ನೂತನ ಗೃಹ ಮಂತ್ರಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಉಡುಪಿ ಜಿಲ್ಲೆಗೆ ಪ್ರಥಮ ಬಾರಿಗೆ ಅಗಮಿಸಿದ ಡಾ.ಜಿ.ಪರಮೇಶ್ವರ್‌ರವರನ್ನು ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಿಲ್ಲಾ ಗಡಿ ಭಾಗವಾದ ಹೆಜಮಾಡಿಯಲ್ಲಿ ಮಂಗಳವಾರ ಸಂಜೆ ೪ ಗಂಟೆಯ ಸುಮಾರಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಹೆಜಮಾಡಿ ಟೋಲ್‌ಗೇಟ್ ಬಳಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನವೀನ್‌ಚಂದ್ರ ಸುವರ್ಣ ಹಾಗೂ ಸಂತೋಷ್ ಕುಮಾರ್ ಪಕ್ಕಾಲು ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿ ಮಲ್ಲಿಗೆ ಹಾರ, ರೇಷ್ಮೆ ಶಾಲು, ಹೂಗುಚ್ಚಗಳೊಂದಿಗೆ ಸ್ವಾಗತಿಸಿದರು.
ಉಡುಪಿ ಜಿಲ್ಲಾಡಳಿತ ಪರವಾಗಿ ಜಿಲ್ಲಾ ಎಸ್‌ಪಿ ಅಕ್ಷಯ್ ಹಾಕೆ ಸ್ವಾಗತಿಸಿದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡರುಗಳಾದ ಎಮ್.ಎ.ಗಫೂರ್, ದಿವಾಕರ ಶೆಟ್ಟಿ ಕಾಪು, ಡಾ.ರಾಜಶೇಖರ್ ಕೋಟ್ಯಾನ್, ನವೀನ್‌ಚಂದ್ರ ಜೆ.ಶೆಟ್ಟಿ, ಸುಧೀರ್ ಕುಮಾರ್ ವೈ., ಕಿಶನ್ ಹೆಗ್ಡೆ ಕೊಳ್ಕೆಬೈಲು, ಸರಸು ಡಿ.ಬಂಗೇರ, ಹರೀಶ್ ನಾಯಕ್ ಕಾಪು, ವೈ.ಸುಕುಮಾರ್, ಜಿತೇಂದ್ರ ಫುರ್ಟಾಡೋ, ನವೀನ್ ಎನ್.ಶೆಟ್ಟಿ, ಗಣೇಶ್ ಕೋಟ್ಯಾನ್, ರಮೀಝ್ ಹುಸೈನ್, ಅಬ್ದುಲ್ ಅಜೀಜ್, ಅಬ್ದುಲ್ ಹಮೀದ್, ದೀಪಕ್ ಕೋಟ್ಯಾನ್ ಇನ್ನ, ಯು.ಸಿ.ಶೇಖಬ್ಬ, ಶೇಖರ್ ಹೆಜ್ಮಾಡಿ, ದೀಪಕ್ ಎರ್ಮಾಳ್, ಸುಧೀರ್ ಕರ್ಕೇರ, ವಾಮನ ಕೋಟ್ಯಾನ್ ನಡಿಕುದ್ರು, ರೋಲ್ಫಿ ಡಿಕೋಸ್ತಾ, ದಿನೇಶ್ ಕೋಟ್ಯಾನ್, ವಿಕ್ರಮ್ ಕಾಪು, ಆಶಾ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು.

