ಮಂಗಳೂರು ವಿಭಾಗ ನೈರುತ್ಯ ವಲಯಕ್ಕೆ ಸೇರ್ಪಡೆ: ಉಡುಪಿ ರೈಲ್ವೆ ಯಾತ್ರಿ ಸಂಘದಿಂದ ಸಂಸದರಿಗೆ ಅಭಿನಂದನೆ
ಮಂಗಳೂರು ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯವಲಯಕ್ಕೆ ಸೇರ್ಪಡೆ
(Udupi) ಉಡುಪಿ: ಕೋಟ ಶ್ರೀನಿವಾಸ ಪೂಜಾರಿಯವರು ಸಂಸದರಾದ ಬಳಿಕ ಕರಾವಳಿ ಭಾಗದ ರೈಲ್ವೆ ಸಂಚಾರ ಸಂಬಂಧಿತ ಅಭಿವೃದ್ಧಿಯು ತೀವ್ರ ಗತಿಯಿಂದ ಸಾಗುತ್ತಿದ್ದು, ಇತ್ತೀಚೆಗೆ ದಶಕಗಳ ಬೇಡಿಕೆಯಾಗಿದ್ದ ಮಂಗಳೂರು ವಿಭಾಗವು ಕೇರಳದ ಪಾಲಕ್ಕಾಡ್ ವಲಯದಿಂದ ನೈರುತ್ಯ ರೈಲ್ವೆಗೆ ಸೇರ್ಪಡೆಗೊಂಡಿರುತ್ತದೆ ಆಪ್ರಯುಕ್ತ ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ದೀರಜ್ ಎನ್ ಶಾಂತಿಯವರ ನೇತೃತ್ವದಲ್ಲಿ ಮಣಿಪಾಲ ಸಂಸದರ ಕಚೇರಿಯಲ್ಲಿ ಅವರನ್ನು ಅಭಿನಂದಿಸಲಾಯಿತು.
ಕೋಟರವರು ಸಂಸದರಾದ ಬಳಿಕ ಉಡುಪಿ ರೈಲ್ವೆ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಕ್ಷಿಪ್ರವಾಗಿ ನಡೆಯುತ್ತಿದೆ. ನಿಲ್ದಾಣದಲ್ಲಿ ರೈಲುಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಗೆ ಚಾಲನೆ ದೊರಕಿದೆ. ಇಂದ್ರಾಳಿ ರೈಲ್ವೆ ಸೇತುವೆ ಲೋಕಾರ್ಪಣೆ ಗೊಂಡಿದೆ. ಇವೆಲ್ಲ ಕಾರ್ಯಗಳನ್ನು ಗುರುತಿಸಿ ಅಭಿನಂದನೆ ಸಲ್ಲಿಸಲಾಯಿತು.
ಉಡುಪಿ ರೈಲ್ವೆ ಯಾತ್ರಿ ಸಂಘದ ಉಪಾಧ್ಯಕ್ಷ ಮಧುಸೂದನ್ ಹೇರೂರು, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ನಿರ್ದೇಶಕ ರವಿ ಪೂಜಾರಿ ಹಿರಿಯಡ್ಕ, ಸದಾನಂದ ಅಮೀನ್, ಶ್ರೀನಿವಾಸ್ ಶೆಟ್ಟಿ ತೊನ್ಸೆ, ಐವನ್ ಡಿಸೋಜ ಹಾಜರಿದ್ದರು.

