• Home  
  • ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ (Immersion of the clay idol of Bala Ganapati at the Bala Ganapati Kshetra in Padubidri)
- ಧಾರ್ಮಿಕ

ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ (Immersion of the clay idol of Bala Ganapati at the Bala Ganapati Kshetra in Padubidri)

Share: ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೃಣ್ಮಯ ಮೂರ್ತಿ ವಿಸರ್ಜನೆ ಗಣೇಶ ಚತುರ್ಥಿಯಂದು ಪ್ರತಿಷ್ಠಾಪನೆಗೊಂಡು ವಿಜಯದಶಮಿಯಂದು ಜಲಸ್ತಂಭನ photo credit : ravi digitals, padubidri. (Padubidri) ಪಡುಬಿದ್ರಿ : ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯು ಬುಧವಾರ ಸಂಪನ್ನಗೊಂಡಿದ್ದು, ಪಡುಬಿದ್ರಿ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು.   ಪಡುಬಿದ್ರಿ ಬಾಲಗಣಪತಿ ದೇಗುಲದಲ್ಲಿ ಮೃಣ್ಮಯ ಮೂರ್ತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟು ವಿಜಯದಶಮಿಯಂದು ಜಲಸ್ತಂಭನವಾಗುತ್ತದೆ.   ಬಾಲಗಣಪತಿ ಕ್ಷೇತ್ರವು ಈ ಸಂದರ್ಭದಲ್ಲಿ […]

(Padubidri) ಪಡುಬಿದ್ರಿ : ಮಕ್ಕಳಿಂದಲೇ ನಿರ್ಮಿತವಾದ ಕ್ಷೇತ್ರವೆಂಬ ಪ್ರತೀತಿಯಿರುವ ಪಡುಬಿದ್ರಿ ಬಾಲ ಗಣಪತಿ ಕ್ಷೇತ್ರದ ಬಾಲಗಣಪತಿಯ ಮೂರ್ತಿ ವಿಸರ್ಜನಾ ಶೋಭಾಯಾತ್ರೆಯು ಬುಧವಾರ ಸಂಪನ್ನಗೊಂಡಿದ್ದು, ಪಡುಬಿದ್ರಿ ಸಮುದ್ರದಲ್ಲಿ ಜಲಸ್ಥಂಭನಗೊಂಡಿತು. 

 ಪಡುಬಿದ್ರಿ ಬಾಲಗಣಪತಿ ದೇಗುಲದಲ್ಲಿ ಮೃಣ್ಮಯ ಮೂರ್ತಿಯು ಗಣೇಶ ಚತುರ್ಥಿಯಂದು ಪ್ರತಿಷ್ಠಾಪಿಸಲ್ಪಟ್ಟು ವಿಜಯದಶಮಿಯಂದು ಜಲಸ್ತಂಭನವಾಗುತ್ತದೆ.

  ಬಾಲಗಣಪತಿ ಕ್ಷೇತ್ರವು ಈ ಸಂದರ್ಭದಲ್ಲಿ ಮಾತ್ರ ಸಾರ್ವಜನಿಕರಿಗೆ ತೆರೆದಿರುತ್ತದೆ.  ಪ್ರತಿದಿನ ಸುಮಾರು 3 ಗಂಟೆಯ ಬಳಿಕ ಪೂಜಾ ವಿಧಿವಿಧಾನಗಳು ಜರಗಿ ಮಹಾ ಮಂಗಳಾರತಿಯೊಂದಿಗೆ ಸಂಪನ್ನಗೊಳ್ಳುತ್ತದೆ. ಭಕ್ತರ ಹರಕೆಯಾಗಿ ರಂಗಪೂಜೆಯು ಇಲ್ಲಿನ ವಿಶೇಷತೆಯಾಗಿದೆ.

  ಶೋಭಾಯಾತ್ರೆಯಲ್ಲಿ ಭಜನಾ ತಂಡ, ವಿವಿಧ ವೇಷಗಳು, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ಹುಲಿ ವೇಷ ತಂಡವು ಪಲ್ಲಕ್ಕಿಯಲ್ಲಿ ಹೊತ್ತ ಬಾಲಗಣಪತಿಯ ಮೂರ್ತಿಯೊಂದಿಗೆ ಸಾಗಿತು.

ಈ ಸಂದರ್ಭ ಅರ್ಚಕ ಗಣಪತಿ ಭಟ್‌ ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.