• Home  
  • ಉಡುಪಿ ಉಚ್ಚಿಲ ದಸರಾ : ಅಬ್ಬರದ ಪಿಲಿ ಪಂಥ – ಪುರುಷರ ಹುಲಿವೇಷ ಸ್ಪರ್ಧೆ ‌(Udupi Uchila Dussehra: The flamboyant Pili sect – men’s tiger costume competition)
- ಸಾಂಸ್ಕೃತಿಕ - ಸೌಹಾರ್ಧ - ಸ್ಪರ್ಧೆ

ಉಡುಪಿ ಉಚ್ಚಿಲ ದಸರಾ : ಅಬ್ಬರದ ಪಿಲಿ ಪಂಥ – ಪುರುಷರ ಹುಲಿವೇಷ ಸ್ಪರ್ಧೆ ‌(Udupi Uchila Dussehra: The flamboyant Pili sect – men’s tiger costume competition)

Share: ಉಡುಪಿ ಉಚ್ಚಿಲ ದಸರಾ : ಅಬ್ಬರದ ಪಿಲಿ ಪಂಥ – ಪುರುಷರ ಹುಲಿವೇಷ ಸ್ಪರ್ಧೆ   ಸಾಮೂಹಿಕ ಕುಣಿತ ಭಜನೆ ಉದ್ಘಾಟಿಸಿದ ನಾಡೋಜ ಡಾ. ಜಿ ಶಂಕರ್ (Photo credit : Sachin Uchila) (Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಹ್ವಾನಿತ ತಂಡಗಳ ‘’ಅಬ್ಬರದ ಪಿಲಿ ಪಂಥ […]

(Uchila) ಉಚ್ಚಿಲ : ದ.ಕ. ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಕ್ಷೇತ್ರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಐದನೇ ವರ್ಷದ ಉಡುಪಿ ಉಚ್ಚಿಲ ದಸರಾದಲ್ಲಿ ಭಾನುವಾರ ಶ್ರೀ ಮಹಾಲಕ್ಷ್ಮಿ ಸೇವಾ ಪ್ರತಿಷ್ಠಾನದ ವತಿಯಿಂದ ಆಹ್ವಾನಿತ ತಂಡಗಳ ‘’ಅಬ್ಬರದ ಪಿಲಿ ಪಂಥ 2026 ಸೀಸನ್ 1″ ಪುರುಷರ ಹುಲಿವೇಷ ಸ್ಪರ್ಧೆ ಮತ್ತು ರಥಬೀದಿಯ ಸುತ್ತ ಆಹ್ವಾನಿತ ತಂಡದವರಿಂದ ಏಕಕಾಲದಲ್ಲಿ ಸಾಮೂಹಿಕ ಕುಣಿತ ಭಜನೆಯನ್ನು ದ.ಕ. ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ನಾಡೋಜ ಡಾ. ಜಿ.ಶಂಕರ್ ಉದ್ಘಾಟಿಸಿದರು.

  ಈ ಸಂದರ್ಭ ಪಿಲಿ ಪಂಥದ ನೇತೃತ್ವ ವಹಿಸಿರುವ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾಸ್ ವಿ ಅಮೀನ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಜಯ ಕೋಟ್ಯಾನ್ ಬೆಳ್ಳಂಪಳ್ಳಿ, ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಉಡುಪಿ ಉಚ್ಚಿಲ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ವಿನಯ್ ಕರ್ಕೇರ, ಚಿತ್ರನಟಿ ಚಿರಶ್ರೀ ಅಂಚನ್, ಸಂಧ್ಯಾದೀಪ ಸುನೀಲ್, ಸುಗುಣ ಕರ್ಕೇರ, ಮನೋಜ್ ಕಾಂಚನ್, ರಚನ್ ಸಾಲ್ಯಾನ್ ಉಪಸ್ಥಿತರಿದ್ದರು.

   ಎಂಟನೇ ದಿನವಾದ ಭಾನುವಾರದಂದು ಬೆಳಿಗ್ಗೆ ಉದಯಪೂಜೆ, ನಿತ್ಯ ಚಂಡಿಕಾ ಹೋಮ, ಮಧ್ಯಾಹ್ನ ನವದುರ್ಗೆಯರಿಗೆ ಮಹಾಮಂಗಳಾರತಿ, ಮಹಾಪೂಜೆ, ಅನ್ನಸಂತರ್ಪಣೆ ಜರಗಿತು. ಸಂಜೆ ಪ್ರಸಾದ ವಿತರಣೆ, ನವದುರ್ಗೆಯರಿಗೆ ರಾತ್ರಿ ಮಹಾಪೂಜೆ, ಶ್ರೀ ಸರಸ್ವತೀ ಕಲ್ಪೋಕ್ತ ಪೂಜೆ ಜರಗಿತು.

ಜೊತೆಗೆ ಭಜನಾ ಸಂಕೀರ್ತನೆ, ಸಂಜೆ ಧಾರ್ಮಿಕ ಪ್ರವಚನ, ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ ನೆರವೇರಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.