ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ, ಪದ್ಮವಿಭೂಷಣ ಶ್ರೀ ವಿಶ್ವೇಶತೀರ್ಥ ಮಾರ್ಗ ಉದ್ಘಾಟನೆ
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ, 39 ನೇ ಚಾತುರ್ಮಾಸ್ಯದಲ್ಲಿ ಮಹತ್ವದ ಕೊಡುಗೆ
(New Dhelhi) ನವದೆಹಲಿ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು 39 ನೇ ಚಾತುರ್ಮಾಸ್ಯವನ್ನು ನವದೆಹಲಿಯಲ್ಲಿ ಕೈಗೊಂಡಿದ್ದು, ಮಹತ್ವದ ಕೊಡುಗೆ ಎಂಬಂತೆ ದೆಹಲಿ ಮಹಾನಗರ ಪಾಲಿಕೆ ಮತ್ತು ದೆಹಲಿ ಅಭಿವೃದ್ಧಿ ಪ್ರಾಧಿಕಾರ ವಸಂತ್ ಕುಂಜ್ ಪ್ರದೇಶದ ಬೃಹತ್ ಸರ್ಕಲ್ ಒಂದಕ್ಕೆ ಜಗದ್ಗುರು ಶ್ರೀ ಮಧ್ವಾಚಾರ್ಯ ವೃತ್ತ ಮತ್ತು ಆ ವೃತ್ತದಿಂದ ಸುಮಾರು ಎರಡು ಕಿ ಮೀ ಮುಖ್ಯ ರಸ್ತೆಗೆ ಪದ್ಮವಿಭೂಷಣ ಶ್ರೀ ವಿಶ್ವೇಶ ತೀರ್ಥ ಮಾರ್ಗ ಎಂದು ನಾಮಕರಣಗೊಳಿಸಿ ಗೌರವಿಸಿದೆ.
ಗುರುವಾರದಂದು ಸಂಜೆ ಪೇಜಾವರ ಸ್ವಾಮೀಜಿಯವರು ಈ ಎರಡನ್ನೂ ಉದ್ಘಾಟಿಸಿದರು.
ದೆಹಲಿ ಮೇಯರ್ ಪರ್ವೇಶ್ ವಾಹಿ, ಸ್ಥಳೀಯ ಶಾಸಕ ಕೈಲಾಶ್ ಗೆಹ್ಲೋಟ್, ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಾಜ್ ಬಬ್ಬರ್, ಸದಸ್ಯ ಇಂದ್ರಜಿತ್ ಸೆರಾವತ್, ವಾಸುದೇವ ಭಟ್ ಪೆರಂಪಳ್ಳಿ, ಡಾ ವಿಠೋಬಾಚಾರ್ಯ, ಕೃಷ್ಣಮೂರ್ತಿ ಭಟ್, ಅಶ್ವಿನ್ ಕುಮಾರ್ ಉಪಸ್ಥಿತರಿದ್ದರು.

