• Home  
  •   ಉಡುಪಿ: ರೈಲುಗಳಿಗೆ  ನೀರು ತುಂಬಿಸುವ ವ್ಯವಸ್ಥೆಗೆ  ಎರಡು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ: ಸಂಸದ ಕೋಟ (Udupi: ₹2 crore grant released for train water-filling system: MP Kota)
- ರಾಜಕೀಯ - ಸೌಹಾರ್ಧ

  ಉಡುಪಿ: ರೈಲುಗಳಿಗೆ  ನೀರು ತುಂಬಿಸುವ ವ್ಯವಸ್ಥೆಗೆ  ಎರಡು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ: ಸಂಸದ ಕೋಟ (Udupi: ₹2 crore grant released for train water-filling system: MP Kota)

Share:   ಉಡುಪಿ: ರೈಲುಗಳಿಗೆ  ನೀರು ತುಂಬಿಸುವ ವ್ಯವಸ್ಥೆಗೆ  ಎರಡು ಕೋಟಿ ರೂಪಾಯಿಗಳ ಅನುದಾನ ಬಿಡುಗಡೆ: ಸಂಸದ ಕೋಟ   ಮಣಿಪಾಲದ ಸಂಸದರ ಕಚೇರಿಯಲ್ಲಿ ಉಡುಪಿ ರೈಲ್ವೆ ಯಾತ್ರಿ ಸಂಘದ ಜೊತೆ ಸಮಾಲೋಚನೆ ಸಭೆ   (Udupi) ಉಡುಪಿ: ಉಡುಪಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಂತಹ ಪ್ರಮುಖ ವ್ಯವಸ್ಥೆಯಾದ ರೈಲುಗಳಿಗೆ ನೀರು ತುಂಬಿಸುವ ಸೌಲಭ್ಯತೆಗೆ ತಮ್ಮ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸದರಾದ  ಕೋಟ ಶ್ರೀನಿವಾಸ್ ಪೂಜಾರಿಯವರು ಮಾಹಿತಿ ನೀಡಿದರು. […]

(Udupi) ಉಡುಪಿ: ಉಡುಪಿ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸುವಂತಹ ಪ್ರಮುಖ ವ್ಯವಸ್ಥೆಯಾದ ರೈಲುಗಳಿಗೆ ನೀರು ತುಂಬಿಸುವ ಸೌಲಭ್ಯತೆಗೆ ತಮ್ಮ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ಎರಡು ಕೋಟಿ ರೂಪಾಯಿಗಳನ್ನು ಬಿಡುಗಡೆಗೊಳಿಸಿದೆ ಎಂದು ಸಂಸದರಾದ  ಕೋಟ ಶ್ರೀನಿವಾಸ್ ಪೂಜಾರಿಯವರು ಮಾಹಿತಿ ನೀಡಿದರು.

   ಅವರು ಮಣಿಪಾಲದ ಸಂಸದರ ಕಚೇರಿಯಲ್ಲಿ ಉಡುಪಿ ರೈಲ್ವೆ ಯಾತ್ರಿ ಸಂಘದ ಜೊತೆ ರೈಲ್ವೆ ಸಂಬಂಧಿತ ಸಮಸ್ಯೆಗಳು ಮತ್ತು ಸೌಲಭ್ಯತೆಗಳ ಬಗ್ಗೆ ಸಮಾಲೋಚನೆ ಸಭೆ ನಡೆಸಿದ ಸಂದರ್ಭದಲ್ಲಿ ಈ ಮಾಹಿತಿ ನೀಡಿದರು.

   ಉಡುಪಿಯು ಕರಾವಳಿಯ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ನಗರವಾಗಿದ್ದು ದೇಶದ ಹಲವಾರು ಭಾಗಗಳಿಗೆ ರೈಲುಗಳನ್ನು ಉಡುಪಿಯನ್ನು ಕೇಂದ್ರವಾಗಿರಿಸಿ ಓಡಿಸಲು ಈ ವ್ಯವಸ್ಥೆಯು ಅಳವಡಿಕೆ ಪ್ರಮುಖವಾಗಿ ನಾಂದಿ ಹಾಡಲಿದೆ ಎಂದು ಅವರು ಹೇಳಿದರು.

   ಈ ಸಂದರ್ಭದಲ್ಲಿ ರೈಲ್ವೆ ಯಾತ್ರಿ ಸಂಘವು ನಂದಿಕೂರು-ಮೂಡಿಗೆರೆ ಮಾರ್ಗವಾಗಿ ಬೆಂಗಳೂರಿಗೆ ನೂತನ ರೈಲ್ವೆ ಲೈನು, ಉಡುಪಿಯ ಜಾರ್ಜ್ ಫರ್ನಾಂಡಿಸ್ ರೈಲ್ವೆ ನಿಲ್ದಾಣ ರಸ್ತೆಯನ್ನು ಉಡುಪಿಯ ಕುಕ್ಕಿಕಟ್ಟೆಯವರೆಗೆ ವಿಸ್ತರಣೆ, ಉಡುಪಿ ರೈಲ್ವೆ ನಿಲ್ದಾಣದಿಂದ ಬೀಡಿನ ಗುಡ್ಡೆಗೆ ನೇರ ರಸ್ತೆ ಸಂಪರ್ಕ, ದಾದರ್ ನಿಂದ ವಸಾಯಿ ಮೂಲಕ ಮಂಗಳೂರಿಗೆ ಹೊಸ ರೈಲು, ಮಂಗಳೂರು ಮಡಗಾವ್ ಉಡುಪಿಯ ಮೂಲಕ ಸಾಗುವ ಬಿಜಾಪುರ ರೈಲನ್ನು ಗುಲ್ಬರ್ಗಕ್ಕೆ ವಿಸ್ತರಣೆ, ಕೊಯಮತ್ತೂರು ಮಂಗಳೂರು ಇಂಟರ್ ಸಿಟಿ ರೈಲನ್ನು ಕಾರವಾರಕ್ಕೆ ವಿಸ್ತರಣೆ, ಮಂಗಳೂರು ಮತ್ತು ಸಿಎಸ್‌ಟಿ ನಡುವೆ ಸಂಚರಿಸುವ ಮಂಗಳೂರು ಎಕ್ಸ್ ಪ್ರೆಸ್ ರೈಲುಗಳ ಭೋಗಿಗಳ ಸಂಖ್ಯೆಯನ್ನು 16 ರಿಂದ 22ಕ್ಕೆ ಏರಿಕೆ, ಉಡುಪಿಯ ಮೂಲಕ ಸಂಚರಿಸುವ ಅಂತರಾಜ್ಯ ರೈಲುಗಳಾದ ತುರಂತೋ ಮತ್ತು ಹಂ-ಸಪರ್ ಎಕ್ಸ್ಪ್ರೆಸ್ ರೈಲುಗಳ ಉಡುಪಿಯಲ್ಲಿ ನಿಲುಗಡೆ, ಉಡುಪಿ ರೈಲ್ವೆ ನಿಲ್ದಾಣದಲ್ಲಿ ಪಶ್ಚಿಮದಿಂದ ಪೂರ್ವ ದಿಕ್ಕಿಗೆ ಅಂಡರ್ ಪಾಸ್ ರಚನೆ, ಮಂಗಳೂರು-ಉಡುಪಿ-ಕುಂದಾಪುರ-ಬೈಂದೂರು ನಡುವೆ ಪ್ಯಾಸೆಂಜರ್ ರೈಲುಗಳ ಓಡಾಟ ಮುಂತಾದ ಪ್ರಮುಖ ಮನವಿಗಳನ್ನು ಸಲ್ಲಿಸಲಾಯಿತು.

ಹಾಗೆಯೇ ಉಡುಪಿ ರೈಲ್ವೆ ನಿಲ್ದಾಣದಲ್ಲಿ  ಮೂಲಭೂತ ಸೌಕರ್ಯಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ವಿಶೇಷ ಮನವಿಯನ್ನು ಕೂಡ ಸಲ್ಲಿಸಲಾಯಿತು.

  ಅಧ್ಯಕ್ಷರಾದ ಧೀರಜ್ ಎನ್ ಶಾಂತಿ, ಕಾರ್ಯದರ್ಶಿ ಮಂಜುನಾಥ್ ಮಣಿಪಾಲ, ನಿರ್ದೇಶಕರಾದ ತೊನ್ಸೆ ಶ್ರೀನಿವಾಸ ಶೆಟ್ಟಿ, ನಾರಾಯಣ್ ಕಾಂಚನ್ ಕೊಡವೂರು ಹಾಜರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.