ಬಿಫರ್ ಜಾಯ್ ಚಂಡಮಾರುತದ ಪ್ರಭಾವ ರಾಜ್ಯದ ಕರಾವಳಿಗೆ ಜೋರಾಗಿಯೇ ತಟ್ಟಿದ್ದು, ಬೃಹತ್ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
ಪರಿಣಾಮವಾಗಿ ಬುಧವಾರ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಭಾಗದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.
ಮೂಳೂರಿನಲ್ಲಿ ಕಡಲ್ಕೊರೆತದಿಂದ ದಡದಲ್ಲಿ ನಿರ್ಮಿಸಿದ ಕಲ್ಲು ಬಂಡೆಗಳ ತಡೆಗೋಡೆ ಸಮುದ್ರ ಪಾಲಾಗುತ್ತಿವೆ. ಜೊತೆಗೆ ಸಮುದ್ರ ತೀರದ ತೆಂಗಿನ ಮರಗಳು, ಭೂ ಭಾಗಗಳು ಸಮುದ್ರ ಪಾಲಾಗಿ, ಕಡಲತೀರದ ನಿವಾಸಿಗಳು ಆತಂಕದಲ್ಲಿ ದಿನ ದೂಡುವಂತಾಗಿದೆ.
ಈ ಭಾಗದಲ್ಲಿ ಕಳೆದ ವರ್ಷ ಕಡಲ್ಕೊರೆತ ದೊಡ್ಡ ಪ್ರಯಾಣದಲ್ಲಿ ಆದಾಗ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಶಾಶ್ವತ ಪರಿಹಾರದ ಭರವಸೆ ನೀಡಿದ್ದರು. ಆದರೆ ನಂತರ ವ್ಯವಸ್ಥಿತವಾಗಿ ತಡೆಗೋಡೆ ನಿರ್ಮಿಸದೇ ಈ ಬಾರಿಯೂ ಕಡಲ್ಕೊರೆತ ಉಂಟಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

