ನವೆಂಬರ್ 19 : ನೃತ್ಯನಿಕೇತನ ಕೊಡವೂರಿನ ಕೃಷ್ಣಪ್ರೇಮ ಪ್ರಶಸ್ತಿ, ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ
ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣ ಐವೈಸಿಯಲ್ಲಿ ನಡೆಯಲಿರುವ ಕಾರ್ಯಕ್ರಮ
(Kodavooru) ಕೊಡವೂರು : ನೃತ್ಯನಿಕೇತನ ಕೊಡವೂರು ಸಂಸ್ಥೆಯಿಂದ ಕೊಡಲ್ಪಡುವ 8 ನೇ ವರ್ಷದ ನೃತ್ಯ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡುವ ಕೃಷ್ಣಪ್ರೇಮ ಮತ್ತು ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನವೆಂಬರ್ 19 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಇನ್ಫೋಸಿಸ್ ಸಭಾಂಗಣ ಐವೈಸಿ ಯಲ್ಲಿ ನಡೆಯಲಿದೆ.
ಹಿರಿಯ ಸಂಗೀತ ಕಲಾವಿದರಾದ ರಾಘವೇಂದ್ರ ಆಚಾರ್ಯ ಮಣಿಪಾಲ ಮತ್ತು ಶ್ರೀಮತಿ ಸಂಗೀತ ಬಾಲಚಂದ್ರರವರಿಗೆ, ನೃತ್ಯಸಂಗೀತ ಕ್ಷೇತ್ರದಲ್ಲಿ ಪ್ರಸನ್ನ ಹಿರಿಯಡ್ಕರವರಿಗೆ, ನೃತ್ಯ ವರ್ಣಾಲಂಕಾರ ಕ್ಷೇತ್ರದಲ್ಲಿ ಮಾಡಿದ ಸೇವೆಗಾಗಿ ಕೃಷ್ಣಪ್ರೇಮ ಪ್ರಶಸ್ತಿ ಮತ್ತು ನೃತ್ಯ ಕ್ಷೇತ್ರದ ಹಿರಿಯ ಗುರುವಾಗಿ ನೃತ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಗುರುಗಳಾದ ಮಂಗಳೂರಿನ ವಿದ್ವಾನ್ ಯು.ಕೆ ಪ್ರವೀಣ್ ರವರಿಗೆ ವಿಶ್ವ ನೃತ್ಯಪ್ರಭಾ ಪ್ರಶಸ್ತಿ ಪ್ರದಾನ ಮತ್ತು ಕೃಷ್ಣಮೂರ್ತಿ ರಾವ್ ಮತ್ತು ಕೃಷ್ಣಮೂರ್ತಿ ಉಪಾಧ್ಯಾಯ ರವರ ಹೆಸರಿನಲ್ಲಿ ಯಕ್ಷಗಾನ ಕಲಿಯುತ್ತಿರುವ ವಿದ್ಯಾರ್ಥಿನಿಗೆ ಕೊಡುವ ಪ್ರತಿಭಾ ಪುರಸ್ಕಾರವನ್ನು ವಿದುಷಿ ಅನ್ವಿತ ತಂತ್ರಿಯವರಿಗೆನೀಡಲಾಗುವುದು. ಸಭಾಕಾರ್ಯಕ್ರಮದ ನಂತರ ನೃತ್ಯನಿಕೇತನ ಕೊಡವೂರು ಕಲಾವಿದರಿಂದ ನೃತ್ಯಸಿಂಚನ ಕಾರ್ಯಕ್ರಮ ನಡೆಯಲಿದೆ ಎಂದು ನೃತ್ಯನಿಕೇತನ ಕೊಡವೂರಿನ ನಿರ್ದೇಶಕರಾದ ವಿದ್ವಾನ್ ಸುಧೀರ್ ರಾವ್ ಮತ್ತು ವಿದುಷಿ ಮಾನಸಿ ಸುಧೀರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

