• Home  
  • ಕಾಪು ಕಾಂಗ್ರೆಸ್‌ ನಿಂದ ದಂಡತೀರ್ಥ ಶಾಲೆಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳದ ಆಯೋಜನೆ (Mega Job Fair Organized by Kapu Congress at Dandatheertha School Enclosure)
- social work - ರಾಜಕೀಯ

ಕಾಪು ಕಾಂಗ್ರೆಸ್‌ ನಿಂದ ದಂಡತೀರ್ಥ ಶಾಲೆಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳದ ಆಯೋಜನೆ (Mega Job Fair Organized by Kapu Congress at Dandatheertha School Enclosure)

Share: ಕಾಪು ಕಾಂಗ್ರೆಸ್‌ ನಿಂದ ದಂಡತೀರ್ಥ ಶಾಲೆಯ ಆವರಣದಲ್ಲಿ ಬೃಹತ್ ಉದ್ಯೋಗ ಮೇಳದ ಆಯೋಜನೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತ್ರತ್ವ  (Kaup) ಕಾಪು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಉಡುಪಿ ಜಿಲ್ಲೆ ಮತ್ತು ಕಾಪು ವಿಧಾನಸಭಾ ಕ್ಷೇತ್ರ ಇವರ ಜಂಟಿ ಆಶ್ರಯದಲ್ಲಿ ದಂಡತೀರ್ಥ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಸಾಯಿರಾಧಾ ಗ್ರೂಫ್ಸ್ ನ ಆಡಳಿತ ನಿರ್ದೇಶಕ ಮನೋಹರ್ ಶೆಟ್ಟಿ ಉದ್ಘಾಟಿಸಿದರು.   ಕಾರ್ಯಕ್ರಮವನ್ನು […]

 (Kaup) ಕಾಪು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಉಡುಪಿ ಜಿಲ್ಲೆ ಮತ್ತು ಕಾಪು ವಿಧಾನಸಭಾ ಕ್ಷೇತ್ರ ಇವರ ಜಂಟಿ ಆಶ್ರಯದಲ್ಲಿ ದಂಡತೀರ್ಥ ವಿದ್ಯಾಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಸಾಯಿರಾಧಾ ಗ್ರೂಫ್ಸ್ ನ ಆಡಳಿತ ನಿರ್ದೇಶಕ ಮನೋಹರ್ ಶೆಟ್ಟಿ ಉದ್ಘಾಟಿಸಿದರು.

  ಕಾರ್ಯಕ್ರಮವನ್ನು ಉದ್ಘಾಟಿಸಿದ ಮನೋಹರ್ ಶೆಟ್ಟಿ ಮಾತನಾಡಿ, ಎರಡು ವರ್ಷಗಳಿಂದ ನಿರುದ್ಯೋಗಿ ಯುವಜನರಿಗಾಗಿ ಉದ್ಯೋಗ ಮೇಳ ಹಮ್ಮಿಕೊಂಡು ಉದ್ಯೋಗ ದೊರಕಿಸಿಕೊಡುವ ಮೂಲಕ ಯುವ ಜನಾಂಗಕ್ಕೆ ಬದುಕುಕಟ್ಟಿಕೊಳ್ಳಲು ಪ್ರೇರಣೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

  ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಇಂದು ನಮ್ಮ ಯುವಕರು ಜೀವನದಲ್ಲಿ ಸಾಧನೆ ಮಾಡಬೇಕಾದರೆ ಅವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯಬೇಕು ಎಂದರು.  

 ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ವಿನಯ ಕುಮಾರ್ ಸೊರಕೆಯವರು ಚುನಾವಣೆಯಲ್ಲಿ ಸೋತರೂ ಜನರಗಾಗಿ ಸೇವೆ ನೀಡುವುದನ್ನು ಮರೆತಿಲ್ಲ. ನಾವು ಅವರಿಗೆ ಶಕ್ತಿ ತುಂಬುವ ಮೂಲಕ ಅವರ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲಬಹುದಾಗಿದೆ ಎಂದರು.

  ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕರಾವಳಿಯ ನಿರುದ್ಯೋಗಿ ಯುವಜನರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉಪಯೋಗವಾಗಲಿ ಎಂಬ ಉದ್ದೇಶದೊಂದಿಗೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ‌. ಎರಡನೇ ವರ್ಷದ ಉದ್ಯೋಗ ಮೇಳದಲ್ಲಿ 61 ಪ್ರಮುಖ ಕಂಪೆನಿಗಳು, ಏಳು ಸಾವಿರಕ್ಕೂ‌ ಅಧಿಕ ಉದ್ಯೋಗಾವಕಾಶಗಳಿವೆ. ನೇರ ಸಂದರ್ಶನದಲ್ಲಿ ಪಾಸಾದವರಿಗೆ ಸ್ಥಳದಲ್ಲೇ ನೇಮಕಾತಿ ಪತ್ರ ನೀಡಲಾಗುತ್ತಿದ್ದು, ಈ ಮೂಲಕ ನಿರುದ್ಯೋಗ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದರು.

 ಗಣ್ಯರಾದ ನಡಿಕೆರೆ ರತ್ನಾಕರ ಶೆಟ್ಟಿ, ಎಂ. ಎ. ಗಫೂರ್, ಅಶೋಕ್ ಕುಮಾರ್ ಕೊಡವೂರು, ಜೀತೇಂದ್ರ ಫುರ್ಟಾಡೋ, ನಾಸೀರ್‌, ಹರೀಶ್ ಕಿಣಿ, ಗೀತಾ ವಾಗ್ಲೆ, ಹರಿಪ್ರಸಾದ್ ರೈ, ನವೀನ್ ಚಂದ್ರ ಸುವರ್ಣ, ನವೀನ್‌ ಚಂದ್ರ ಜೆ ಶೆಟ್ಟಿ, ಶರ್ಪುದ್ದೀನ್ ಶೇಖ್, ಕರುಣಾಕರ ಪೂಜಾರಿ ಪಡುಬಿದ್ರಿ, ಹಸನಬ್ಬ ಶೇಖ್, ಶಾಂತಲತಾ ಶೆಟ್ಟಿ, ಮಹಮ್ಮದ್ ನಿಯಾಜ್, ವಾಹೀದ್ ಶೇಖ್, ಕಾಪು ದಿವಾಕರ ಶೆಟ್ಟಿ, ಹಸನಬ್ಬ ಶೇಖ್, ಪ್ರಶಾಂತ್ ಜತ್ತನ್ನ, ನಾಗೇಶ್ ಕುಮಾರ್ ಉದ್ಯಾವರ, ಜಿತೇಂದ್ರ ಪುರ್ಟಾಡೋ, ಶ್ರೀನಿವಾಸ್, ನವೀನ್ ಎನ್. ಶೆಟ್ಟಿ, ಅಖಿಲೇಶ್ ಕೋಟ್ಯಾನ್, ಸುಪ್ರೀತ್ ಶೆಟ್ಟಿ, ತಸ್ಲೀನ್‌ ಅರಹಾ, ಸಂತೋಷ್‌ ಪಡುಬಿದ್ರಿ, ಗಣೇಶ್‌ ಕೋಟ್ಯಾನ್‌, ಗೋಪಿನಾಥ್, ಅಶೋಕ್ ನಾಯರಿ, ದಿನಕರ ಶೆಟ್ಟಿ  ಉಪಸ್ಥಿತರಿದ್ದರು.

  ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಮೀರ್ ಕಾಪು ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.