• Home  
  •   ಧರ್ಮಸ್ಥಳ ಗ್ರಾ. ಯೋಜನೆಯ ಕಾಪು ಯೋಜನಾ ಕಚೇರಿಯಲ್ಲಿ ನವರಾತ್ರಿ, ಆಯುಧ ಪೂಜೆ (Navaratri and Ayudha Puja at the Kapu Project Office of the Dharmasthala Rural Development Project)
- ಧಾರ್ಮಿಕ

  ಧರ್ಮಸ್ಥಳ ಗ್ರಾ. ಯೋಜನೆಯ ಕಾಪು ಯೋಜನಾ ಕಚೇರಿಯಲ್ಲಿ ನವರಾತ್ರಿ, ಆಯುಧ ಪೂಜೆ (Navaratri and Ayudha Puja at the Kapu Project Office of the Dharmasthala Rural Development Project)

Share:   ಧರ್ಮಸ್ಥಳ ಗ್ರಾ. ಯೋಜನೆಯ ಕಾಪು ಯೋಜನಾ ಕಚೇರಿಯಲ್ಲಿ ನವರಾತ್ರಿ, ಆಯುಧ ಪೂಜೆ     ಕಚೇರಿಯಲ್ಲಿ ನೆರವೇರಿದ ಪೂಜಾ ವಿಧಿವಿಧಾನ, ಭಜನಾ ಕಾರ್ಯಕ್ರಮ (Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾಪು ಯೋಜನಾ ಕಚೇರಿಯಲ್ಲಿ ನವರಾತ್ರಿ ಹಾಗೂ ಆಯುಧ ಪೂಜೆ ನೆರವೇರಿತು.      ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ನವೀನ್ ಅಮೀನ್ ಅಮೀನ್‌ ಶಂಕರಪುರ, ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಹಾಗೂ ಪಡುಬಿದ್ರಿ ವಲಯಾಧ್ಯಕ್ಷ ಭುಜಂಗ […]

(Kaup) ಕಾಪು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾಪು ಯೋಜನಾ ಕಚೇರಿಯಲ್ಲಿ ನವರಾತ್ರಿ ಹಾಗೂ ಆಯುಧ ಪೂಜೆ ನೆರವೇರಿತು.  

   ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ನವೀನ್ ಅಮೀನ್ ಅಮೀನ್‌ ಶಂಕರಪುರ, ಕಾಪು ತಾಲೂಕು ಯೋಜನಾಧಿಕಾರಿ ಶ್ರೀಮತಿ ಮಮತಾ ಶೆಟ್ಟಿ ಹಾಗೂ ಪಡುಬಿದ್ರಿ ವಲಯಾಧ್ಯಕ್ಷ ಭುಜಂಗ ಆಚಾರ್ಯ ಉದ್ಘಾಟಿಸಿದರು.

  ನವರಾತ್ರಿ ಹಾಗೂ ಆಯುಧ ಪೂಜೆಯ ಅಂಗವಾಗಿ ಕಚೇರಿಯಲ್ಲಿ ಪೂಜಾ ವಿಧಿವಿಧಾನ ಮತ್ತು ಭಜನಾ ಕಾರ್ಯಕ್ರಮ ಜರಗಿತು.

   ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸತ್ಯೇಂದ್ರ ಪೈ, ಕಾಪು ಶ್ರೀ ಹೊಸ ಮಾರಿಗುಡಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಡಿಕೆರೆ ರತ್ನಾಕರ ಶೆಟ್ಟಿ, ಕೇಂದ್ರ ಸಮಿತಿ ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಕಾಪು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಅರುಣ್ ಶೆಟ್ಟಿ ಪಾದೂರು, ರವಿರಾಜ್ ಶೆಟ್ಟಿ, ಶೇಖರ್ ಬೋಳ, ಕಚೇರಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.