• Home  
  • ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Krishna costume competition at Sumedha Neelavara)
- ಸಾಂಸ್ಕೃತಿಕ - ಸೌಹಾರ್ಧ - ಸ್ಪರ್ಧೆ

ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Krishna costume competition at Sumedha Neelavara)

Share: ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ನೀಲಾವರದಲ್ಲಿ ಕೃಷ್ಣ ವೇಷ ಸ್ಪರ್ಧೆ (Udupi) ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ  ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ನಡೆದ ಸ್ಪರ್ಧೆ   (Udupi) ಉಡುಪಿ: ನೀಲಾವರದ ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ  ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಎರ್ಪಡಿಸಲಾಗಿದ್ದು ಎಲ್ಲಾ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.   ವಿಜೇತರಿಗೆ ಬಹುಮಾನವನ್ನು ವಿತರಿಸಿದ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ರೋ. ಹೇಮಂತ ಯು […]

  (Udupi) ಉಡುಪಿ: ನೀಲಾವರದ ಸುಮೇಧ ಪ್ರಜ್ಙಾ ವಿಕಾಸ ಕೇಂದ್ರ ದಲ್ಲಿ ರೋಟರಿ ಉಡುಪಿ ಪ್ರಾಯೋಜಕತ್ವದಲ್ಲಿ  ಅಲ್ಲಿನ ವಿಶೇಷ ಚೇತನ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ ಎರ್ಪಡಿಸಲಾಗಿದ್ದು ಎಲ್ಲಾ ಮಕ್ಕಳು ಭಾಗವಹಿಸಿ ಸಂಭ್ರಮಿಸಿದರು.

  ವಿಜೇತರಿಗೆ ಬಹುಮಾನವನ್ನು ವಿತರಿಸಿದ ರೋಟರಿ ವಲಯ ನಾಲ್ಕರ ಸಹಾಯಕ ಗವರ್ನರ್ ರೋ. ಹೇಮಂತ ಯು ಕಾಂತರವರು ಮಾತನಾಡಿ, ಇಂತಹ ಸ್ಪರ್ಧೆಯನ್ನು ಈ ವಿಶೇಷ ಚೇತನ ಮಕ್ಕಳಿಗೆ ಎರ್ಪಡಿಸಿದ ಬಗ್ಗೆ ರೋಟರಿ ಉಡುಪಿಯನ್ನು ಅಭಿನಂದಿಸಿ, ಮಕ್ಕಳ ಸೇವೆ ಶ್ರೀ ಕೃಷ್ಣನ ಸೇವೆ, ಅವರಲ್ಲಿ ಶ್ರೀ ಕೃಷ್ಣನನ್ನು ಕಾಣುವ ಇಂತಹ ಪ್ರದರ್ಶನಗಳು ಬಹಳ ಔಚಿತ್ಯಪೂರ್ಣ ಎಂದರು.

  ರೋಟರಿ ಅಧ್ಯಕ್ಷ ರೋ.ಗೋಪಾಲಕೃಷ್ಣ ಪ್ರಭು ಸ್ವಾಗತಿಸಿದರು. ಸುಮೇಧಾದ ಆಡಳಿತ ಮಂಡಳಿ ಕಾರ್ಯದರ್ಶಿ ರೋ. ಜನಾರ್ಧನ ಭಟ್‌ ವಂದಿಸಿದರು.   ರೋ.ರಾಮಚಂದ್ರ ಉಪಾಧ್ಯಾಯರು ಕಾರ್ಯಕ್ರಮ ನಿರೂಪಿಸಿದರು.  

 ಮಕ್ಕಳಿಗೆ ಬಹುಮಾನ ಮತ್ತು ಎಲ್ಲರಿಗೂ ಭೋಜನ ಪ್ರಾಯೋಜಿಸಿದ ರೋ. ಗುರುರಾಜ ಭಟ್ ಮತ್ತು ರೋ. ಶುಭಲಕ್ಷ್ಮಿ ಭಟ್ ರನ್ನು ಅಭಿನಂದಿಸಲಾಯಿತು.

  ತೀರ್ಪುಗಾರರಾಗಿ ರೋ. ಮಾಲತಿ ತಂತ್ರಿ ಮತ್ತು ರೋ. ವನಿತಾ ಉಪಾಧ್ಯಾಯರು ಸಹಕರಿಸಿದರು.

   ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಮನಾ ಪ್ರಭು, ಶ್ರೀಮತಿ ರೂಪಾ, ಕು. ಪ್ರೀತಿ ಮತ್ತು ಇತರ ಸಿಬ್ಬಂದಿಯರು ಈ ಪ್ರದರ್ಶನದ ವ್ಯವಸ್ಥೆಯಲ್ಲಿ ಸಹಕರಿಸಿದರು.

  ಕಾರ್ಯಕ್ರಮದಲ್ಲಿ ರೋಟರಿ ಸದಸ್ಯರಾದ ದಯಾನಂದ ಶೆಟ್ಟಿ, ಸೀತಾರಾಮ ತಂತ್ರಿ, ರಾಮಚಂದ್ರ ಆಚಾರ್ಯ, ಸಾಧನಾ ಮುಂಡ್ಕೂರ, ಮಕ್ಕಳ ಹೆತ್ತವರು ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.