ವಿದ್ಯಾಗಿರಿ (ಮೂಡುಬಿದಿರೆ): ‘ಫ್ಯಾಷÀನ್ ಲೋಕದ ಸಾಧನಗೆ ಆಕಾಶವೇ ಮಿತಿ. ಇಲ್ಲಿ ಹಿಂಜರಿಕೆ ಇಲ್ಲದೇ ಹೆಜ್ಜೆ ಇಟ್ಟರೆ, ಯಶಸ್ಸು ಸಾಧ್ಯ’ ಎಂದು ವಸ್ತç ವಿನ್ಯಾಸಕಿ ಸ್ಥಿತಿ ಮಯ್ಯ ಹೇಳಿದರು.
ಆಳ್ವಾಸ್ ಕಾಲೇಜಿನ ಫ್ಯಾಷನ್ ಡಿಸೈನಿಂಗ್ ವಿಭಾಗವು ಹಮ್ಮಿಕೊಂಡ ‘ಅಭಿಕ್ಯ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಫ್ಯಾಷನ್ ಕ್ಷೇತ್ರವು ಇಂದು ಬೃಹದಾಕಾರವಾಗಿ ಬೆಳೆಯುತ್ತಿದ್ದು, ಸದ್ಬಳಕೆ ಮಾಡಿಕೊಳ್ಳಿ ಎಂದರು.
ಉದ್ಯಮಿ ಉದಯ ಪೂಜಾರಿ ಮಾತನಾಡಿ, ಫ್ಯಾಷÀನ್ ಜಗತ್ತಿನಲ್ಲಿ ಮೂಲಜ್ಞಾನವು ಬಹಳ ಮುಖ್ಯ. ಇಲ್ಲಿ ಸೃಜನಶೀಲತೆಯು ನಮ್ಮನ್ನು ಎತ್ತರಕ್ಕೆ ಕೊಂಡೊಯುತ್ತದೆ. ಕೇವಲ ವಿನ್ಯಾಸ ಮಾತ್ರವಲ್ಲ, ಉದ್ಯಮವನ್ನೂ ಮಾಡಬಹುದು. ಆದರೆ, ಬದ್ಧತೆ ಹಾಗೂ ತಲ್ಲೀನರಾದಷ್ಟು ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಫ್ಯಾಷÀನ್ ಎಂಬುದು ಇಂದು ಬೆಳೆಯುತ್ತಿರುವ ಪ್ರಪಂಚ. ಇಲ್ಲಿ ತೊಡಗಿಸಿಕೊಳ್ಳುವುದು ಹಾಗೂ ಪ್ರಚಲಿತ ಬೆಳವಣಿಗೆ ಬಗ್ಗೆ ಜ್ಞಾನ ಅಗತ್ಯ ಎಂದರು.
ವಿಭಾಗದ ಮುಖ್ಯಸ್ಥೆಯಾದ ಸವಿತಾ ಕುಮಾರಿ, ಕಾರ್ಯಕ್ರಮ ಸಂಯೋಜಕಿ ಪದ್ಮಪ್ರಿಯ ಇದ್ದರು. ಬಳಿಕ ಫ್ಯಾಶನ್ ಶೋ ನಡೆಯಿತು.

