ಕಾರ್ಕಳ : ಮಾಳ ಗ್ರಾಮದ ಧನ್ವಂತರಿ ಯಾಗಕ್ಕೆ ಸಂಸದ ಕೋಟ ಭೇಟಿ
ಶ್ರೀನಿವಾಸ ಸಸ್ಯ ನರ್ಸರಿಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಉಚಿತ ಸಸ್ಯ ವಿತರಿಸಿದ ಸಂಸದ ಕೋಟ
(Udupi) ಉಡುಪಿ :ಆರೋಗ್ಯ ಭಾರತಿ ಕಾರ್ಕಳ ಇವರ ವತಿಯಿಂದ ಮಾಳ ಗ್ರಾಮದ ಎಡಪಾಡಿ ತ್ರಿಭುವನ ತೋಟದ ಮನೆಯಲ್ಲಿ ಧನ್ವಂತರಿ ಯಾಗ ನೆರವೇರಿತು.
ಉತ್ತರ ಭಾರತದಲ್ಲಿ ದಂತ್ಯರಾಸ್ ಎಂಬ ಹಬ್ಬವನ್ನು ದಕ್ಷಿಣ ಭಾರತದ ಜನರು ಧನಾತ್ರಿಯೋಧಶಿ ಧನ್ವಂತರಿ ಜಯಂತಿ ಎಂದು ಆಚರಿಸುತ್ತಾರೆ. ಇದರ ಪ್ರಯುಕ್ತ ಮಧ್ಯಾಹ್ನ ಮಾಳ ಗ್ರಾಮದ ಗುರುಕುಲ ಶಾಲೆಯಲ್ಲಿ ಧನ್ವಂತರಿ ಯಾಗ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ತೋಟದ ಮನೆಯ ಶ್ರೀನಿವಾಸ ಸಸ್ಯ ನರ್ಸರಿ ಕ್ಷೇತ್ರಕ್ಕೆ ಭೇಟಿ ನೀಡಿ ಸಾರ್ವಜನಿಕರಿಗೆ ಉಚಿತ ಸಸ್ಯ ವಿತರಣೆ ಮಾಡಿದರು.
ಆರೋಗ್ಯ ಭಾರತಿ ವತಿಯಿಂದ ನಡೆಯುವ ಈ ಕಾರ್ಯಕ್ರಮ ಪರಿಸರದ ಪ್ರತಿ ಮನೆಗೆ ತಲುಪಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನಿಂದ ಆಗಮಿಸಿದ ಕರ್ನಾಟಕ ಆಸ್ಪತ್ರೆ ಪ್ರಾಧಿಕಾರದ ಡಾ. ಪ್ರಭು ಹಾಗೂ ನಿಟ್ಟೆಯ ವ್ಯವಸಾಯ ಸಂಘ ನಿರ್ದೇಶಕ ಅಶೋಕ ಅಡ್ಯಂತಾಯ, ಮೂಲಿಕೆಯ ಆಸಕ್ತಿಯ ರಾಜೇಶ್ ಭಟ್, ಪಾಂಡುರಂಗ ಜೋಶಿ, ಗುರುಕುಲ ಶಾಲಾ ಮುಖ್ಯೋಪಾಧ್ಯಾಯರಾದ ಪೂರ್ಣಿಮಾ ಶೆಣೈ, ಖ್ಯಾತ ಲೇಖಕ, ಅಮೆರಿಕದ ಅಂಕಣಕಾರ ಶ್ರೀವತ್ಸ ಜೋಶಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶೋಕ್ ಬರ್ವೆ, ಉಡುಪಿಯ ಸಂಗೀತ ವಿದ್ವಾಂಸ ಅರವಿಂದ ಹೆಬ್ಬಾರ್, ಉಪಸ್ಥಿತರಿದ್ದರು.
ಸಂಸದ ಕೋಟರವರು ಗಿಡಮೂಲಿಕೆ ವೈದ್ಯರ ಬಗ್ಗೆ ಹಾಗೂ ಅವುಗಳ ಮಾರುಕಟ್ಟೆ ಸಂಗತಿಗಳ ಕುರಿತಾಗಿ ಸುಧೀರ್ಘ ಚರ್ಚೆ ನಡೆಸಿದರು.
ಕಾರ್ಕಳದ ವೈದ್ಯ ಭರತೇಶ್ ಹಾಗೂ ಅವರ ಜೊತೆಗೆ ಕಲಿಕೆ ವೈದ್ಯರು ಗಿಡಮೂಲಿಕೆಯ ಸಂಗತಿಗಳನ್ನು ಮನದಟ್ಟು ಮಾಡಿಕೊಳ್ಳಲು ನರ್ಸರಿ ಕ್ಷೇತ್ರದಲ್ಲಿ ತಾವು ತೊಡಗಿಸಿಕೊಳ್ಳುವ ಸಂಗತಿಗಳ ಬಗ್ಗೆ ಚರ್ಚಿಸಿದರು.
ಮಾಳದ ಗುರುಕುಲ ಶಾಲೆಯ ಮಕ್ಕಳಿಗೆ ಗಿಡಮೂಲಿಕೆಯ ಪರಿಚಯದ ಬಗ್ಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಗೆದ್ದ 5 ಅಭ್ಯರ್ಥಿಗಳಿಗೆ ಪುಸ್ತಕ ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಮಕ್ಕಳಿಗೆ ಆರೋಗ್ಯ ಭಾರತಿ ಪ್ರಕಟಣೆಯ ಬಾಲೌಪಚಾರ ಎಂಬ ಕೈಪಿಡಿ ವಿತರಿಸಲಾಯಿತು.
ಕಾರ್ಯಕ್ರಮವು ಡಾ. ಸತ್ಯನಾರಾಯಣ ಭಟ್ ರವರ ಮಾರ್ಗದರ್ಶನದಲ್ಲಿ ನೆರವೇರಿತು.

