• Home  
  • ಕನ್ನಡ ಭಾಷೆ, ಯಕ್ಷಗಾನದ ಪರಂಪರೆ ಸಂರಕ್ಷಣೆಗೆ ಸಂಘಟನೆ ಬದ್ಧ: ಸುಜಯ್ ಪೂಜಾರಿ (Organization committed to preserving the Kannada language and the cultural heritage of Yakshagana: Sujay Poojary)
- PROBLEMS

ಕನ್ನಡ ಭಾಷೆ, ಯಕ್ಷಗಾನದ ಪರಂಪರೆ ಸಂರಕ್ಷಣೆಗೆ ಸಂಘಟನೆ ಬದ್ಧ: ಸುಜಯ್ ಪೂಜಾರಿ (Organization committed to preserving the Kannada language and the cultural heritage of Yakshagana: Sujay Poojary)

Share: ಕನ್ನಡ ಭಾಷೆ, ಯಕ್ಷಗಾನದ ಪರಂಪರೆ ಸಂರಕ್ಷಣೆಗೆ ಸಂಘಟನೆ ಬದ್ಧ: ಸುಜಯ್ ಪೂಜಾರಿ  ಯಕ್ಷಗಾನದಲ್ಲಿ ಅನಗತ್ಯ ತಮಿಳು ಪದಗಳ ಬಳಕೆಗೆ ನಮ್ಮ ಕರ್ನಾಟಕ ಸೇನೆಯ ವಿರೋಧ (Udupi) ಉಡುಪಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಕನ್ನಡ ಭಾಷೆಯ ಬಳಕೆಗೆ ನಮ್ಮ ಕರ್ನಾಟಕ ಸೇನೆಯ ಸಂಪೂರ್ಣ ಬೆಂಬಲವಿದೆ. ಆದರೆ ಯಕ್ಷಗಾನದ ಮೂಲ ಸಂಸ್ಕೃತಿ, ಕನ್ನಡದ ಭಾಷಾ ಸೊಗಡು ಹಾಗೂ ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ಅನಗತ್ಯವಾಗಿ ತಮಿಳು ಪದಗಳನ್ನು ಬಳಸುವುದನ್ನು ನಮ್ಮ ಕರ್ನಾಟಕ ಸೇನೆ ತೀವ್ರವಾಗಿ ವಿರೋಧಿಸುತ್ತದೆ […]

(Udupi) ಉಡುಪಿ: ಕರಾವಳಿ ಕರ್ನಾಟಕದ ಹೆಮ್ಮೆಯ ಸಾಂಪ್ರದಾಯಿಕ ಕಲೆಯಾದ ಯಕ್ಷಗಾನದಲ್ಲಿ ಕನ್ನಡ ಭಾಷೆಯ ಬಳಕೆಗೆ ನಮ್ಮ ಕರ್ನಾಟಕ ಸೇನೆಯ ಸಂಪೂರ್ಣ ಬೆಂಬಲವಿದೆ. ಆದರೆ ಯಕ್ಷಗಾನದ ಮೂಲ ಸಂಸ್ಕೃತಿ, ಕನ್ನಡದ ಭಾಷಾ ಸೊಗಡು ಹಾಗೂ ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ಅನಗತ್ಯವಾಗಿ ತಮಿಳು ಪದಗಳನ್ನು ಬಳಸುವುದನ್ನು ನಮ್ಮ ಕರ್ನಾಟಕ ಸೇನೆ ತೀವ್ರವಾಗಿ ವಿರೋಧಿಸುತ್ತದೆ ಎಂದು ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ಸುಜಯ್ ಪೂಜಾರಿ ತಿಳಿಸಿದ್ದಾರೆ.

  ಯಕ್ಷಗಾನ ಕೇವಲ ಮನರಂಜನೆಯ ಕಲೆಯಲ್ಲ. ಅದು ಕನ್ನಡ ನಾಡಿನ ಸಂಸ್ಕೃತಿ, ಸಾಹಿತ್ಯ, ಭಾಷೆ ಮತ್ತು ಕಲಾವೈಭವವನ್ನು ಪ್ರತಿಬಿಂಬಿಸುವ ಅಮೂಲ್ಯ ಕಲಾಪ್ರಕಾರವಾಗಿದೆ. ಇಂತಹ ಶ್ರೀಮಂತ ಕಲೆಯಲ್ಲಿ ಕನ್ನಡ ಭಾಷೆಯ ಸೊಗಡು ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

  ಕನ್ನಡ ಭಾಷೆ, ನೆಲ, ಜಲ ಹಾಗೂ ನಾಡಿನ ಅಸ್ಮಿತೆಯ ರಕ್ಷಣೆಗಾಗಿ ನಮ್ಮ ಕರ್ನಾಟಕ ಸೇನೆ ಸದಾ ಹೋರಾಟಕ್ಕೆ ಸಿದ್ಧವಿದೆ. ಯಕ್ಷಗಾನದ ಕಲಾವಿದರು, ಭಾಗವತರು, ಸಂಘಟಕರು ಹಾಗೂ ಸಂಬಂಧಪಟ್ಟವರು ಕನ್ನಡ ಭಾಷೆಯ ಗೌರವಕ್ಕೆ ಆದ್ಯತೆ ನೀಡಬೇಕು. ಕಲೆಯ ಬೆಳವಣಿಗೆಯ ಹೆಸರಿನಲ್ಲಿ ಕನ್ನಡದ ಮೂಲ ಸೊಗಡು ಮತ್ತು ಸಾಂಸ್ಕೃತಿಕ ಪರಂಪರೆಗೆ ಧಕ್ಕೆಯಾಗಬಾರದು ಎಂದು ಅವರು ಮನವಿ ಮಾಡಿದರು.

   ಯಕ್ಷಗಾನದ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಅದೇ ವೈಭವದೊಂದಿಗೆ ಪರಿಚಯಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗೆ ನಮ್ಮ ಕರ್ನಾಟಕ ಸೇನೆ ಸದಾ ಕೈಜೋಡಿಸಲಿದೆ ಎಂದು ಸುಜಯ್ ಪೂಜಾರಿ ತಿಳಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.