• Home  
  • ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ (Inauguration of the Vaikunta Baliga Law College Annual Sports Meet)
- ಕ್ರೀಡೆ - ಶಾಲಾ ಕಾಲೇಜು

ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ (Inauguration of the Vaikunta Baliga Law College Annual Sports Meet)

Share: ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ (Udupi) ಕ್ರೀಡಾಕೂಟ ಉದ್ಘಾಟಿಸಿದ ಉಡುಪಿಯ ನ್ಯಾಯವಾದಿ ಅಖಿಲ್‌ ಪಿ ಹೆಗ್ಡೆ (Udupi) ಉಡುಪಿ : ವಿದ್ಯಾರ್ಥಿಗಳು ಒತ್ತಡದಿಂದ ಹೊರ ಬರಲು ಮಾದಕ ವಸ್ತುಗಳ ಮೊರೆ ಹೋಗದೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಉಡುಪಿಯ ನ್ಯಾಯವಾದಿ ಅಖಿಲ್‌ ಪಿ ಹೆಗ್ಡೆ ಹೇಳಿದರು.   ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವತಿಯಿಂದ 2026-27ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.  ಕಾನೂನು ವಿದ್ಯಾರ್ಥಿಗಳು ಪದವಿಯ […]

(Udupi) ಉಡುಪಿ : ವಿದ್ಯಾರ್ಥಿಗಳು ಒತ್ತಡದಿಂದ ಹೊರ ಬರಲು ಮಾದಕ ವಸ್ತುಗಳ ಮೊರೆ ಹೋಗದೆ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಉಡುಪಿಯ ನ್ಯಾಯವಾದಿ ಅಖಿಲ್‌ ಪಿ ಹೆಗ್ಡೆ ಹೇಳಿದರು.

  ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ವತಿಯಿಂದ 2026-27ನೇ ಸಾಲಿನ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

 ಕಾನೂನು ವಿದ್ಯಾರ್ಥಿಗಳು ಪದವಿಯ ನಂತರ ವಕೀಲ ವೃತ್ತಿಯಲ್ಲಿ ಕ್ರೀಡಾ ಮನೋಭಾವ ತುಂಬಾ ಅವಶ್ಯವಾಗಿದೆ. ಸೋಲು ಮತ್ತು ಗೆಲುವನ್ನು ಒಂದೇ ರೀತಿ ಸ್ವೀಕರಿಸುವ ಮನೋಭಾವ ಕ್ರೀಡೆಗಳಲ್ಲಿ ಭಾಗವಹಿಸುವಿಕೆಯಿಂದ ಬರುತ್ತದೆ ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಸುರೇಖಾ ಕೆ ತಮ್ಮಅಧ್ಯಕ್ಷೀಯ ಭಾಷಣದಲ್ಲಿ, ಜೀವನದಲ್ಲಿ ಬೇರೆ ವ್ಯಕ್ತಿಗಳ ಜೊತೆ ಹೋಲಿಕೆ ಮಾಡಿಕೊಳ್ಳದೆ ನಮ್ಮನ್ನು ನಾವು ಅರಿತು ತಪ್ಪುಗಳನ್ನುತಿದ್ದಿಕೊಂಡು ಮುಂದೆ ಹೋಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ್‌ ರಾವ್‌ ಡಿ ಹಾಗೂ ವಿದ್ಯಾರ್ಥಿ ಕಾರ್ಯದರ್ಶಿಗಳಾದ ದೀಲಿಪ್‌ ಮತ್ತುಭರತ್‌ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪವಿತ್ರ ಪ್ರಾರ್ಥನೆ ಸಲ್ಲಿಸಿದರು. ಹಂಸಶ್ರೀ ಸ್ವಾಗತಿಸಿದರು. ಪ್ರಿಯಾಂಕ ವಂದನಾರ್ಪಣೆ ಸಲ್ಲಿಸಿದರು. ದೀಪಕ್‌ ಕಾಮತ್‌ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.