• Home  
  • ಹೆಜಮಾಡಿ ಚೆಕ್ ಪೋಸ್ಟ್ ಬಳಿ  ಪೊಲೀಸರ ಕಾರ್ಯಾಚರಣೆ : ಅಕ್ರಮ ಮದ್ಯ ಪೋಲಿಸ್ ವಶ (Police operation near Hejamadi check post: Illicit liquor seized)
- ಅಪರಾಧ

ಹೆಜಮಾಡಿ ಚೆಕ್ ಪೋಸ್ಟ್ ಬಳಿ  ಪೊಲೀಸರ ಕಾರ್ಯಾಚರಣೆ : ಅಕ್ರಮ ಮದ್ಯ ಪೋಲಿಸ್ ವಶ (Police operation near Hejamadi check post: Illicit liquor seized)

Share: ಹೆಜಮಾಡಿ ಚೆಕ್ ಪೋಸ್ಟ್ ಬಳಿ  ಪೊಲೀಸರ ಕಾರ್ಯಾಚರಣೆ : ಅಕ್ರಮ ಮದ್ಯ ಪೋಲಿಸ್ ವಶ  ಪಿಕಪ್‌ನಲ್ಲಿ ಸಾಗಾಟ ಮಾಡುತ್ತಿದ್ದ 2,583 ಲೀಟರ್ ಅಕ್ರಮ ಮದ್ಯ ಪೋಲಿಸ್ ವಶ, ನಾಲ್ವರ ಬಂಧನ (Hejamadi) ಹೆಜಮಾಡಿ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ರೂ.14,35,000  ಮೌಲ್ಯದ 2,583 ಲೀಟರ್ ಅಕ್ರಮ ಮದ್ಯ ಸಹಿತ ಒಟ್ಟು  ರೂ. 22,35,000  ಮೌಲ್ಯದ ಸೊತ್ತು  ಜಪ್ತಿ ಮಾಡಿದ ಘಟನೆ ಬುಧವಾರ ಹೆಜಮಾಡಿ ಚೆಕ್‌ಪೋಸ್ಟ್ ಬಳಿ ಘಟಿಸಿದೆ.   ಬಂಧಿತರನ್ನು […]

 ಪಿಕಪ್‌ನಲ್ಲಿ ಸಾಗಾಟ ಮಾಡುತ್ತಿದ್ದ 2,583 ಲೀಟರ್ ಅಕ್ರಮ ಮದ್ಯ ಪೋಲಿಸ್ ವಶ, ನಾಲ್ವರ ಬಂಧನ

(Hejamadi) ಹೆಜಮಾಡಿ: ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ರೂ.14,35,000  ಮೌಲ್ಯದ 2,583 ಲೀಟರ್ ಅಕ್ರಮ ಮದ್ಯ ಸಹಿತ ಒಟ್ಟು  ರೂ. 22,35,000  ಮೌಲ್ಯದ ಸೊತ್ತು  ಜಪ್ತಿ ಮಾಡಿದ ಘಟನೆ ಬುಧವಾರ ಹೆಜಮಾಡಿ ಚೆಕ್‌ಪೋಸ್ಟ್ ಬಳಿ ಘಟಿಸಿದೆ.

  ಬಂಧಿತರನ್ನು ಕಾರವಾರದ ಕಿನ್ನಾರ ಗ್ರಾಮದ ವಿನಯ್, ನಂದಗಡದ ಗಜಾನನ ಮಹಾಬಲೇಶ್ವ ನಾಯ್ಕ , ಅಮದಹಳ್ಳಿಯ ಸುಜಿತ್ ತಾಳೆಕೆರೆ ಹಾಗೂ ಶಿರ್ವಾಡ ಗ್ರಾಮದ ಲಾರೆನ್ಸ್ ಥಾಮಸ್ ಮೆಂಡೋನ್ಸ್ ಎಂದು ಗುರುತಿಸಲಾಗಿದೆ.

  ಮಹೀಂದ್ರ ಪಿಕಪ್ ಹಾಗೂ ಮಾರುತಿ ಸ್ವಿಫ್ಟ್ ಡಿಸೈರ್ ಕಾರಿನಲ್ಲಿ ಅಕ್ರಮವಾಗಿ ಮದ್ಯ ಸಾಗಿಸಲಾಗುತ್ತಿತ್ತು.

  ಗೋವಾದಿಂದ ಮಂಗಳೂರಿನತ್ತ ಪ್ರಯಾಣಿಸುತ್ತಿದ್ದ ಪಿಕಪ್ ವಾಹನವನ್ನು ಉಡುಪಿಯಿಂದಲೇ ಹಿಂಬಾಲಿಸಿದ ಪೊಲೀಸರು, ಹೆಜಮಾಡಿ ಚೆಕ್‌ಪೋಸ್ಟ್ ಸಮೀಪ ತಡೆದಿದ್ದಾರೆ.

ಆರೋಪಿಗಳ ಕಾರಿನಿಂದ ರೂ.14,35,000  ಮೌಲ್ಯದ 2,583 ಲೀಟರ್ ಅಕ್ರಮ ಮದ್ಯ ಸಹಿತ ಒಟ್ಟು  ರೂ. 22,35,000  ಮೌಲ್ಯದ ಸೊತ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

 ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಇಶಿತಾ ಗುಪ್ತಾ ಅವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕ ಅಜ್ಜತ್ ಆಲಿ ಜಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು.

  ಪಡುಬಿದ್ರಿ ಠಾಣೆಯ ಪಿಎಸ್‌ಐಗಳಾದ ಶಕ್ತಿವೇಲು, ಅನಿಲ್ ಕುಮಾರ್ ಟಿ. ನಾಯ್ಕ, ಎಎಸ್‌ಐಗಳಾದ ರಾಜೇಶ್, ಗಿರೀಶ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಕೃಷ್ಣಪ್ರಸಾದ್, ಜೀವನ್, ಸತೀಶ್ ಬೆಳ್ಳೆ, ಶಿವಾನಂದ ಪೂಜಾರಿ, ಅಶ್ವಿನ್ ಕುಮಾರ್, ಕಾನ್‌ಸ್ಟೇಬಲ್‌ಗಳಾದ ಶರಣ್, ಯಾಸಿನ್ ಖಾಜಿ, ರೆಹಮಾನ್, ರುಕ್ಕಿಣಿ ಹಾಗೂ ಸಿಡಿಆರ್ ವಿಭಾಗದ ದಿನೇಶ್ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.