• Home  
  • ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರಿಂದ 3 ಕೋಟಿ 75 ಲಕ್ಷ ರೂ ಮೊತ್ತದ ಕಾಮಗಾರಿ ಉದ್ಘಾಟನೆ
- ಪ್ರಚಲಿತ - ರಾಜಕೀಯ

ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್‌ ಶೆಟ್ಟಿಯವರಿಂದ 3 ಕೋಟಿ 75 ಲಕ್ಷ ರೂ ಮೊತ್ತದ ಕಾಮಗಾರಿ ಉದ್ಘಾಟನೆ

Share:  ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ನಿಕಟಪೂರ್ವ ಶಾಸಕ ಲಾಲಾಜಿ ಆರ್ ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ 3 ಕೋಟಿ 75 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಶುಕ್ರವಾರ  ಮದ್ಯಾಹ್ನ೧೨  ಗಂಟೆಗೆ  ಶಾಸಕ  ಗುರ್ಮೆ ಸುರೇಶ್ ಶೆಟ್ಟಿ  ನೆರವೇರಿಸಿದರು.  ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಪಟ್ಟ ಬಳಿಯ ನಡಿದಂಡೆ ಸಂರಕ್ಷಣೆ – 2 ಕೋಟಿ, ಪರಪಟ್ಟ – ನದಿಕುದ್ರು ರಸ್ತೆಯ ಕಾಂಕ್ರೀಟಿಕರಣ – […]

 ಕಾಪು ವಿಧಾನಸಭಾ ಕ್ಷೇತ್ರದ ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆಗಳ ಅಭಿವೃದ್ಧಿಗೆ ನಿಕಟಪೂರ್ವ ಶಾಸಕ ಲಾಲಾಜಿ ಆರ್ ಮೆಂಡನ್ ಅವರ ಶಿಫಾರಸ್ಸಿನ ಮೇರೆಗೆ 3 ಕೋಟಿ 75 ಲಕ್ಷ ರೂಪಾಯಿ ಅನುದಾನ ಮಂಜೂರಾಗಿ ಕಾಮಗಾರಿ ಪೂರ್ಣಗೊಂಡಿದ್ದು, ಇದರ ಉದ್ಘಾಟನೆಯನ್ನು ಶುಕ್ರವಾರ  ಮದ್ಯಾಹ್ನ೧೨  ಗಂಟೆಗೆ  ಶಾಸಕ  ಗುರ್ಮೆ ಸುರೇಶ್ ಶೆಟ್ಟಿ  ನೆರವೇರಿಸಿದರು.

 ಹೆಜಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಪಟ್ಟ ಬಳಿಯ ನಡಿದಂಡೆ ಸಂರಕ್ಷಣೆ – 2 ಕೋಟಿ, ಪರಪಟ್ಟ – ನದಿಕುದ್ರು ರಸ್ತೆಯ ಕಾಂಕ್ರೀಟಿಕರಣ – 40 ಲಕ್ಷ, ಗುಂಡಿ ರಸ್ತೆ ಕಾಂಕ್ರೀಟಿಕರಣ – 50 ಲಕ್ಷ, ಕೂಪ್ಪಳ ರಸ್ತೆ ಕಾಂಕ್ರೀಟಿಕರಣ – 40 ಲಕ್ಷ, ಬ್ರಹ್ಮಾಸ್ಥಾನ ರಸ್ತೆ ಕಾಂಕ್ರೀಟಿಕರಣ – 40 ಲಕ್ಷ, ನದಿಕುದ್ರು ಜಾರಂದಾಯ ದೈವಸ್ಥಾನದ ಬಳಿಯ ರಸ್ತೆ ಕಾಂಕ್ರೀಟೀಕರಣ   ಸೇರಿದಂತೆ ಒಟ್ಟು 3 ಕೋಟಿ 75 ಲಕ್ಷ ರೂಪಾಯಿ ಮೊತ್ತದ ಕಾಮಗಾರಿಯ ಉದ್ಘಾಟನೆ ನೆರವೇರಿಸಲಾಯಿತು.

 ಈ ಸಂದರ್ಭದಲ್ಲಿ ಹೆಜಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಾಂಡುರಂಗ ಕರ್ಕೇರಾ, ಹೆಜಮಾಡಿ ಪಂಚಾಯತ್ ಸದಸ್ಯರುಗಳಾದ ಶರಣ್ ಕುಮಾರ್ ಮಟ್ಟು, ಪ್ರಸಾದ್ ಹೆಜಮಾಡಿ, ಜನಾರ್ಧನ್ ಹೆಜಮಾಡಿ, ಪ್ರಾಣೇಶ್ ಹೆಜಮಾಡಿ, ಮೋಹನ್ ಸುವರ್ಣ, ಸುಜಾತ, ನಳಿನಿ, ರೇಷ್ಮಾ, ಬಬಿತಾ,   ಸಚಿನ್ ಜಿ ನಾಯಕ್,   ಕೀರ್ತನ್ ಪೂಜಾರಿ  ಚಂದ್ರಹಾಸ್ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.