• Home  
  • 200 ಯುನಿಟ್ ವಿದ್ಯುತ್ ಫ್ರೀ ಘೋಷಣೆ ಬೆನ್ನಲ್ಲೇ  ಯುನಿಟ್ ಬೆಲೆಯೇರಿಸಿದ ಇಂಧನ ಇಲಾಖೆ
- ತಂತ್ರಜ್ಞಾನ - ದೇಶ-ವಿದೇಶ - ವ್ಯವಹಾರ

200 ಯುನಿಟ್ ವಿದ್ಯುತ್ ಫ್ರೀ ಘೋಷಣೆ ಬೆನ್ನಲ್ಲೇ  ಯುನಿಟ್ ಬೆಲೆಯೇರಿಸಿದ ಇಂಧನ ಇಲಾಖೆ

Share: ಬೆಂಗಳೂರು‌ : ರಾಜ್ಯ ಕಾಂಗ್ರೆಸ್ ನ ಪ್ರಣಾಳಿಕೆಯ ಪೈಕಿ ಒಂದಾಗಿದ್ದ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಯ  ಜೊತೆಗೆ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯ  ಸರಕಾರ ಜನತೆಗೆ ಶಾಕ್ ನೀಡಿದೆ. ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್ ದರವನ್ನು ಏರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ, ಬೆಸ್ಕಾಂ ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 51 ಪೈಸೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಕ್ಟೋಬರ್ […]

ಬೆಂಗಳೂರು‌ : ರಾಜ್ಯ ಕಾಂಗ್ರೆಸ್ ನ ಪ್ರಣಾಳಿಕೆಯ ಪೈಕಿ ಒಂದಾಗಿದ್ದ ಗೃಹಜ್ಯೋತಿ ಯೋಜನೆಯಡಿ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಯ  ಜೊತೆಗೆ ವಿದ್ಯುತ್ ದರ ಏರಿಸುವ ಮೂಲಕ ರಾಜ್ಯ  ಸರಕಾರ ಜನತೆಗೆ ಶಾಕ್ ನೀಡಿದೆ.

ಆದಾಯದ ಕೊರತೆ ಮತ್ತು ನಷ್ಟವನ್ನು ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್ ದರವನ್ನು ಏರಿಸಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಅದರಂತೆ, ಬೆಸ್ಕಾಂ ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 51 ಪೈಸೆ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ. ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ 50 ಪೈಸೆ ಏರಿಕೆ ಮಾಡಲಾಗಿದೆ.

ಮೆಸ್ಕಾಂ (ಮಂಗಳೂರು) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 47 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ ಗೆ 46 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ̤.

ಸೆಸ್ಕಾಂ (ಮೈಸೂರು) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 41 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಹೆಸ್ಕಾಂ (ಹುಬ್ಬಳ್ಳಿ-ಧಾರವಾಡ) ಗ್ರಾಹಕರು ಜುಲೈ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 50 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಗೆಸ್ಕಾಂ (ಕಲಬುರಗಿ) ಗ್ರಾಹಕರು ಜುಲೈ 1 ರಿಂದ ಸೆಪ್ಟೆಂಬರ್ ವರೆಗೆ ಪ್ರತಿ ಯೂನಿಟ್ಗೆ 34 ಪೈಸೆ ಮತ್ತು ಅಕ್ಟೋಬರ್ 1 ರಿಂದ ಡಿಸೆಂಬರ್ 31 ರವರೆಗೆ ಪ್ರತಿ ಯೂನಿಟ್ಗೆ 33 ಪೈಸೆ ಹೆಚ್ಚು ಪಾವತಿಸಬೇಕಾಗುತ್ತದೆ. ಈ ನಡುವೆ ಬೆಸ್ಕಾಂ ಕೂಡ ವಿದ್ಯುತ್ ದರ ಪರಿಷ್ಕರಿಸಲು ಕೆಇಆರ್ಸಿ ಮುಂದೆ ಪರಿಶೀಲನಾ ಅರ್ಜಿ ಸಲ್ಲಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.