• Home  
  • ಕೂಡ್ಲಿಗಿ :  ಭಾರೀ ಶಬ್ದದದ ಪಟಾಕಿ ಶಬ್ಧದಿಂದ ಪ್ರಾಣ ತೆತ್ತ ಪಕ್ಷಿಗಳು (Kudligi: Birds die due to the sound of loud firecrackers.)
- PROBLEMS

ಕೂಡ್ಲಿಗಿ :  ಭಾರೀ ಶಬ್ದದದ ಪಟಾಕಿ ಶಬ್ಧದಿಂದ ಪ್ರಾಣ ತೆತ್ತ ಪಕ್ಷಿಗಳು (Kudligi: Birds die due to the sound of loud firecrackers.)

Share: ಕೂಡ್ಲಿಗಿ : ಭಾರೀ ಶಬ್ದದದ ಪಟಾಕಿ ಶಬ್ಧದಿಂದ ಪ್ರಾಣ ತೆತ್ತ ಪಕ್ಷಿಗಳು ಭಾರೀ ಶಬ್ದದ ಪಟಾಕಿ ನಿಷೇಧಿಸುವಂತೆ ವಿವಿಧ ಸಂಘಟನೆಗಳ ಆಗ್ರಹ   (Koodligi) ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ಹಲವೆಡೆಗಳಲ್ಲಿ, ಭಾರೀ ಶಬ್ದದ   ಪಟಾಕಿಗಳ ಭರಾಟೆಗೆ ಹಲವೆಡೆಗಳಲ್ಲಿ ಅನೇಕ ಪಕ್ಷಿಗಳು ಪ್ರಾಣಿಗಳು ಜೀವತೆತ್ತಿವೆ ಎಂಬ ದೂರು ಕೇಳಿಬಂದಿದೆ.   ಸಾಕು ಪ್ರಾಣಿಗಳು ಪ್ರಾಣ ಸಂಕಟ ಅನುಭವಿಸಿವೆ. ಅಷ್ಟು ಮಾತ್ರವಲ್ಲ ಸೂಕ್ಷ್ಮ ಸಂವೇಧನೆಯ ಮನಸ್ಥಿತಿಯವರು, ನವಜಾತ ಶಿಶುಗಳು, ಮಿದುಳು, ಕಿವಿ, ಹೃದಯ ರೋಗಿಗಳು […]

  (Koodligi) ಕೂಡ್ಲಿಗಿ : ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣ ಸೇರಿದಂತೆ ಹಲವೆಡೆಗಳಲ್ಲಿ, ಭಾರೀ ಶಬ್ದದ   ಪಟಾಕಿಗಳ ಭರಾಟೆಗೆ ಹಲವೆಡೆಗಳಲ್ಲಿ ಅನೇಕ ಪಕ್ಷಿಗಳು ಪ್ರಾಣಿಗಳು ಜೀವತೆತ್ತಿವೆ ಎಂಬ ದೂರು ಕೇಳಿಬಂದಿದೆ.

  ಸಾಕು ಪ್ರಾಣಿಗಳು ಪ್ರಾಣ ಸಂಕಟ ಅನುಭವಿಸಿವೆ. ಅಷ್ಟು ಮಾತ್ರವಲ್ಲ ಸೂಕ್ಷ್ಮ ಸಂವೇಧನೆಯ ಮನಸ್ಥಿತಿಯವರು, ನವಜಾತ ಶಿಶುಗಳು, ಮಿದುಳು, ಕಿವಿ, ಹೃದಯ ರೋಗಿಗಳು , ಪಡಬಾರದ ನರಕ ಯಾತನೆ ಅನುಭವಿಸಿದ್ದಾರೆಂದು ವಿವಿಧ ಸಂಘಟನೆಗಳ ಹೋರಾಟಗಾರರು ದೂರಿದ್ದಾರೆ.

  ಕೂಡ್ಲಿಗಿ ಪಟ್ಟಣದ ರಾಜೀವ ಗಾಂಧೀ ನಗರದಲ್ಲಿ, ಭಾನುವಾರ ಭಾರೀ ಶಬ್ದದ ಪಟಾಕಿ ಸ್ಪೋಟದ ಶಬ್ದಕ್ಕೆ ನಗರದ ಮರಗಳಲ್ಲಿದ್ದ ಗಿಳಿ ಸೇರಿದಂತೆ  ಕೆಲ ಪಕ್ಷಿಗಳು ಮೃತಪಟ್ಟಿದ್ದು, ಬಹುತೇಕ ಪಕ್ಷಿಗಳು ಅರಣ್ಯದೆಡೆಗೆ ತೆರಳಿವೆ ಎನ್ನಲಾಗುತ್ತಿದೆ. ಇದು ಉದಾಹರಣೆಗೆ ಮಾತ್ರ. ಇದೇ ತರಹದ ದುಸ್ಥಿತಿ ಪಟ್ಟಣ ಸೇರಿದಂತೆ ಎಲ್ಲೆಡೆಗಳಲ್ಲಿ ಜರುಗಿದೆ.

  ಭಾರೀ ಶಬ್ದದ ಪಟಾಕಿ ಸ್ಪೋಟಕದಿಂದಾಗಿ , ಹಸುಗೂಸುಗಳು ಬೆಚ್ಚಿಬೀಳುತ್ತಿವೆ.  ದುರ್ಬಲ ಹೃದಯದವರು, ಹೆಚ್ಚಿನ ಭಾದೆಗೊಳಗಾದವರು , ಸೂಕ್ಷ್ಮ, ಅತಿ ಸೂಕ್ಷ್ಮ ಸಂವೇಧನೆಯ ಮನೋಭಾವದವರು , ವಯೋವೃದ್ಧರು. ಭಾರೀ ಶಬ್ದದ ಪಟಾಕಿ ಬಳಕೆಯಿಂದಾಗಿ , ವಿಪರೀತ ಪ್ರಾಣ ಸಂಕಟ ಅನುಭವಿಸಿರುವ ದುಸ್ಥಿತಿ ನಿರ್ಮಾಣವಾಗಿದೆ.

  ಸಂಬಂಧಿಸಿದ ಇಲಾಖೆಗಳು ಅಗತ್ಯ ಕಾನೂನು ಕ್ರಮಗಳನ್ನು, ಹಾಗೂ ಜಾಗ್ರತೆ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕಿದೆ. ಪೋಷಕರು ಪ್ರಜ್ಞಾವಂತರು , ವಿಪರೀತ ಶಬ್ದದ ಪಟಾಕಿ ಬಳಕೆ ಹಾಗೂ ಖರೀದಿ ನಿಷೇಧಗೊಳಿಸಿ ಸ್ವಯಂ ಪ್ರೇರಿತವಾಗಿ ಸಂಕಲ್ಪ ತೊಡಬೇಕಿದೆ.

 ಸ್ಥಳೀಯ ತಾಲೂಕಾಡಳಿತ, ಸಂಬಂಧಿಸಿದ ಇಲಾಖೆಗಳು , ಭಾರೀ ಶಬ್ದದ ಹಾಗೂ ಪರಿಸರ ಮಾಲಿನ್ಯ ಪಟಾಕಿ ಮಾರಾಟ ಬಳಕೆ ನಿಷೇಧಿಸಿ ಕಠಿಣ ಕ್ರಮಗಳನ್ನು ಜಾರಿತರಬೇಕಿದೆ ಎಂದು ವಂದೇ ಮಾತರಂ ಜಾಗೃತಿ ವೇದಿಕೆ, ಕಮ್ಯೂನಿಸ್ಟ್ ಪಕ್ಷ, ಕಾರ್ಮಿಕರ ಸಂಘಟನೆಗಳು, ದಲಿತಪರ ಸಂಘಟನೆ, ರೈತ ಸಂಘಟನೆಗಳು, ಮಹಿಳಾ ಸಂಘಟನೆಗಳು. ಕನ್ನಡ ಪರ ಸಂಘಟನೆಗಳು ಪರಿಸರ ಪ್ರೇಮಿಗಳು, ಪ್ರಾಣಿ ಪಕ್ಷಿ ಪ್ರಿಯರು, ಪ್ರಜ್ಞಾವಂತರು ಈ ಮೂಲಕ ಆಗ್ರಹಿಸಿದ್ದಾರೆ.

ಬರಹ: ವಿ.ಜಿ. ವೃಷಭೇಂದ್ರ ಕೂಡ್ಲಿಗಿ

Leave a comment

Your email address will not be published. Required fields are marked *

eMedia Kannada  @2025. All Rights Reserved.