• Home  
  • ಕೆಂಪವಾಡ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ಅಭಿಯಾನ (‘Mission Prakruti’ campaign at Kempawada School)
- ಶಾಲಾ ಕಾಲೇಜು

ಕೆಂಪವಾಡ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ಅಭಿಯಾನ (‘Mission Prakruti’ campaign at Kempawada School)

Share: ಕೆಂಪವಾಡ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ಅಭಿಯಾನ   ಪರಿಸರ ಕಾಳಜಿಗೆ ವಿದ್ಯಾರ್ಥಿಗಳ ಹಸಿರು ಸಂಪುಟ ಮಾದರಿ (Kagavada) ಕಾಗವಾಡ: ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ ಅಭಿಯಾನದಡಿಯಲ್ಲಿ ಪರಿಸರ ಜಾಗೃತಿಯ ವಿನೂತನ ಹಾಗೂ ಮಾದರಿ ಚಟುವಟಿಕೆಗಳು ಯಶಸ್ವಿಯಾಗಿ ಜರುಗುತ್ತಿವೆ. ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಪರಿಸರ ಪ್ರೇಮವನ್ನು ಮೈಗೂಡಿಸುವ ಸದುದ್ದೇಶದಿಂದ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ನಿರ್ದೇಶಕರನ್ನು ಹಾಗೂ ಸಂದರ್ಶನದ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿ ‘ಹಸಿರು […]

(Kagavada) ಕಾಗವಾಡ: ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಮಿಷನ್ ಪ್ರಕೃತಿ’ ಅಭಿಯಾನದಡಿಯಲ್ಲಿ ಪರಿಸರ ಜಾಗೃತಿಯ ವಿನೂತನ ಹಾಗೂ ಮಾದರಿ ಚಟುವಟಿಕೆಗಳು ಯಶಸ್ವಿಯಾಗಿ ಜರುಗುತ್ತಿವೆ. ಮಕ್ಕಳಲ್ಲಿ ನಾಯಕತ್ವ ಗುಣ ಹಾಗೂ ಪರಿಸರ ಪ್ರೇಮವನ್ನು ಮೈಗೂಡಿಸುವ ಸದುದ್ದೇಶದಿಂದ ಶಾಲೆಯಲ್ಲಿ ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ನಿರ್ದೇಶಕರನ್ನು ಹಾಗೂ ಸಂದರ್ಶನದ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಿ ‘ಹಸಿರು ಸಂಪುಟ’ರಚಿಸಲಾಗಿದೆ.

  ಶಾಲೆಯ ವಿದ್ಯಾರ್ಥಿಗಳನ್ನು ಒಟ್ಟು ಐದು ಪರಿಸರ ಸ್ನೇಹಿ ತಂಡಗಳಾಗಿ ವಿಂಗಡಿಸಲಾಗಿದ್ದು, ವಿವಿಧ ವಿಭಾಗಗಳ ಜವಾಬ್ದಾರಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:

1)ವಿದ್ಯಾರ್ಥಿ ನಾಯಕಿ: ಉತ್ಕರ್ಷ ಐಹೊಳೆ, 2) ಮೇಲ್ವಿಚಾರಣಾ ಗುಂಪು: ಡೇನಕ್ಕ ಘಾಳಿ, 3) ಕಮ್ಯುನಿಟಿ ಫಾರ್ ನೇಚರ್ ಗ್ರೂಪ್: ಶೋಭಿತ ನಾವಿ, 4) ಪ್ರಕೃತಿ ನಾಗರಿಕರ ಗುಂಪು: ಅಂಕಿತಾ ಹೇರವಾಡೆ, 5) ಹಸಿರು ಶಾಲಾ ಅಭ್ಯಾಸಗಳು ಗುಂಪು: ಸಮರ್ಥ ಶೇಮಡೆ.

‘ತಾಯಿಗಾಗಿ ಒಂದು ಮರ’ಅಭಿಯಾನದ ಅಂಗವಾಗಿ ಶಾಲಾ ಆವರಣದಲ್ಲಿ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರೊಂದಿಗೆ ‘ತಾಯಿಗಾಗಿ ಒಂದು ಮರ’ಪರಿಕಲ್ಪನೆಯಡಿ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ತಾಯಿಯ ನೆನಪಿಗಾಗಿ ಮನೆಯಂಗಳದಲ್ಲಿ ಗಿಡ ನೆಟ್ಟು, ಅದರ ಛಾಯಾಚಿತ್ರ ಹಂಚಿಕೊಳ್ಳುವ ಮೂಲಕ ಅಭಿಯಾನಕ್ಕೆ ವಿಶೇಷ ಮೆರಗು ನೀಡಿದ್ದಾರೆ.

  ಗ್ರಾಮದಲ್ಲಿ ಜಾಗೃತಿ ಜಾಥಾ ಪರಿಸರ ಸಂರಕ್ಷಣೆಯ ಮಹತ್ವ ಸಾರಲು ವಿದ್ಯಾರ್ಥಿಗಳಿಂದ ಗ್ರಾಮದಲ್ಲಿ ಬೃಹತ್ ಜಾಗೃತಿ ಜಾಥಾ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ಇಂಧನ ಉಳಿತಾಯ, ನೀರು ಪೋಲಾಗುವುದನ್ನು ತಡೆಗಟ್ಟುವುದು, ವಿದ್ಯುತ್ ಶಕ್ತಿ ಸಂರಕ್ಷಣೆ, ಜೈವಿಕ ಗೊಬ್ಬರ ತಯಾರಿಕೆ, ಕಸ ವಿಂಗಡಣೆ ಹಾಗೂ ಪರಿಸರ ಜಾಗೃತಿ ಪೋಸ್ಟರ್ ರಚನೆ ಸೇರಿದಂತೆ ಹಲವು ರಚನಾತ್ಮಕ ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಶಾಲೆಯ ‘ಮಿಷನ್ ಪ್ರಕೃತಿ’ನೋಡಲ್ ಅಧಿಕಾರಿಯಾದ ವಿಜ್ಞಾನ ಶಿಕ್ಷಕ ಮಹಾದೇವ ಗಸ್ತಿ ಅವರ ಮಾರ್ಗದರ್ಶನದಲ್ಲಿ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಗ್ರಾಮಸ್ಥರ ಸಕ್ರಿಯ ಸಹಕಾರದೊಂದಿಗೆ ಕೆಂಪವಾಡ ಸರಕಾರಿ ಶಾಲೆಯು ಪರಿಸರ ಸಂರಕ್ಷಣೆಯಲ್ಲಿ ಗಮನಾರ್ಹ ಸಾಧನೆ ಮಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.