿ ಮೀನುಗಾರ ಸಮಾಜದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.