ಜಮಾ ಆತೆ ಇಸ್ಲಾಮಿ ಹಿಂದ್ ಕಾಪು, ಹೆಚ್. ಎಸ್. ಆರ್. ಕಾಪು ತಂಡದಿಂದ ಸ್ವಚ್ಛತಾ ಕಾರ್ಯಕ್ರಮ
ಮಲ್ಲಾರಿನಲ್ಲಿರುವ ಆಯುಷ್ ಕ್ಲಿನಿಕ್ ನ ವಠಾರ ಸ್ವಚ್ಛಗೊಳಿಸಿದ ಕಾರ್ಯಕರ್ತರು.
(Kaup) ಕಾಪು : ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ ) ಸೀರತ್ ಅಭಿಯಾನದ ಅಂಗವಾಗಿ ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆ ಮತ್ತು ಹೆಚ್. ಎಸ್. ಆರ್. ಕಾಪು ತಂಡವು ಜಂಟಿಯಾಗಿ ಮಲ್ಲಾರಿನಲ್ಲಿರುವ ಆಯುಷ್ ಕ್ಲಿನಿಕ್ ನ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಅಳೆತ್ತರದಷ್ಟು ಬೆಳೆದಿರುವ ಹುಲ್ಲು ಕತ್ತರಿಸಿ, ಕಸ, ಕಡ್ಡಿ, ಪ್ಲಾಸ್ಟಿಕ್ ಚೀಲ, ಬಾಟ್ಲಿಗಳನ್ನು ಹೆಕ್ಕಲಾಯಿತು.
ತಂಡದ ನೇತೃತ್ವವನ್ನು ಜಮಾ ಆತೆ ಇಸ್ಲಾಮಿ ಹಿಂದ್ ಕಾಪು ಶಾಖೆಯ ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಕಾಪು ಮತ್ತು ಕಾಪು ಹೆಚ್. ಎಸ್. ಆರ್ ಗ್ರೂಪ್ ಲೀಡರ್ ಮುಹಮ್ಮದ್ ಅಲಿಯವರು ವಹಿಸಿದ್ದರು.
ತಂದದಲ್ಲಿ ಮುಹಮ್ಮದ್ ಇಕ್ಬಾಲ್ ಸಾಹೇಬ್, ಅಬ್ದುಲ್ ಜಲೀಲ್, ಕಲೀಮುಲ್ಲಾ, ಮುಹಮ್ಮದ್ ಹಾಶಿಮ್ ಸಾಹೇಬ್, ಮುಹಮ್ಮದ್ ಶರೀಫ್ ಸಾಹೇಬ್, ಮುಹಮ್ಮದ್ ಅವ್ವಾಬ್, ಜೆ. ಐ. ಎಚ್ ಮಹಿಳಾ ಸಂಚಾಲಕಿ ಶೇಹೆನಾಜ್, ಆಯಿಷಾ ಶೈಮಾ, ಬೀಬಿ ಬತುಲ್ ರಿಯಾಜ್, ಹಮೀಮಾ ಮಸೂದ್ ರವರು ಸ್ವಚ್ಛತಾ ಕಾರ್ಯದಲ್ಲಿ ಕೈ ಜೋಡಿಸಿದರು.

