ಮಾಹೆ ಮಣಿಪಾಲ: 34 ನೇ ಘಟಿಕೋತ್ಸವಕ್ಕೆ ಸಜ್ಜು
ಜಾಗತಿಕ ಮಟ್ಟದ ಔದ್ಯಮಿಕ, ಶೈಕ್ಷಣಿಕ ಸಾಧಕರ ಉಪಸ್ಥಿತಿ
(Manipala) ಮಣಿಪಾಲ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆ 34ನೇ ಘಟಿಕೋತ್ಸವದ ಸಂಭ್ರಮಕ್ಕೆ ಸಜ್ಜಾಗಿದ್ದು, ಒಟ್ಟು 10,277 ವಿದ್ಯಾರ್ಥಿಗಳು ಈ ಘಟಿಕೋತ್ಸವದಲ್ಲಿ ಪದವಿ ಪ್ರಮಾಣಪತ್ರ ಸ್ವೀಕರಿಸಲಿದ್ದಾರೆ.
ನವೆಂಬರ್ 19ರಿಂದ 22ರವರೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ, 7,694 ವಿದ್ಯಾರ್ಥಿಗಳು ಪದವಿ ಪಡೆಯಲಿದ್ದಾರೆ. ಹಾಗೆಯೇ, ಬೆಂಗಳೂರು ಕ್ಯಾಂಪಸ್‌ನಲ್ಲಿ ನವೆಂಬರ್ 28 ಮತ್ತು 29ರಂದು ನಡೆಯುವ ಸಮಾರಂಭದಲ್ಲಿ 2,583 ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.
ಅಲ್ಲದೆ, ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಿರುವ 207 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ (ಪಿಎಚ್‌ಡಿ) ಪದವಿ ಪ್ರದಾನ ಮಾಡಲಾಗುವುದು.
ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳು, ಅವರ ಪೋಷಕರು, ಶೈಕ್ಷಣಿಕ ಮತ್ತು ಔದ್ಯಮಿಕ ಕ್ಷೇತ್ರದ ಗಣ್ಯರು ಹಾಗೂ ಬೋಧಕ ವರ್ಗವನ್ನು ಒಂದೆಡೆ ಸೇರಿಸುವ ಅರ್ಥಪೂರ್ಣ ವೇದಿಕೆಯಾಗಿ ಈ ಸಮಾರಂಭ ರೂಪುಗೊಳ್ಳಲಿದೆ. ಈ ಘಟಿಕೋತ್ಸವ ಸಮಾರಂಭವನ್ನು ಪದವೀಧರರ ಶೈಕ್ಷಣಿಕ ಪಯಣದ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗುತ್ತದೆ.
ಈ ಬಾರಿಯ ಘಟಿಕೋತ್ಸವದಲ್ಲಿ ಉದ್ಯಮ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಹೆಸರು ಮಾಡಿರುವ ಪ್ರಮುಖರು ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ನವೆಂಬರ್ 19, ರಂದು ಅಮಿತ್ ಗೋಸ್ಸೇನ್, ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೋನೆ ಎಲಿವೇಟರ್ಸ್ ಇಂಡಿಯ 7 ಸೌತ್ ಏಶಿಯಾ.
ನವೆಂಬರ್ 20 ರಂದು ತ್ಸುಬೋಟಾ, ನಿರ್ದೇಶಕರು ಮತ್ತು ಚೀಫ್ ಟ್ರಾನ್ಸ್‌ಫಾರ್ಮೇಶನ್ ಆಫೀಸರ್ (ಸಿಟಿಆರ್‌ಒ), ಹಿಟಾಚಿ ಸಿಸ್ಟಮ್ಸ್, ಇಂಡಿಯ
ನವೆಂಬರ್ 21 ರಂದು ಪ್ರೊ. ಜೋ ರೈಕ್ರಾಫ್ಟ್-ಮಲೋನ್, ಸಹಕುಲಪತಿ, ಸಂಶೋಧನೆ ಮತ್ತು ಔದ್ಯಮಿಕ ವಿಭಾಗ, ಲ್ಯಾಂಕಸ್ಟರ್, ಯುಕೆ
ನವೆಂಬರ್ 22 ರಂದು ಡಾ. ಕ್ಯಾಥಿ ವಿಲ್ಸನ್, ಅಧ್ಯಕ್ಷರು ಮತ್ತು ಕುಲಪತಿಗಳು, ನ್ಯೂಬ್ರನ್ಸ್‌ವಿಕ್ ವಿಶ್ವವಿದ್ಯಾಲಯ (ಯುಎನ್‌ಬಿ), ಕೆನಡ ಭಾಗವಹಿಸಲಿದ್ದಾರೆ.

