ಉಡುಪಿ : ಸನಾತನ ಸಂಸ್ಥೆಯ ಆಯೋಜನೆಯಲ್ಲಿ ‘ಶ್ರೀ ಮಹಾಧನ್ವಂತರಿ ಯಾಗದ’ಸಿದ್ಧತೆ
ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
(Udupi) ಉಡುಪಿ: ಸನಾತನ ಸಂಸ್ಥೆಯ ವತಿಯಿಂದ ಉಡುಪಿಯಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ‘ಶ್ರೀ ಮಹಾಧನ್ವಂತರಿ ಯಾಗ’ದ ಪ್ರಚಾರ ಹಾಗೂ ಪೂರ್ವಸಿದ್ಧತೆಗಳಿಗಾಗಿ ಪೇಜಾವರ ಮಠದ ಹಿಂಭಾಗದಲ್ಲಿ ನೂತನವಾಗಿ ಆರಂಭಿಸಲಾದ ಕಾರ್ಯಾಲಯದ ಉದ್ಘಾಟನೆಯನ್ನು ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರುದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಲೋಕಕಲ್ಯಾಣ ಹಾಗೂ ಧರ್ಮ ಸಂಸ್ಥಾಪನೆಯ ಉದ್ಧೇಶದಿಂದ ನಡೆಯುವ ಇಂತಹ ಸಾತ್ತ್ವಿಕ ಕಾರ್ಯಕ್ರಮಗಳು ಸಮಾಜದಲ್ಲಿ ಧರ್ಮ ತೇಜಸ್ಸನ್ನು ಹೆಚ್ಚಿಸುತ್ತವೆ. ಸಾರ್ವಜನಿಕರ ಆರೋಗ್ಯ ವೃದ್ಧಿ ಮತ್ತು ಸದ್ಭಾವನೆಗಾಗಿ ಹಮ್ಮಿಕೊಳ್ಳಲಾಗಿರುವ ಈ ಮಹಾಯಾಗವು ಯಶಸ್ವಿಯಾಗಿ ನೆರವೇರಲಿ ಎಂದು ಶುಭ ಹಾರೈಸಿದರು.
ಪ್ರಸ್ತಾವಿಕವಾಗಿ ಮಾತನಾಡಿದ ಶ್ರೀ ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿಯ ಸಂಚಾಲಕ ಗುರುಪ್ರಸಾದ್ ಗೌಡ ಅವರು, ಈಗಾಗಲೇ ಯಾಗದ ಸಿದ್ಧತೆಗಳಿಗಾಗಿ ಮೂರು ಪೂರ್ವಭಾವಿ ಸಭೆಗಳು ನಡೆದಿದ್ದು, ಯಾಗ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಎಲ್ಲಾ ಸಂಘಟನೆಗಳು, ಧರ್ಮಪ್ರೇಮಿಗಳು ಕೈಜೋಡಿಸಿದ್ದಾರೆ. ಆ ನಿಟ್ಟಿನಲ್ಲಿ ಯಾಗದ ಪ್ರಸಾರ ಕಾರ್ಯ ಇನ್ನೂ ವೇಗವಾಗಿ ನಡೆಯಲು ಒಂದು ತಾತ್ಕಾಲಿಕ ಕಚೇರಿಯನ್ನು ಮಾಡಿ, ಅದರ ಮೂಲಕ ಪ್ರತಿ ದಿನವೂ ಎಲ್ಲರೂ ಸೇರಿ ಯಾಗ ಕಾರ್ಯಕ್ರಮದ ಪ್ರಸಾರ ಮತ್ತು ಇತರ ಸಿದ್ಧತೆಗಳ ವೇಗವನ್ನು ಹೆಚ್ಚಿಸಬಹುದು ಮತ್ತು ಅದಕ್ಕಾಗಿ ಇವತ್ತು ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ನಡೆಯುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಧರ್ಮ ಪ್ರಚಾರಕ ಸಂತರಾದ ಪೂಜ್ಯ ರಮಾನಂದ ಗೌಡ, ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯಕ್, ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ವಿಜಯ ಕೊಡವೂರು, ಆಯೋಜನಾ ಸಮಿತಿಯ ಸಂಚಾಲಕರಾದ ಗುರುಪ್ರಸಾದ್ ಗೌಡ ಹಾಗೂ ಹಲವಾರು ಧರ್ಮಾಭಿಮಾನಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾರ್ಯಾಲಯದ ವಿಳಾಸ:
ಪೇಜಾವರ ಮಠದ ಹಿಂಬಾಗ, ಕ್ಯಾಸೆಟ್ ಕಾರ್ನರ್ ಹತ್ತಿರ. ಸಂಪರ್ಕ: 9343017001.
ವಿನೋದ್ ಕಾಮತ್, ಸನಾತನ ಸಂಸ್ಥೆ, ಸಂಪರ್ಕ: 9342599299.
ಮಹಾಧನ್ವಂತರಿ ಯಾಗ ಸ್ವಾಗತ ಸಮಿತಿ, ಸಂಪರ್ಕ: 9343017001.

