• Home  
  • ಪೆರ್ಡೂರು ಪ್ರದೀಪ ಪೂಜಾರಿ ಆತ್ಮಹತ್ಯೆ ಪ್ರಕರಣ, ಸಿ.ಐ.ಡಿ ತನಿಖೆ ಸ್ವಾಗತಾರ್ಹ : ಶಾಸಕ ಗುರ್ಮೆ  (Perdur Pradeep Poojary suicide case, CID investigation is welcome: MLA Gurme)
- ಅಪರಾಧ

ಪೆರ್ಡೂರು ಪ್ರದೀಪ ಪೂಜಾರಿ ಆತ್ಮಹತ್ಯೆ ಪ್ರಕರಣ, ಸಿ.ಐ.ಡಿ ತನಿಖೆ ಸ್ವಾಗತಾರ್ಹ : ಶಾಸಕ ಗುರ್ಮೆ  (Perdur Pradeep Poojary suicide case, CID investigation is welcome: MLA Gurme)

Share: ಪೆರ್ಡೂರು ಪ್ರದೀಪ ಪೂಜಾರಿ ಆತ್ಮಹತ್ಯೆ ಪ್ರಕರಣ, ಸಿ.ಐ.ಡಿ ತನಿಖೆ ಸ್ವಾಗತಾರ್ಹ : ಶಾಸಕ ಗುರ್ಮೆ   ಬಂಧನಕ್ಕೆ ಬಾಕಿ ಇರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದ ಶಾಸಕ ಸುರೇಶ್‌ ಶೆಟ್ಟಿ (Kaup) ಕಾಪು: ಕೆಲವು ದಿನಗಳ ಹಿಂದೆ ಪ್ರೇಮ ವೈಪಲ್ಯದ ಹಿನ್ನಲೆಯಲ್ಲಿ ಪೆರ್ಡೂರಿನ ಯುವಕ ಪ್ರದೀಪ ಪೂಜಾರಿ ಮೇಲೆ ನಡೆದ ಹಲ್ಲೆ ಮತ್ತು ಚಾರಿತ್ರ್ಯ ವಧೆಯಿಂದಾಗಿ ಮನನೊಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆತ್ಮಹತ್ಯೆ ಮಾಡಿಕೊಂಡ ಯುವಕನ ಸಾವಿನ ಕುರಿತ ತನಿಖೆಯನ್ನು ತಡವಾದರೂ ಸಿ.ಐ.ಡಿ ಗೆ ವಹಿಸಿರುವುದು […]

(Kaup) ಕಾಪು: ಕೆಲವು ದಿನಗಳ ಹಿಂದೆ ಪ್ರೇಮ ವೈಪಲ್ಯದ ಹಿನ್ನಲೆಯಲ್ಲಿ ಪೆರ್ಡೂರಿನ ಯುವಕ ಪ್ರದೀಪ ಪೂಜಾರಿ ಮೇಲೆ ನಡೆದ ಹಲ್ಲೆ ಮತ್ತು ಚಾರಿತ್ರ್ಯ ವಧೆಯಿಂದಾಗಿ ಮನನೊಂದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಆತ್ಮಹತ್ಯೆ ಮಾಡಿಕೊಂಡ ಯುವಕನ ಸಾವಿನ ಕುರಿತ ತನಿಖೆಯನ್ನು ತಡವಾದರೂ ಸಿ.ಐ.ಡಿ ಗೆ ವಹಿಸಿರುವುದು ಸ್ವಾಗತಾರ್ಹ ಎಂದು ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದ್ದಾರೆ.

 ಈ ಒಂದು ಪ್ರಕರಣದಲ್ಲಿ ಆತನ ಸಾವಿಗೆ ಕಾರಣರಾದ ದೋಷಿ ಪೋಲಿಸ್ ಅಧಿಕಾರಿಗಳು ಹಾಗೂ ಹಲ್ಲೆ ನಡೆಸಿದ ಗೂಂಡಾಗಳು ಮತ್ತು ವ್ಯವಸ್ಥಿತ ಸಂಚುದಾರರ ವಿರುದ್ದ ಪಕ್ಷಾತೀತವಾಗಿ ಸಮಗ್ರ ತನಿಖೆ ನಡೆಸಿ ಆರೋಪಿಗಳ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಿ ಕುಟುಂಬಕ್ಕೆ ನ್ಯಾಯ ಒದಗಿಸುವಂತಾಗಬೇಕು.

   ಅದೆ ರೀತಿ ಇನ್ನೂ ಬಂಧನಕ್ಕೆ ಬಾಕಿ ಇರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಈ ರೀತಿಯ ಘಟನೆಗಳು ಜಿಲ್ಲೆಯಲ್ಲಿ ಪುನರಾವರ್ತನೆ ಆಗದ ರೀತಿಯಲ್ಲಿ ಸಂಬಂಧಪಟ್ಟ ಇಲಾಖೆಗಳು ಮುನ್ನೆಚ್ಚರಿಕೆ ವಹಿಸಬೇಕು ಎಂದು ಗುರ್ಮೆ ಸುರೇಶ್ ಶೆಟ್ಟಿ ಆಗ್ರಹಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.