• Home  
  • ಮಲ್ಪೆ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಸಂದರ್ಭ ತಳ್ಳಾಟ- 6 ವಿದ್ಯಾರ್ಥಿಗಳಿಗೆ ಗಾಯ ,ಆಸ್ಪತ್ರೆಗೆ ದಾಖಲು
- ಅಪರಾಧ

ಮಲ್ಪೆ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಸಂದರ್ಭ ತಳ್ಳಾಟ- 6 ವಿದ್ಯಾರ್ಥಿಗಳಿಗೆ ಗಾಯ ,ಆಸ್ಪತ್ರೆಗೆ ದಾಖಲು

Share:  ಮಲ್ಪೆ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ  ಕೊರತೆ ಇದ್ದರೂ, ಇದೀಗ  ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿರುವ ಕ್ರಮ ವಿರೋಧಿಸಿ ಗ್ರಾಮಸ್ಥರು ಆಯೋಜಿಸಿದ್ದ ಪ್ರತಿಭಟನೆ ಸಂದರ್ಭ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳಾಗಿದ್ದು, ಎದೆ,  ಬೆನ್ನು‌ ಮತ್ತು ಕೈಗಳಿಗೆ ಪೆಟ್ಟಾಗಿದೆ. ಇದೀಗ ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.  ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. […]

 ಮಲ್ಪೆ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ  ಕೊರತೆ ಇದ್ದರೂ, ಇದೀಗ  ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿರುವ ಕ್ರಮ ವಿರೋಧಿಸಿ ಗ್ರಾಮಸ್ಥರು ಆಯೋಜಿಸಿದ್ದ ಪ್ರತಿಭಟನೆ ಸಂದರ್ಭ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಎಲ್ಲರೂ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳಾಗಿದ್ದು, ಎದೆ,  ಬೆನ್ನು‌ ಮತ್ತು ಕೈಗಳಿಗೆ ಪೆಟ್ಟಾಗಿದೆ. ಇದೀಗ ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

 ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಿರುವಾಗ ಮತ್ತೋರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಇಲಾಖೆ ಮುಂದಾಗಿದೆ. ಈ ಸಂಬಂಧ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು.

 ಪ್ರತಿಭಟನೆಯ ಭಾಗವಾಗಿ ಗ್ರಾಮಸ್ಥರು ಶಾಲೆಗೆ ಬೀಗ ಹಾಕಿದ್ದಾರೆ. ಈ ವೇಳೆ ಬಿಇಓ ಹಾಗೂ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದರು.

ಪ್ರತಿಭಟನಾನಿರತ ಮಕ್ಕಳು ಬಿಸಿಲಲ್ಲಿ ನಿಂತು,  ಬಳಿಕ ಶಾಲೆಯ ಒಳಹೋಗುವಾಗ ತಳ್ಳಾಟ ನಡೆದ ಪರಿಣಾಮ ಮಕ್ಕಳು ಗಾಯಗೊಂಡರು.

ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ಈ ವೇಳೆ ತಳ್ಳಾಟ ನಡೆದಿದೆ. ಪುಟ್ಟ ಮಕ್ಕಳ ಎದೆ , ಬೆನ್ನಿಗೆ ಗಾಯಗಳಾಗಿದ್ದು ಮಕ್ಕಳಿಗೆ ಏನಾದರೂ ಹೆಚ್ಚು‌ಕಮ್ಮಿಯಾದರೆ ಯಾರು ಹೊಣೆ ಎಂದು ಪೋಷಕರಾದ ಆಶಾ ಎಂಬವರು ಆತಂಕ ತೋಡಿಕೊಂಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.