ಕಡೆಕಾರು ಚೈತನ್ಯ ಫೌಂಡೇಶನ್ : ರಾಜ್ಯೋತ್ಸವ, ಸೇವಾಚೈತನ್ಯ- 2026 ಪ್ರಶಸ್ತಿ ಪ್ರದಾನ
ಬನ್ನಂಜೆ ಬಾಬು ಅಮೀನ್, ಡಾ. ಶ್ರುತಿ ಬಲ್ಲಾಳ್, ಶಂಕರ ಜಿ ಸುವರ್ಣರವರಿಗೆ ಪ್ರಶಸ್ತಿ
(Udupi) ಉಡುಪಿ :ಚೈತನ್ಯ ಸೋಶಿಯಲ್ ವೆಲ್ಫೇರ್ ಫೌಂಡೇಶನ್ (ರಿ.) ಕಡೆಕಾರು, ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಮತ್ತು ಎಂಟನೇ ವರುಷದ ಸೇವಾಚೈತನ್ಯ-2026 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮಣಿಪಾಲ್ ಇನ್ ಹೊಟೇಲ್ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿ ಎಮ್ ವಿದ್ಯಾನಿಕೇತನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ, ಕನ್ನಡ ನಾಡಿಗೆ ಶ್ರೀಮಂತ ಇತಿಹಾಸವಿದೆ. ಕನ್ನಡ ನೆಲ-ಜಲ-ಭಾಷೆ ಮತ್ತು ಸಂಸ್ಕ್ರತಿಯ ಬಗ್ಗೆ ನಮ್ಮ ಮಕ್ಕಳಿಗೆ ಅರಿವು ಮೂಡಿಸಿ ಇದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ಆಗಬೇಕು. ಸಮಾಜದಲ್ಲಿ ಎರಡು ವಿಧದ ಸಾಧಕರು ಇರುತ್ತಾರೆ, ಒಬ್ಬರು ಸಾಧನೆಗಳ ಮೂಲಕ ವೈಯುಕ್ತಿಕ ಯಶಸ್ಸನ್ನು ಪಡೆದರೆ ಮತ್ತೊಂದು ವರ್ಗ ಸಮಾಜದ ಜೊತೆ ಸ್ಪಂದಿಸುತ್ತಾ ಯಶಸ್ಸನ್ನು ಪಡೆಯುತ್ತಾರೆ. ಸಮಾಜಕ್ಕೆ ಸೇವೆ ನೀಡಿದ ಅಂತಾಹ ಸಾಧಕರನ್ನು ಗುರುತಿಸಿ ಚೈತನ್ಯ ಫೌಂಡೇಶನ್ ವತಿಯಿಂದ ಇಂದು ಸೇವಾಚೈತನ್ಯ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ನಿಜವಾಗಿಯೂ ಅರ್ಥಪೂರ್ಣ ಎಂದರು.
ಈ ಸಂದರ್ಭ ಜನಪದ ವಿದ್ವಾಂಸರಾದ ಬನ್ನಂಜೆ ಬಾಬು ಅಮೀನ್, ಮದುಮೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್ ಮತ್ತು ಕಡೆಕಾರು ಶಂಕರ ಜಿ ಸುವರ್ಣ ಅವರಿಗೆ ಸೇವಾಚೈತನ್ಯ – 2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಐಕಳ ಪೊಂಪೆ ಕಾಲೇಜಿನ ನಿವ್ರತ್ತ ಪ್ರಾಂಶುಪಾಲರಾದ ಡಾ. ಜಗದೀಶ್ ಹೊಳ್ಳ ಅವರು ಕನ್ನಡ ರಾಜ್ಯೋತ್ಸವದ ಬಗ್ಗೆ ಉಪನ್ಯಾಸ ನೀಡಿದರು.
ಮುಖ್ಯ ಅತಿಥಿಯಾಗಿ ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಹರಿಯಪ್ಪ ಕೋಟ್ಯಾನ್, ಕೆ.ಕೆ. ಲಿವಿಂಗ್ ಉದ್ಯಾವರ ಇದರ ಮಾಲಕರು ಹಾಗೂ ಉದ್ಯಾವರ ಬೊಳ್ಜೆ ಬ್ರಹ್ಮಬೈದರ್ಕಳ ಗರೋಡಿ ಸೇವಾ ಸಮಿತಿಯ ಅಧ್ಯಕ್ಷರಾದ ಪ್ರಕಾಶ್ ಕೋಟ್ಯಾನ್, ಡಾ. ಅನುಪಮಾ ಸುನೀಲ್, ಜತಿನ್ ಕಡೆಕಾರ್, ನಂದಕಿಶೋರ್ ಕೆಮ್ಮಣ್ಣು, ನಾರಾಯಣ ಬಿ.ಎಸ್, ದೀಪಕ್ ಪುತ್ರನ್, ದಿನೇಶ್ ಅಮೀನ್, ರಾಜೇಶ್ ಪಾಲನ್ ಕಡೆಕಾರ್, ಜಗದೀಶ್ ಆಚಾರ್ಯ, ದಾಮೋದರ್ ಶೆಟ್ಟಿಗಾರ್, ಯೋಗೀಶ್ ಕೋಟ್ಯಾನ್, ಗಂಗಾಧರ್ ಜಿ, ಪ್ರತಾಪ್ ಕುಮಾರ್ ಉದ್ಯಾವರ, ಲಿಖಿತ್ ಉಡುಪಿ, ಮುರಳಿ ಶೆಟ್ಟಿ ಕಡೆಕಾರ್, ಡಾ. ಅರ್ಜುನ್ ಬಲ್ಲಾಳ್, ಚೇತನ್ ಸುವರ್ಣ ಕೊಳ, ಹರೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಸನ್ನಿಸ್ ಮ್ಯೂಸಿಕ್ ಹಬ್ ಸದಸ್ಯರಿಂದ ಕನ್ನಡ ಹಾಡುಗಳ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಿತು.
ಧನ್ವಿ ಅಮೀನ್, ಜಾನ್ಹವಿ ಭಟ್ ಮತ್ತು ಸರ್ವಾಣಿ ಪ್ರಾರ್ಥನೆಗೈದರು. ಚೈತನ್ಯ ಫೌಂಡೇಶನ್ ಪ್ರವರ್ತಕ ಸುನೀಲ್ ಸಾಲ್ಯಾನ್ ಕಡೆಕಾರ್ ಸ್ವಾಗತಿಸಿದರು. ಸಿಂಚನಾ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

