• Home  
  • ಉಚ್ಚಿಲ : ವೈದ್ಯಕೀಯ ಸೇವೆಯಲ್ಲಿ50 ಸಂವತ್ಸರಗಳನ್ನು ಪೂರೈಸಿದ ಡಾ.ಗಂಗಾಧರ ಶೆಟ್ಟಿಯವರಿಗೆ ಅಭಿನಂದನೆ (Uchila: Felicitation for Dr. Gangadhara Shetty, who has completed 50 years in medical service.)
- ಸನ್ಮಾನ, ಅಭಿನಂದನೆ

ಉಚ್ಚಿಲ : ವೈದ್ಯಕೀಯ ಸೇವೆಯಲ್ಲಿ50 ಸಂವತ್ಸರಗಳನ್ನು ಪೂರೈಸಿದ ಡಾ.ಗಂಗಾಧರ ಶೆಟ್ಟಿಯವರಿಗೆ ಅಭಿನಂದನೆ (Uchila: Felicitation for Dr. Gangadhara Shetty, who has completed 50 years in medical service.)

Share: ಉಚ್ಚಿಲ : ವೈದ್ಯಕೀಯ ಸೇವೆಯಲ್ಲಿ50 ಸಂವತ್ಸರಗಳನ್ನು ಪೂರೈಸಿದ ಡಾ.ಗಂಗಾಧರ ಶೆಟ್ಟಿಯವರಿಗೆ ಅಭಿನಂದನೆ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇಗುಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ (Uchila) ಉಚ್ಚಿಲ: ಡಾ. ಗಂಗಾಧರ ಶೆಟ್ಟಿ ಅಭಿನಂದನಾ ಸಮಿತಿಯ ವತಿಯಿಂದ ಉಚ್ಚಿಲದ ರತ್ನ ಕ್ಲಿನಿಕ್‌ ನಲ್ಲಿ  ವೈದ್ಯಕೀಯ ಸೇವೆಯಲ್ಲಿ 50 ಸಂವತ್ಸರಗಳನ್ನು ಪೂರೈಸಿದ ಡಾ. ಗಂಗಾಧರ ಶೆಟ್ಟಿ ಮತ್ತು ಪತ್ನಿ ಕಸ್ತೂರಿ ಗಂಗಾಧರ ಶೆಟ್ಟಿ ಸಹಿತರಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ  ದೇಗುಲದ ಶ್ರೀಮತಿ ಶಾಲಿನಿ […]

(Uchila) ಉಚ್ಚಿಲ: ಡಾ. ಗಂಗಾಧರ ಶೆಟ್ಟಿ ಅಭಿನಂದನಾ ಸಮಿತಿಯ ವತಿಯಿಂದ ಉಚ್ಚಿಲದ ರತ್ನ ಕ್ಲಿನಿಕ್‌ ನಲ್ಲಿ  ವೈದ್ಯಕೀಯ ಸೇವೆಯಲ್ಲಿ 50 ಸಂವತ್ಸರಗಳನ್ನು ಪೂರೈಸಿದ ಡಾ. ಗಂಗಾಧರ ಶೆಟ್ಟಿ ಮತ್ತು ಪತ್ನಿ ಕಸ್ತೂರಿ ಗಂಗಾಧರ ಶೆಟ್ಟಿ ಸಹಿತರಾಗಿ ಉಚ್ಚಿಲ ಶ್ರೀ ಮಹಾಲಕ್ಷ್ಮೀ  ದೇಗುಲದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣದಲ್ಲಿ  ಭಾನುವಾರ ಸಂಜೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದಿಸಲಾಯಿತು.

 ಸಮಾರಂಭವನ್ನು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಉದ್ಘಾಟಿಸಿದರು.

 ಅವರು ಮಾತನಾಡಿ, ಆತ್ಮ ಸಾಕ್ಷಿಗೆ ಅನುಗುಣವಾಗಿ ವೈದ್ಯರಾಗಿ 50 ವರ್ಷಗಳ ಸಮಾಜಮುಖಿ ಸೇವೆಯ ಬದುಕು ಕಂಡು ಅರ್ಹವಾಗಿ ಅಭಿನಂದನೆ ಪಡೆಯುವುದು ಸಾರ್ಥಕ ಬದುಕಿನ ಕ್ಷಣವಾಗಿದೆ ಎಂದರು. 

ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿದ್ದ  ಅಭಿನಂದನಾ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಗ್ರಾಮೀಣ ಪರಿಸರದಲ್ಲಿ 50 ವರ್ಷಗಳ ವೈದ್ಯಕೀಯ ಸೇವೆಗೆ ಸಾರ್ವಜನಿಕವಾಗಿ ಅಭಿಮಾನಿಗಳ ಅಭಿನಂದನೆಯನ್ನು ಪಡೆಯುವ ಮೂಲಕ ತನ್ನ ವೈದ್ಯಕೀಯ ಸೇವೆಯ ಸಾರ್ಥಕತೆಯನ್ನು ಕಂಡಂತಾಗಿದೆ ಎಂದರು.

 ಅಭಿನಂದನೆ ಸ್ವೀಕರಿಸಿದ ಡಾ. ಗಂಗಾಧರ ಶೆಟ್ಟಿ  ಮಾತನಾಡಿ, ಮೂಲ ಭೂತ ಸೌಕರ್ಯಗಳಿಲ್ಲದ ಕಾಲದಿಂದ ಆರಂಭಗೊಂಡ ದೀರ್ಘ ವೈದ್ಯಕೀಯ ಸೇವೆಯಡಿ ಲಕ್ಷಾಂತರ ರೋಗಿಗಳಿಗೆ ನೀಡಿದ ಸಂತೃಪ್ತಿಯ ಸೇವೆಯನ್ನು ಗುರುತಿಸಿ ಡಾ. ಗಂಗಾಧರ ಶೆಟ್ಟಿ ಅಭಿನಂದನಾ ಸಮಿತಿಯ ವತಿಯಿಂದ ಅಭಿನಂದನೆಯು ಜೀವನದ ಶ್ರೇಷ್ಠ ಕ್ಷಣವಾಗಿದ್ದು, ಕೃತಜ್ಞತೆ ಸಲ್ಲಿಸಿದರು.

  ಮುಖ್ಯಅತಿಥಿಗಳಾಗಿದ್ದ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ದ.ಕ.ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ಜಾನಪದ ವಿದ್ವಾಂಸ ಕೆ. ಎಲ್. ಕುಂಡಂತಾಯ ಮಾತನಾಡಿದರು.

  ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪ್ರಧಾನ ಅರ್ಚಕ ವೇ. ಮೂ. ರಾಘವೇಂದ್ರ ಉಪಾಧ್ಯಾಯ,  ಮೂಳೂರು ಅಲ್‌ಇಹ್ಸಾನ್ ಗ್ರೂಪ್‌ಆಫ್ ಎಜುಕೇಶನಲ್ ಇನ್‌ಸ್ಟಿಟ್ಯೂಶನ್ ನ ಮುಖ್ಯ ಕಾರ್ಯನಿರ್ವಾಹಕ  ಯು.ಕೆ. ಮುಸ್ತಾಫಾ ಸಆದಿ, ಉಚ್ಚಿಲ ಸೇಕ್ರೆಡ್ ಹಾರ್ಟ್ ಚರ್ಚ್‌ ನ ಧರ್ಮಗುರು ವಂ. ಜೋಸ್ಪಿ ಫೆರ್ನಾಂಡಿಸ್ ಶುಭಾಶಂಸನೆಗೈದರು.

 ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಅಶೋಕ್‌ ರಾಜ್ ಎರ್ಮಾಳು ಬೀಡು, ಜಿಲ್ಲಾ ಕಂಬಳ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಹೆಗ್ಡೆ, ಮಾಜಿ ಜಿ. ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಅಭಿನಂದನಾ ಸಮಿತಿಯ ಕೋಶಾಧಿಕಾರಿ ಶ್ರೀಪತಿ ಭಟ್ ಉಚ್ಚಿಲ, ಜತೆ ಕೋಶಾಧಿಕಾರಿ ವೇ. ಮೂ. ವಿಷ್ಣುಮೂರ್ತಿ ಉಪಾಧ್ಯಾಯ ವೇದಿಕೆಯಲ್ಲಿದ್ದರು.

ಚಂದ್ರಕಾಂತ್ ಪಡುಬಿದ್ರಿ ಪ್ರಾರ್ಥಿಸಿದರು. ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ್ ವಂದಿಸಿದರು. ಕಾರ್ಯಕ್ರಮ ಸಂಯೋಜಕ ಸತೀಶ್ ಶೆಟ್ಟಿ ಗುಡ್ಡೆಚ್ಚಿ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.