• Home  
  •  ಕಟಪಾಡಿ: ಗರೋಡಿ ಪೂ-ಪೂಜನೆಯವರು, ದರ್ಶನ ಪೂಜಾರಿಗಳು, ಗುರಿಕಾರರ ಸಮಾವೇಶ- ಸಮ್ಮಾನ (Katapadi: Gathering and Felicitation of Garodi Ritual Performers, Darshana Pujaris, and Gurikaras)
- ಸನ್ಮಾನ, ಅಭಿನಂದನೆ - ಸಹಾಯ ಹಸ್ತ - ಸಾಂಸ್ಕೃತಿಕ

 ಕಟಪಾಡಿ: ಗರೋಡಿ ಪೂ-ಪೂಜನೆಯವರು, ದರ್ಶನ ಪೂಜಾರಿಗಳು, ಗುರಿಕಾರರ ಸಮಾವೇಶ- ಸಮ್ಮಾನ (Katapadi: Gathering and Felicitation of Garodi Ritual Performers, Darshana Pujaris, and Gurikaras)

Share: ಕಟಪಾಡಿ: ಗರೋಡಿ ಪೂ-ಪೂಜನೆಯವರು, ದರ್ಶನ ಪೂಜಾರಿಗಳು, ಗುರಿಕಾರರ ಸಮಾವೇಶ- ಸಮ್ಮಾನ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ (Kaup) ಕಾಪು : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೈದಶ್ರೀ ಆದಿಉಡುಪಿ ವತಿಯಿಂದ ಕಾಪು ತಾಲೂಕಿನ ಗರೋಡಿಗಳ ಪೂ ಪೂಜನೆಯವರು, ಬೈದರ್ಕಳ ದರ್ಶನದ ಪೂಜಾರಿಯವರು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ, ಸಮಾಲೋಚನೆ ಹಾಗೂ ಸನ್ಮಾನ ಸಮಾರಂಭ ಭಾನುವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಜರಗಿತು.   ಕಾರ್ಯಕ್ರಮವನ್ನು […]

(Kaup) ಕಾಪು : ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರ ಬೈದಶ್ರೀ ಆದಿಉಡುಪಿ ವತಿಯಿಂದ ಕಾಪು ತಾಲೂಕಿನ ಗರೋಡಿಗಳ ಪೂ ಪೂಜನೆಯವರು, ಬೈದರ್ಕಳ ದರ್ಶನದ ಪೂಜಾರಿಯವರು ಹಾಗೂ ಕೂಡುಕಟ್ಟಿನ ಗುರಿಕಾರರ ಸಮಾವೇಶ, ಸಮಾಲೋಚನೆ ಹಾಗೂ ಸನ್ಮಾನ ಸಮಾರಂಭ ಭಾನುವಾರ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಂಗಣದಲ್ಲಿ ಜರಗಿತು.

  ಕಾರ್ಯಕ್ರಮವನ್ನು ಮಾಜಿ ಸಚಿವ ವಿನಯ ಕುಮಾರ್ ‌ಸೊರಕೆ ಉದ್ಘಾಟಿಸಿದರು.

ಅವರು ಮಾತನಾಡಿ, ಗರಡಿಗಳ ಚಾಕರಿ ವರ್ಗದವರಿಗೆ ಆತ್ಮವಿಶ್ವಾಸ ತುಂಬುವ ಕಾರ್ಯ ಅಧ್ಯಯನ ಕೇಂದ್ರದಿಂದ ಆಗಿದೆ. ಗರಡಿಗಳ ಭೇಟಿಯ ಆಶೀರ್ವಾದದ ಫಲವಾಗಿ ನಾನು ರಾಜಕೀಯದ ಭಾಗ್ಯ ಪಡೆದೆ. ನಮ್ಮ ಸಮಾಜವನ್ನು ನಾವು ಗೌರವಿಸುವುದು ನಮ್ಮ ಕರ್ತವ್ಯ. ದೇವಸ್ಥಾನದಂತೆ ಗರಡಿ ಚಾಕರಿವರ್ಗದವರಿಗೂ ತಸ್ತೀಕು ವ್ಯವಸ್ಥೆ ಆಗಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಇದನ್ನು ಸರಕಾರಕ್ಕೆ ತಿಳಿಸಲಾಗುವುದು. ನಾವೂ ಸರಕಾರದಿಂದ ಬೇಡಿಕೆ ಈಡೇರಿಕೆಗಾಗಿ ಶ್ರಮಿಸಬೇಕಿದೆ. ತುಳು ಭಾಷೆ ನಂಬಿಕೆಯ ಜೊತೆಗೆ ಕೋಟಿ ಚೆನ್ನಯರ ಆರಾಧನೆಗೂ ಜಗತ್ತಿನಲ್ಲಿಯೇ ಮಾನ್ಯತೆ ದೊರಕಿದೆ. ಬ್ರಹ್ಮಶ್ರೀ ನಾರಾಯಣಗುರು ಮತ್ತು ಕೋಟಿ ಚೆನ್ನಯರ ಶಕ್ತಿ ಬಿಲ್ಲವ ಸಮಾಜಲ್ಲಿದೆ. ಸಮಾಜದಿಂದಲೇ ಕೆಲವೊಮ್ಮೆ ರಾಜಕೀಯದ ಸ್ಥಾನ ಕಳೆದುಕೊಳ್ಳುವ ಭೀತಿಯೂ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

 ಸನ್ಮಾನ : ಕಾಪು ತಾಲೂಕಿನ 24 ಗರೋಡಿಗಳ ಸುಮಾರು 100 ಕ್ಕೂ ಅಧಿಕ ಪೂ ಪೂಜನೆಯವರು, ಬೈದೆರ್ಲೆ ದರ್ಶನದ ಪೂಜಾರಿಯವರು ಹಾಗೂ ಕೂಡುಕಟ್ಟಿನ ಗುರಿಕಾರರನ್ನು  ಸನ್ಮಾನಿಸಲಾಯಿತು.

 ಸಂಪನ್ಮೂಲ ವ್ಯಕ್ತಿಗಳಾಗಿ ಬಂಟ್ವಾಳ ಸಂಚಯಗಿರಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ್ ಪೂಜಾರಿ, ಪಾಂಗಾಳಗುಡ್ಡೆ ಗರಡಿ ಮನೆ ಸುಧಾಕರ್‌ ಡಿ. ಅಮೀನ್, ಸಾನದ ಪೂಜಾರಿ ಹರೀಶ್ಚಂದ್ರ ಪೂಜಾರಿ ಮತ್ತು ಸಾಂತೂರು ಶ್ರೀ ಕೋಟಿ ಚೆನ್ನಯ ಫೌಂಡೇಶನ್ ಅಧ್ಯಕ್ಷ ರಾಜಶೇಖರ್‌ ಕೋಟ್ಯಾನ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್ ಮಾತನಾಡಿದರು.

  ಕೋಟಿ ಚೆನ್ನಯರ ಪಾಡ್ದನ ಆಧಾರಿತ ಮಹಿಮೆದ ಬಾಲೆಲು ನಾಟಕದ ಲೋಗೋ ಬಿಡುಗಡೆ ನಡೆಯಿತು.

  ಶ್ರೀ ಬ್ರಹ್ಮಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಅಧ್ಯಕ್ಷ ಸೂರ್ಯೋದಯ ಪೆರಂಪಳ್ಳಿ ಅಧ್ಯಕ್ಷತೆ ವಹಿಸಿದ್ದರು.

  ಕಾರ್ಯಕ್ರಮದ ಪ್ರಾಯೋಜಕರು, ಉದ್ಯಮಿಗಳಾದ ಹರೀಶ್ ಪೂಜಾರಿ ಕುಕ್ಕೆಹಳ್ಳಿ ಒಳಮಿಡಿ, ಕಿಶೋರ್‌ ಪೂಜಾರಿ ಕನ್ನರ್ಪಾಡಿ,  ಎಸ್‌.ಕೆ. ಸಾಲ್ಯಾನ್ ಅತಿಥಿಗಳಾಗಿ ಭಾಗವಹಿಸಿದ್ದರು.

  ಅಧ್ಯಯನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಹರೀಶ್ ಎಮ್‌. ಕೆ‌. ಕಲ್ಮಾಡಿ ಸ್ವಾಗತಿಸಿದರು. ಗೌರವಾಧ್ಯಕ್ಷ ದಾಮೋದರ ಕಲ್ಮಾಡಿ ಪ್ರಸ್ತಾವನೆಗೈದರು. ವಿಶ್ವಸ್ಥ ವಿಶ್ವನಾಥ ಕಲ್ಮಾಡಿ ವಂದಿಸಿದರು. ವಿಜೇಶ್ ಬಂಗೇರ, ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.