Tag: school

ಮಂಗಳೂರು ಶಾಲಾ ಕಾಲೇಜು

ಶಾಲೆಗಳಲ್ಲಿ ದೇಶ, ಸತ್ಯ, ಮೌಲ್ಯಗಳ ಭೋಧನೆ ಆಗಬೇಕು: ಲೆ। ಕರ್ನಲ್ ವಿವೇಕ್ ಬಿಂದ್ರ

ಅಮೃತ ವಿದ್ಯಾಲಯಂ ನಲ್ಲಿ ಶಾಲಾ ಮಂತ್ರಿ ಮಂಡಲ ಪದಗ್ರಹಣ ಮಂಗಳೂರು: ಶಾಲೆಗಳು ಮೌಲ್ಯಾಧಾರಿತ ಶಿಕ್ಷಣಕ್ಕೆ ಪ್ರಾಧನ್ಯತೆ ಕೊಟ್ಟು ವಿದ್ಯಾರ್ಥಿಗಳಿಗೆ ದೇಶ, ಧೈರ್ಯ, ಸತ್ಯ, ಮೌಲ್ಯಗಳನ್ನು ನೀಡಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ವಿವೇಕ್ ಬಿಂದ್ರ ಹೇಳಿದರು. ಮಂಗಳವಾರ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯಂ ಶಾಲೆಯಲ್ಲಿ ನೂತಾವಾಗಿ ರಚನೆಗೊಂಡ ವಿದ್ಯಾರ್ಥಿ ಮಂಡಲದ ಪದಗ್ರಹಣ ಮತ್ತು ವಿವಿಧ ಸಂಘಗಳ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಶಾಲೆಗಳು ಕೇವಲ ಶಿಕ್ಷಣವನ್ನು ನೀಡುವಂತಹ ಸಂಸ್ಥೆಯಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವಂತಹದ್ದು ಆಗಿರಬೇಕೆಂದು […]

ಕರಾವಳಿ

ಮುಂದುವರಿದಮಳೆ: ನಾಳೆಗುರುವಾರ(ಜು.27) ರಂದು ಉಡುಪಿದ. ಕ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ

ಮುಂದುವರಿದ ಮಳೆ: ನಾಳೆ ಗುರುವಾರ(ಜು.27) ರಂದು ಉಡುಪಿ ದ. ಕ ಜಿಲ್ಲೆಯ ಶಾಲೆ ಗಳಿಗೆ ಕಾಲೇಜುಗಳಿಗೆ ರಜೆ ಘೋಷಣೆ ಮುಂದುವರಿದ ಮಳೆ: ನಾಳೆ ಗುರುವಾರ(ಜು.27) ರಂದು ಉಡುಪಿ ದ. ಕ ಜಿಲ್ಲೆಯ ಶಾಲೆ ಗಳಿಗೆ ರಜೆ ಘೋಷಣೆ ಉಡುಪಿ, ದ.ಕ.  : ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂದುವರಿದ ಕಾರಣ ಜಿಲ್ಲೆಯಲ್ಲಿ ಜುಲೈ 27ರಂದು (ಗುರುವಾರ) ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹಾಗೂ ದ.ಕ ಜಿಲ್ಲಾಧಿಕಾರಿ […]

ಶಾಲಾ ಕಾಲೇಜು

ಕೋಟ – ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳ ನಾಟಿ ಕಲರವ

ಕೋಟ – ಭತ್ತದ ಗದ್ದೆಯಲ್ಲಿ ವಿದ್ಯಾರ್ಥಿಗಳ ನಾಟಿ ಕಲರವ  ಕೋಟ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೋಟ ಶಿವರಾಮ ಕಾರಂತರು ಕಲಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟ ಇಲ್ಲಿನ ಮಕ್ಕಳು ಶಿಕ್ಷಣದ ಜೊತೆ ರೈತ ಪರಂಪರೆಯ ಭತ್ತದ ನಾಟಿ ಗೈಯುವ ಕುರಿತು ಪಾಠ  ಕೋಟತಟ್ಟು ಪರಿಸರದ ಹಂದಟ್ಟು ಕೃಷಿ ಭೂಮಿಯಲ್ಲಿ ನಡೆಯಿತು. ದಿನಂಪ್ರತಿ ಪಾಠಪ್ರವಚನದಲ್ಲೆ ಕಾಲ ಕಳೆಯುವ ಮಕ್ಕಳಿಗೆ ದೇಶದ ಬೆನ್ನಲು ರೈತ ಪರಂಪರೆಯ ಕೃಷಿ ಕಾಯಕದ ತುಡಿತ ಮಿಡಿಯುವ ಭತ್ತದ ನಾಟಿ ಪ್ರಕ್ರಿಯೆ, […]

ಶಾಲಾ ಕಾಲೇಜು

ಉಡುಪಿ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಗತಿ ಆರಂಭ

ಉಡುಪಿ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಗತಿ ಆರಂಭ  ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ಆಶ್ರಯದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ಆಶಯದಂತೆ ಮೂಡುಬೆಳ್ಳೆಯ ಸೈಂಟ್ ಲಾರೆನ್ಸ್ ಪ್ರೌಢಶಾಲೆಯಲ್ಲಿ ಯಕ್ಷಶಿಕ್ಷಣ ತರಗತಿಯನ್ನು ಶಾಲಾ ಮುಖ್ಯಸ್ಥರಾದ ವಂದನೀಯ ಪ್ರದೀಪ್ ಕಾರ್ಡೋಝಾ ಸೋಮವಾರ   ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಸುನೀತಾ ಕಾಮತ್ ಸ್ವಾಗತಿಸಿದರು. ಯಕ್ಷ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪಾಧ್ಯಕ್ಷ ವಿ.ಜಿ ಶೆಟ್ಟಿ, ವಿದ್ಯಾಪ್ರಸಾದ್, ನಿವ್ರತ್ತ ಶಿಕ್ಷಕ ಪದ್ಮನಾಭ ನಾಯಕ್  ಶುಭಾಶಂನೆಗೈದರು. […]

ಕರಾವಳಿ ಪ್ರಚಲಿತ ಶಾಲಾ ಕಾಲೇಜು

ಹೆತ್ತವರ ಪೂಜೆ ಮಾಡಿದ ಮಕ್ಕಳು: ಮಂಗಳೂರಿನ ಶಾಲೆಯಲ್ಲಿ ಭಾರತದ ಸಂಸ್ಕೃತಿ ದರ್ಶನ

ಮಂಗಳೂರು: ಇಲ್ಲಿನ ಶಾಲೆಯೊಂದರಲ್ಲಿ ಶಾಲಾ ಮಕ್ಕಳು ತಮ್ಮ ಹೆತ್ತವರ ಪಾದ ತೊಳೆದು, ಹೂವು ಸಮರ್ಪಿಸಿ, ತಿಲಕ ಹಚ್ಚಿ, ಶಿರಸಾ ನಮಿಸಿ, ಆರತಿ ಬೆಳಗಿ ಹೆತ್ತವರ ಪೂಜೆ ಮಾಡಿ ಗುರು ಪೂರ್ಣಿಮೆಯನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ನಗರದ ಅಮೃತ ವಿದ್ಯಾಲಯಂ ಶಾಲೆಯಲ್ಲಿ ಗುರುಪೂರ್ಣಿಮೆ ಆಚರಣೆಯ ನಿಮಿತ್ತ ಮಾತಾ ಪಿತಾ ಗೌರವ ಸಮರ್ಪಣೆಯ ಸಂಸ್ಕೃತಿ ಪೂಜೆ ನೆರವೇರಿತು. ಈ ಸಂದರ್ಭ ಶಾಲಾ ಮಕ್ಕಳು ಭಾರತೀಯ ಸನಾತನ ಸಂಸ್ಕೃತಿಯಂತೆ ತಮ್ಮ ತಾಯಿ ತಂದೆಗೆ ವಿದ್ಯುಕ್ತವಾಗಿ ಪಾದ ಪೂಜೆ ಮಾಡಿ ಗೌರವ ಸಲ್ಲಿಸಿ ಆಶೀರ್ವಾದ […]

ಕರಾವಳಿ ಶಾಲಾ ಕಾಲೇಜು

ಭಾರೀ ಮಳೆ ಹಿನ್ನೆಲೆ; ದಕ್ಷಿಣ ಕನ್ನಡ & ಉಡುಪಿ ಜಿಲ್ಲೆಯಲ್ಲಿ ಶಾಲೆ, ಪಿಯು ಕಾಲೇಜುಗಳಿಗೆ ನಾಳೆ(ಜೂ.7)ಯೂ ರಜೆ

ಮಂಗಳೂರು:ದ.ಕ.ಜಿಲ್ಲೆಯಲ್ಲಿ ವ್ಯಾಪಕ ಮಳೆ ಹಿನ್ನೆಲೆ, ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು, ಪದವಿಪೂರ್ವ ಕಾಲೇಜುಗಳಿಗೆ ಜು.7ರಂದು ರಜೆ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ನೀರು ನಿಲ್ಲುವ ತಗ್ಗು ಪ್ರದೇಶ ಕೆರೆ, ನದಿ, ಸಮುದ್ರ ತೀರಕ್ಕೆ ಮಕ್ಕಳು ತೆರಳದಂತೆ ಪಾಲಕರು ಎಚ್ಚರಿಕೆ ವಹಿಸುವಂತೆ ಸೂಚನೆಯನ್ನು ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲೂ ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜೂ(7) ನಾಳೆ ಜಿಲ್ಲೆಯ ಎಲ್ಲಾ ಶಾಲಾ-ಪದವಿ ಪೂರ್ವ ಕಾಲೇಜುಗಳಿಗೆ […]

ಕರಾವಳಿ

ಉಚ್ಚಿಲ ಸರಸ್ವತಿ ಮಂದಿರ ಶಾಲೆಯಲ್ಲಿ ವನಮಹೋತ್ಸವ ಅಂಗವಾಗಿ ಗಿಡ ವಿತರಣಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗೆ ಸನ್ಮಾನ

ಜಿಲ್ಲಾ ಗೃಹರಕ್ಷಕದಳ, ಕಾಪು ಮತ್ತು ಪಡುಬಿದ್ರಿ ಘಟಕ, ಸರಸ್ವತಿ ಮಂದಿರ ಶಾಲೆ, ಉಚ್ಚಿಲ ಇವರ ಜಂಟಿ ಆಶ್ರಯದಲ್ಲಿ ಶನಿವಾರ ಸರಸ್ವತಿ ಮಂದಿರ ಶಾಲೆಯ ಸಭಾಭವನದಲ್ಲಿ ವನಮಹೋತ್ಸವ ಅಂಗವಾಗಿ ನಡೆದ  ಸಸಿಗಳ ವಿತರಣಾ ಕಾರ್ಯಕ್ರಮ”ದಲ್ಲಿ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸಾಂಕೇತಿಕವಾಗಿ  ಸಸಿಗಳನ್ನು ವಿತರಿಸುವ ಮೂಲಕ  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಶಾಸಕರು ಎಸ್.ಎಸ್.ಎಲ್. ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. […]

ಅಪರಾಧ

ಮಲ್ಪೆ ಸರಕಾರಿ ಶಾಲೆಯಲ್ಲಿ ಪ್ರತಿಭಟನೆ ಸಂದರ್ಭ ತಳ್ಳಾಟ- 6 ವಿದ್ಯಾರ್ಥಿಗಳಿಗೆ ಗಾಯ ,ಆಸ್ಪತ್ರೆಗೆ ದಾಖಲು

 ಮಲ್ಪೆ: ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ  ಕೊರತೆ ಇದ್ದರೂ, ಇದೀಗ  ಓರ್ವ ಶಿಕ್ಷಕರನ್ನು ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಮುಂದಾಗಿರುವ ಕ್ರಮ ವಿರೋಧಿಸಿ ಗ್ರಾಮಸ್ಥರು ಆಯೋಜಿಸಿದ್ದ ಪ್ರತಿಭಟನೆ ಸಂದರ್ಭ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಗೊಂಡ ವಿದ್ಯಾರ್ಥಿಗಳನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಎಲ್ಲರೂ ಪ್ರಾಥಮಿಕ ಶಾಲೆಯ ಪುಟ್ಟ ಮಕ್ಕಳಾಗಿದ್ದು, ಎದೆ,  ಬೆನ್ನು‌ ಮತ್ತು ಕೈಗಳಿಗೆ ಪೆಟ್ಟಾಗಿದೆ. ಇದೀಗ ಗಾಯಗೊಂಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.  ಕೋಡಿಬೆಂಗ್ರೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ಹೀಗಿರುವಾಗ […]

ಪ್ರಚಲಿತ

ಶಿರ್ವ ಹಿಂದೂ ಪದವಿ ಪೂರ್ವ ಕಾಲೇಜಿನ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ  

 2022-23 ನೇ ಸಾಲಿನ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಇಂದು ದಿನಾಂಕ 12-06-2023 ರಂದು ಹಿಂದೂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಗೌರವಾರ್ಪಣೆ ಸಮಾರಂಭದಲ್ಲಿ ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿದರು.  ಕಾರ್ಯಕ್ರಮದಲ್ಲಿ 2022-23 ಸಾಲಿನ ಪಿ.ಯು.ಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಪಡೆದ ಅಂಶಿ ಎಸ್ ಶೆಟ್ಟಿ (594/600), ಮಂಜುಳಾ ಕಾಮತ್ (573/600) […]

ಕರಾವಳಿ

ವಿದ್ಯಾರ್ಥಿಗಳ ಸಾಧನೆಯೇ ದಾನಿಗಳಿಗೆ ಪ್ರೇರಣೆ: ಡಾ. ಅಶೋಕ್ ಕಾಮತ್

 ವಿದ್ಯಾರ್ಥಿಗಳು ಮಾಡುವ ಗರಿಷ್ಠ ಮಟ್ಟದ ಶೈಕ್ಷಣಿಕ ಸಾಧನೆಗಳಿಂದ ದಾನಿಗಳು ಹೆಚ್ಚು ಹೆಚ್ಚು ಪ್ರೇರಣೆ ಹೊಂದಿ ಅವರ  ಶೈಕ್ಷಣಿಕ ಅವಶ್ಯಕತೆ ಗಳಿಗೆ ಸ್ಪಂದನ ನೀಡುವರು  ಎಂದು ಶಿಕ್ಷಣ ತಜ್ಞ, ಡಯಟ್ ಉಪ ಪ್ರಾಂಶುಪಾಲ ಡಾ. ಅಶೋಕ್ ಕಾಮತ್ ಅಭಿಪ್ರಾಯಪಟ್ಟರು. ಅವರು ಉಡುಪಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಿಗೆ ಒನ್ ಗುಡ್ ಸ್ಟೆಪ್, ಬೆಂಗಳೂರು ಇವರು ಕೊಡ ಮಾಡಿಸಿದ ಉಚಿತ ನೋಟ್ ಪುಸ್ತಕ ವಿತರಣಾ ಸಮಾರಂಭದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿ ಮಾತನಾಡುತ್ತಿದ್ದರು. ದಾನಿ […]

eMedia Kannada  @2025. All Rights Reserved.