• Home  
  • ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗೇಟ್ ಕುರಿತು ಉಪನ್ಯಾಸ (“GATE and Beyond”- an Awareness Session at SMVITM)
- ಶಾಲಾ ಕಾಲೇಜು

ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗೇಟ್ ಕುರಿತು ಉಪನ್ಯಾಸ (“GATE and Beyond”- an Awareness Session at SMVITM)

Share:   ಬಂಟಕಲ್‌ ತಾಂತ್ರಿಕ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಗೇಟ್ ಕುರಿತು ಉಪನ್ಯಾಸ ಸಂಪನ್ಮೂಲ ವ್ಯಕ್ತಿ ಫುಲ್ ಸ್ಟ್ಯಾಕ್‌ ಡೆವೆಲಪರ್ ಅಂಕಿತಾ ಆರ್ ಅವರಿಂದ ಮಾಹಿತಿ   (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ  ಸಹಪಠ್ಯ ಚಟುವಟಿಕಾ ಘಟಕವು ಶನಿವಾರ ಸ್ಪರ್ಧಾತ್ಮಕ ಪರೀಕ್ಷೆ “ಗೇಟ್” ಕುರಿತು  ಉಪನ್ಯಾಸವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು. IDYAITE Technology Solutions Pvt. Ltd  ಮಂಗಳೂರು ಇಲ್ಲಿನ  ಫುಲ್ ಸ್ಟ್ಯಾಕ್‌ ಡೆವೆಲಪರ್ ಆಗಿರುವ ಅಂಕಿತಾ ಆರ್ ಅವರು […]

  (Bantakal) ಬಂಟಕಲ್ : ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದ  ಸಹಪಠ್ಯ ಚಟುವಟಿಕಾ ಘಟಕವು ಶನಿವಾರ ಸ್ಪರ್ಧಾತ್ಮಕ ಪರೀಕ್ಷೆ “ಗೇಟ್” ಕುರಿತು  ಉಪನ್ಯಾಸವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿತ್ತು.

IDYAITE Technology Solutions Pvt. Ltd  ಮಂಗಳೂರು ಇಲ್ಲಿನ  ಫುಲ್ ಸ್ಟ್ಯಾಕ್‌ ಡೆವೆಲಪರ್ ಆಗಿರುವ ಅಂಕಿತಾ ಆರ್ ಅವರು ಸಂಪನ್ಮೂಲ  ವ್ಯಕ್ತಿಯಾಗಿ ಭಾಗವಹಿಸಿದ್ದರು.

  ಇವರು ಮಾತನಾಡಿ, ಗೇಟ್ ಪರೀಕ್ಷೆ ಸೇರಿದಂತೆ  ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಹತೆ, ಪರೀಕ್ಷಾ ಮಾದರಿ, ಪಠ್ಯಕ್ರಮ, ವೃತ್ತಿ ಅವಕಾಶಗಳು ಹಾಗೂ  ತಯಾರಿ ತಂತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

  ವ್ಯವಸ್ಥಿತ ತಯಾರಿ, ನಿಯಮಿತ  ಪುನರಾವಲೋಕನ, ಮಾಕ್ ಟೆಸ್ಟ್‌ ಗಳು ಹಾಗೂ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಪರಿಹರಿಸುವುದರ ಮಹತ್ವದ ಬಗ್ಗೆ ಮಾಹಿತಿಯನ್ನು ನೀಡಿ, ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಸರ್ಕಾರಿ ಸೇವೆಗಳಲ್ಲಿ ದೊರೆಯುವ ಅವಕಾಶಗಳ ಕುರಿತು ವಿವರಿಸಿದ ಅವರು ತಮ್ಮ ವೈಯಕ್ತಿಕ  ಅನುಭವವನ್ನು ಹಂಚಿಕೊಂಡರು.

   ಈ ಉಪನ್ಯಾಸವು ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಹಾಗೂ ವೃತ್ತಿಜೀವನದ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿಕೊಳ್ಳಲು ಪ್ರೇರಣೆ ನೀಡಿತು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು  ಆತ್ಮ ವಿಶ್ವಾಸದಿಂದ ಎದುರಿಸಲು ಸಹಾಯಕವಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.