• Home  
  • ಅಪಘಾತ, ಅನಾರೋಗ್ಯದಿಂದಿರುವವರ ಆಪತ್ಭಾಂಧವ  ಕೆ. ಆರ್ ಪಾಟ್ಕರ್ ಬಂಟಕಲ್ಲು (A savior for those facing accidents or illness KR Pathkar, Bantakal)
- ಸಹಾಯ ಹಸ್ತ - ಸೌಹಾರ್ಧ

ಅಪಘಾತ, ಅನಾರೋಗ್ಯದಿಂದಿರುವವರ ಆಪತ್ಭಾಂಧವ  ಕೆ. ಆರ್ ಪಾಟ್ಕರ್ ಬಂಟಕಲ್ಲು (A savior for those facing accidents or illness KR Pathkar, Bantakal)

Share: ಅಪಘಾತ, ಅನಾರೋಗ್ಯದಿಂದಿರುವವರ ಆಪತ್ಭಾಂಧವ  ಕೆ. ಆರ್ ಪಾಟ್ಕರ್ ಬಂಟಕಲ್ಲು   ಗರಿಷ್ಟ ಮೂರು ತಿಂಗಳ ಅವಧಿಗೆ ಉಪಯೋಗಿಸಲು ನೀಡುತ್ತಿದ್ದು, ಯಾವುದೇ  ಶುಲ್ಕವನ್ನು ಪಡೆಯುತ್ತಿಲ್ಲ. (Shirva) ಶಿರ್ವ: ಅಪಘಾತ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ನಡೆದಾಡಲು ಕಷ್ಟವಾಗುವವರಿಗೆ ಮೆಡಿಕಲ್ ಇಕ್ವಿಪ್ ಮೆಂಟ್ಸ್ ಗಳನ್ನು ಸ್ವಲ್ಪ ಕಾಲದ ಉಪಯೋಗಕ್ಕೆ ಉಚಿತವಾಗಿ ಒಂದು ಸಣ್ಣ ಸಹಾಯ ಎಂಬ ಪರಿಕಲ್ಪನೆಯಲ್ಲಿ ನೀಡುತ್ತಿರುವವರು ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಬಂಟಕಲ್ಲುರವರು.   ಬೇರೆ ಬೇರೆ ಸಂಘ ಸಂಸ್ಥೆಗಳ […]

(Shirva) ಶಿರ್ವ: ಅಪಘಾತ, ಅನಾರೋಗ್ಯ ಅಥವಾ ಇತರ ಕಾರಣಗಳಿಂದ ನಡೆದಾಡಲು ಕಷ್ಟವಾಗುವವರಿಗೆ ಮೆಡಿಕಲ್ ಇಕ್ವಿಪ್ ಮೆಂಟ್ಸ್ ಗಳನ್ನು ಸ್ವಲ್ಪ ಕಾಲದ ಉಪಯೋಗಕ್ಕೆ ಉಚಿತವಾಗಿ ಒಂದು ಸಣ್ಣ ಸಹಾಯ ಎಂಬ ಪರಿಕಲ್ಪನೆಯಲ್ಲಿ ನೀಡುತ್ತಿರುವವರು ಶಿರ್ವ ಗ್ರಾ. ಪಂ ಮಾಜಿ ಅಧ್ಯಕ್ಷ ಕೆ. ಆರ್ ಪಾಟ್ಕರ್ ಬಂಟಕಲ್ಲುರವರು.

  ಬೇರೆ ಬೇರೆ ಸಂಘ ಸಂಸ್ಥೆಗಳ ಸಮಾಜಮುಖಿ ಚಿಂತನೆಯೊಂದಿಗೆ ಸಮಾಜಕ್ಕೆ ಸಹಕಾರಿಯಾಗುವ ಇವರ ಹೊಸ ಪರಿಕಲ್ಪನೆಯೇ  ಒಂದು ಸಣ್ಣ ಸಹಾಯ. ಯಾರಾದರೂ ಅಪಘಾತಗಳಲ್ಲಿ ಗಾಯಗೊಂಡವರು, ಶಸ್ತ್ರಚಿಕಿತ್ಸೆಗೆ ಒಳಗಾದವರು, ಅಥವಾ ಅಲ್ಪಕಾಲದ ಅನಾರೋಗ್ಯದಿಂದಿರುವವರಿಗೆ ಮನೆಯಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಾಸ್ಪಿಟಲ್ ಬೆಡ್, ವ್ಹೀಲ್ ಚಯರ್,  ಕೊಮಡೊ ಚಯರ್, ವಾಕಿಂಗ್ ಸ್ಟಿಕ್ & ಸಿಂಗಲ್ ಸ್ಟಿಕ್, ವಾಕರ್, ವಾಟರ್ ಬೆಡ್ ಇತ್ಯಾದಿ ಗಳನ್ನು ಉಚಿತವಾಗಿ ನೀಡುತ್ತಾರೆ.

  ಗರಿಷ್ಟ ಎರಡರಿಂದ ಮೂರು ತಿಂಗಳ ಅವಧಿಗೆ ಉಪಯೋಗಿಸಲು ನೀಡುವ ಇವರು ಇದಕ್ಕೆ ಯಾವುದೇ ಶುಲ್ಕವನ್ನು ಪಡೆಯುವುದಿಲ್ಲ. 

 ಬಳಕೆಯ ಬಳಿಕ ಅದನ್ನು ಹಿಂದಕ್ಕೆ ನೀಡಬೇಕು. ಮಾತ್ರವಲ್ಲದೆ ಪಡಕೊಂಡ ಸಾಮಾಗ್ರಿಗಳನ್ನು ಸುಸ್ಥಿತಿಯಲ್ಲಿಟ್ಟು, ಸ್ವಚ್ಚವಾಗಿರಿಸುವುದು ಅದನ್ನು ಬಳಸಿದವರ ಜವಾಬ್ದಾರಿಯಾಗಿದೆ.

  ಇದು ಸಮಾಜಸೇವೆಯಲ್ಲ ಮಾನವೀಯತೆಯ ಒಂದು ಸಣ್ಣ ಸಹಾಯ ಅಷ್ಟೇ ಎನ್ನುತ್ತಾರೆ ಕೆ. ಆರ್ ಪಾಟ್ಕರ್. ಅವರ ಈ ಒಂದು ಸಣ್ಣ ಸಹಾಯ ಪರಿಕಲ್ಪನೆಗೆ ಅವರ ಸ್ನೇಹಿತರು ಸಹಕಾರಿಯಾಗುತ್ತಾರೆ. ರಂಜಿತ್ ಪ್ರಕಾಶ್ ಬರ್ಬೋಜಾ ಇಸ್ರೇಲ್, ವೀರೇಂದ್ರ ಶೆಟ್ಟಿ ಪಂಜಿಮಾರು,  ರೊನಾಲ್ಡ್ ಡಿಸೋಜಾ ಕುವೈಟ್, ಶಿರ್ವ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತ, ಲಯನ್ಸ್ ಕ್ಲಬ್ ಬಂಟಕಲ್ಲು ಜಾಸ್ಮಿನ್  ಇವರ ಸಹಕಾರ ಸ್ಮರಿಸುತ್ತಾರೆ.

ಸ್ಥಳೀಯರಿಗೆ ಮೊದಲ ಆದ್ಯತೆ ಇದ್ದು, ಅವಶ್ಯಕತೆ ಇದ್ದರೆ ಕರೆ ಮಾಡಿ ಕೊಂಡುಹೋಗಬಹುದಾಗಿದೆ. ಇನ್ನು ಯಾರ ಮನೆಯಲ್ಲಾದರೂ ಸ್ವಲ್ಪಕಾಲ ಉಪಯೋಗಿಸಿ, ಪ್ರಸ್ತುತ ಅಗತ್ಯವಿಲ್ಲದೆ ಮನೆಯಲ್ಲಿದ್ದರೆ, ಬಳಕೆಗೆ ಯೋಗ್ಯವಾಗಿರುವ ಈ ಮೇಲಿನ ಮೆಡಿಕಲ್ ಸಾಮಾಗ್ರಿಗಳಿದ್ದರೆ ಅವರಿಗೆ ನೀಡಬಹುದು. ಇದನ್ನು ಅವರು ಖರೀದಿಸುತ್ತಾರೆ. ಈಗಿರುವ ಬೆಡ್ ಗಳು, ವಾಕರ್,ವ್ಹೀಲ್ ಚಯರ್ ಗಳು ಹೊಸದಾಗಿ ಖರೀದಿಸಿದ್ದಾಗಿದೆ.

 ಸಂಪರ್ಕಿಸಿ : ಕೆ. ಆರ್ ಪಾಟ್ಕರ್ ಬಂಟಕಲ್ಲು .ಮೊಬೈಲ್ ಸಂಖ್ಯೆ : 9880724512.

Leave a comment

Your email address will not be published. Required fields are marked *

eMedia Kannada  @2025. All Rights Reserved.