ಮಹಿಳಾ ಪೇದೆ ಹೃದಯಾಘಾತದಿಂದ ಮೃತ್ಯು;ತಂದೆ- ತಾಯಿ ಇಬ್ಬರನ್ನೂ ಕಳೆದುಕೊಂಡು ಅನಾಥವಾದ ಮಗು
ಬೆಂಗಳೂರು;ಕರ್ತವ್ಯ ಮುಗಿಸಿ ಮನೆಗೆ ಬಂದಿದ್ದ ಮಹಿಳಾ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂಚಾರಿ ಮಹಿಳಾ ಪೊಲೀಸ್ ಪ್ರಿಯಾಂಕಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಪ್ರಿಯಾಂಕ ಭಾನುವಾರ ಎಂದಿನಂತೆ ಕೆಲಸವನ್ನು ಮುಗಿಸಿಕೊಂಡು ಮನೆಗೆ ಹೋಗಿದ್ದು, ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
2018ರಲ್ಲಿ ಮದುವೆಯಾಗಿದ್ದ ಪ್ರಿಯಾಂಕ ಅವರ ಪತಿ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದರು.ಈ ವೇಳೆ ಗರ್ಭಿಣಿ ಇದ್ದ ಪ್ರಿಯಾಂಕಾಗೆ ಒಂದು ವರ್ಷದ ಮಗು ಇದೆ.
ಇದೀಗ ಪತಿಗೆ ಕಳೆದುಕೊಂಡ ಬೆನ್ನಲ್ಲೆ ಪ್ರಿಯಾಂಕ ಕೂಡ ಮೃತಪಟ್ಟಿದ್ದು, ಅಪ್ಪ- ಅಮ್ಮ ಇಬ್ಬರೂ ಇಲ್ಲದೆ ಪುಟ್ಟ ಮಗು ಅನಾಥವಾಗಿದೆ.

