• Home  
  •         ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವಕಾಲೇಜು; ವಿಶ್ವಯೋಗ ದಿನಾಚರಣೆ
- ಪ್ರಚಲಿತ

        ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವಕಾಲೇಜು; ವಿಶ್ವಯೋಗ ದಿನಾಚರಣೆ

Share: ಪಡುಬಿದ್ರಿ: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಿನ್ನಿಗೋಳಿಯ ಖ್ಯಾತ ಯೋಗ ಪಟು ಶ್ರೀಹರಿರಾಜ್‌ ಶೆಟ್ಟಿಗಾರ್‌ರವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು. ಅವರು ಮಾತನಾಡಿ ಯೋಗ ಮಕ್ಕಳಿಗೆ ಏಕಾಗ್ರತೆ, ಅರೋಗ್ಯ, ಶಾಂತಿ, ನೆಮ್ಮದಿಯನ್ನು ತಂದು ಕೊಡುತ್ತದೆ. ಒತ್ತಡದಿಂದ ಬಿಡುಗಡೆ ಹೊಂದಲು ಯೋಗ ಅತ್ಯಂತ ಸಹಕಾರಿ. ದಿನನಿತ್ಯಬೆಳಿಗ್ಗಿನ ಹೊತ್ತಿನಲ್ಲಿ೧೫  ನಿಮಿಷವಾದರೂ ಯೋಗ ಮತ್ತು ಪ್ರಾಣಾಯಾಮ ಮಾಡಿದರೆ ಬಹಳಷ್ಟುಪ್ರಯೋಜನವಿದೆ ಎಂದರು. ವಿದ್ಯಾರ್ಥಿಗಳಾದ ಮನೀಶ್‌ ಪ್ರಥಮ ಕಲಾ ವಿಭಾಗ, ೧೦ನೇತರಗತಿಯ ಮಲ್ಲೇಶ್‌-ರಕ್ಷಿತಾ ಹಾಗೂ ಜೀವಿತಾ […]

ಪಡುಬಿದ್ರಿ: ಇಲ್ಲಿನ ಅದಮಾರು ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಿನ್ನಿಗೋಳಿಯ ಖ್ಯಾತ ಯೋಗ ಪಟು ಶ್ರೀಹರಿರಾಜ್‌ ಶೆಟ್ಟಿಗಾರ್‌ರವರು ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.

ಅವರು ಮಾತನಾಡಿ ಯೋಗ ಮಕ್ಕಳಿಗೆ ಏಕಾಗ್ರತೆ, ಅರೋಗ್ಯ, ಶಾಂತಿ, ನೆಮ್ಮದಿಯನ್ನು ತಂದು ಕೊಡುತ್ತದೆ. ಒತ್ತಡದಿಂದ ಬಿಡುಗಡೆ ಹೊಂದಲು ಯೋಗ ಅತ್ಯಂತ ಸಹಕಾರಿ. ದಿನನಿತ್ಯಬೆಳಿಗ್ಗಿನ ಹೊತ್ತಿನಲ್ಲಿ೧೫  ನಿಮಿಷವಾದರೂ ಯೋಗ ಮತ್ತು ಪ್ರಾಣಾಯಾಮ ಮಾಡಿದರೆ ಬಹಳಷ್ಟುಪ್ರಯೋಜನವಿದೆ ಎಂದರು.

ವಿದ್ಯಾರ್ಥಿಗಳಾದ ಮನೀಶ್‌ ಪ್ರಥಮ ಕಲಾ ವಿಭಾಗ, ೧೦ನೇತರಗತಿಯ ಮಲ್ಲೇಶ್‌-ರಕ್ಷಿತಾ ಹಾಗೂ ಜೀವಿತಾ ಯೋಗಾಸನ ಪ್ರಾತ್ಯಕ್ಷಿಕೆ ನೆಡಿಸಿಕೊಟ್ಟರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸಂಜೀವನಾಯಕ್‌ ಕರ‍್ಯಕ್ರಮದ ಅಧ್ಯಕ್ಷತೆ ವಹಿಸಿದರು.

   ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀ ಶ್ರೀಕಾಂತ್‌ ರಾವ್‌, ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮಿನಾಯಕ್‌, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ನಿಶ್ಮಿತಾ ಶೆಟ್ಟಿಉಪಸ್ಥಿತರಿದ್ದರು.

ಎನ್‌ ಎಸ್‌ ಎಸ್‌ ಕಾರ‍್ಯಕ್ರಮಾಧಿಕಾರಿ ಡಾ| ಜಯಶಂಕರ್‌ ಕಂಗಣ್ಣಾರು ಸ್ವಾಗತಿಸಿದರು.

ಶ್ರೀ ಜ್ಯೋತೀಂದ್ರನಾಥ್‌ ರಾವ್‌  ಧನ್ಯವಾದವಿತ್ತರು. ಶ್ರೀ ದೇವಿಪ್ರಸಾದ್‌ ಬೆಳ್ಳಿಬೆಟ್ಟುಕಾರ‍್ಯಕ್ರಮ ನಿರ್ವಹಿಸಿದರು.     

Leave a comment

Your email address will not be published. Required fields are marked *

eMedia Kannada  @2025. All Rights Reserved.