• Home  
  • ಭಾಗ್ಯಶ್ರೀ ಕಂಬಳಕಟ್ಟ ಮಡಿಲಿಗೆ “ಶಿಕ್ಷಕ ಸಾಹಿತಿ ಪ್ರಶಸ್ತಿ” (“Teacher-Writer Award” Bestowed Upon Bhagyashree Kambalakatta)
- ಸಂಘ, ಸಂಸ್ಥೆಗಳು - ಸನ್ಮಾನ, ಅಭಿನಂದನೆ

ಭಾಗ್ಯಶ್ರೀ ಕಂಬಳಕಟ್ಟ ಮಡಿಲಿಗೆ “ಶಿಕ್ಷಕ ಸಾಹಿತಿ ಪ್ರಶಸ್ತಿ” (“Teacher-Writer Award” Bestowed Upon Bhagyashree Kambalakatta)

Share: ಭಾಗ್ಯಶ್ರೀ ಕಂಬಳಕಟ್ಟ ಮಡಿಲಿಗೆ “ಶಿಕ್ಷಕ ಸಾಹಿತಿ ಪ್ರಶಸ್ತಿ“ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನಹಡಗಲಿ ನೀಡುವ ಪ್ರಶಸ್ತಿ (Udupi) ಉಡುಪಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ, ಜಿಲ್ಲಾ ಘಟಕ ಉಡುಪಿ ಇವರು 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ನೀಡುತ್ತಿರುವ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕ ಸಾಹಿತಿ ಪ್ರಶಸ್ತಿಗೆ ಭಾಗ್ಯಶ್ರೀ ಕಂಬಳಕಟ್ಟ ಅವರು ಆಯ್ಕೆಯಾಗಿದ್ದಾರೆ.    ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರು, ಪದವಿ ವ್ಯಾಸಂಗದ ಅವಧಿಯಲ್ಲಿ “ಅಂತರಂಗದ […]

(Udupi) ಉಡುಪಿ : ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನಹಡಗಲಿ, ಜಿಲ್ಲಾ ಘಟಕ ಉಡುಪಿ ಇವರು 71ನೇ ಕನ್ನಡ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ನೀಡುತ್ತಿರುವ ಉಡುಪಿ ಜಿಲ್ಲಾ ಮಟ್ಟದ ಶಿಕ್ಷಕ ಸಾಹಿತಿ ಪ್ರಶಸ್ತಿಗೆ ಭಾಗ್ಯಶ್ರೀ ಕಂಬಳಕಟ್ಟ ಅವರು ಆಯ್ಕೆಯಾಗಿದ್ದಾರೆ.

   ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಸಾಹಿತ್ಯದಲ್ಲಿ ತೊಡಗಿಸಿಕೊಂಡಿರುವ ಇವರು, ಪದವಿ ವ್ಯಾಸಂಗದ ಅವಧಿಯಲ್ಲಿ “ಅಂತರಂಗದ ಹೊನಲು” ಚುಟುಕು ಸಂಕಲನ ಪ್ರಕಟಿಸಿ, ಆ ಕೃತಿಗೆ ರಾಜ್ಯಪ್ರಶಸ್ತಿ ಲಭಿಸಿದೆ.

  ಸ್ಪಂದನ ವಾಹಿನಿಯ “ನಮ್ಮೂರ ಜಾಣೆ” ಕಾರ್ಯಕ್ರಮದಲ್ಲಿ ಸಂದರ್ಶನ ಪ್ರಸಾರಗೊಂಡಿದೆ.

  ಮಂಗಳೂರು ಆಕಾಶವಾಣಿಯಲ್ಲಿ ನ್ಯಾನೋಕಥೆಗಳು ಮತ್ತು ಕವನ ವಾಚನ ಕಾರ್ಯಕ್ರಮಗಳು ಪ್ರಸಾರಗೊಂಡಿವೆ.

  ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾದ ರಾಜ್ಯಮಟ್ಟದ “ಹಾಸ್ಯ ಚುಟುಕು ಸಂಭ್ರಮ”ದಲ್ಲಿ ಹಾಸ್ಯ ಚುಟುಕುಗಳನ್ನು ವಾಚಿಸಿದ್ದಾರೆ. ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯವರು ಆಯೋಜಿಸಿದ ರಾಜ್ಯಮಟ್ಟದ “ಕಾರ್ಡಿನಲ್ಲಿ ಕಥೆ ಬರೆಯುವ ಸ್ಪರ್ಧೆ”ಯಲ್ಲಿ ಪ್ರಥಮ ಬಹುಮಾನ ಲಭಿಸಿದೆ.

  ಇಂಚರ ಸಾಹಿತ್ಯ ಕುಟೀರ, ಕೋಲಾರ ಇವರು “ಇಂಚರ ಸಾಹಿತ್ಯ ಪ್ರಭೆ” ಮತ್ತು “ಕಥಾ ಚಿಂತಾಮಣಿ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

   ರಾಜ್ಯ ಯುವ ಬರಹಗಾರರ ಒಕ್ಕೂಟ, ಶಿವಮೊಗ್ಗ ಇವರು “ಸಾಹಿತ್ಯ ಸಾರಥಿ” ಬಿರುದು ನೀಡಿದ್ದಾರೆ. ಕೃಷ್ಣಪ್ರಿಯ ಕಲಾಬಳಗದವರು “ಕಲಾ ಕೌಸ್ತುಭ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ವಿಜಯ ಪಥ ಸಂಸ್ಥೆಯವರು “ಪರಿಸರ ಮಿತ್ರ” ಪ್ರಶಸ್ತಿ ನೀಡಿದ್ದಾರೆ. ಜ್ಞಾನತೃಷೆ ಕನ್ನಡ ವೇದಿಕೆಯವರು “ಸಾಹಿತ್ಯ ರತ್ನ” ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

   2026 ರಲ್ಲಿ ಉಡುಪಿ ಜಿಲ್ಲಾಮಟ್ಟದ “ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ” ಲಭಿಸಿದೆ.

  ಆದಿವುಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹತ್ತು ವರ್ಷ ಶಿಕ್ಷಕಿಯಾಗಿ, ಎರಡು ವರ್ಷ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಪ್ರಸ್ತುತ ಆದಿವುಡುಪಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿರುವ ಇವರು ಕಂಬಳಕಟ್ಟದ ನಿವೃತ್ತ ಬ್ಯಾಂಕ್ ಉದ್ಯೋಗಿ ಹರಿಕೃಷ್ಣ ಭಟ್ ಮತ್ತು ತುಳಸಿ ದಂಪತಿಗಳ ಸುಪುತ್ರಿ.

Leave a comment

Your email address will not be published. Required fields are marked *

eMedia Kannada  @2025. All Rights Reserved.