ಕಾಪು ಮತ್ತು ಪಡುಬಿದ್ರಿ ವಲಯ ಗೃಹ ರಕ್ಷಕ ದಳದ ವತಿಯಿಂದ ಶನಿವಾರ ಬೆಳಗ್ಗೆ ಶ್ರೀ ಸರಸ್ವತಿ ಮಂದಿರ ಶಾಲಾ ಆವರಣದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಗಿಡ ನೆಡುವ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಗೃಹ ರಕ್ಷಕ ದಳವು ಸರಕಾರಿ ಇಲಾಖೆಗಳ ಆಪತ್ಬಾಂಧವರಾಗಿ ಕೆಲಸ ಮಾಡುವವರು. ಯಾವುದೇ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಆದರೂ ಅಲ್ಲಿಗೆ ಹೋಗಿ ಸೇವೆ ಮಾಡುತ್ತಾರೆ. ಪೊಲೀಸ್ ಇಲಾಖೆಯಲ್ಲಿ ಅವರ ಸೇವೆ ಮರೆಯಲು ಅಸಾಧ್ಯ. ಅವರಿಂದ ಇಂದು ನಡೆದ ವನಮಹೋತ್ಸವ ಕಾರ್ಯದಲ್ಲಿ ಭಾಗವಹಿಸುವುದು ಸಂತಸ ತಂದಿದೆ ಎಂದರು.
ಈ ಸಂದರ್ಭ ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ ಸಿ ಪೂವಯ್ಯ ಗ್ರಹ ರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ, ಉಪಕಮಾಂಡೆಂಟ್ ರಮೇಶ್, ಕುಮಾರ್ ಉಚ್ಚಿಲ, ನವೀನ್ ಕುಮಾರ್, ಶಾಲಾ ಸಂಚಾಲಕ ಗಂಗಾಧರ ಸುವರ್ಣ, ಶಾಲಾ ಮೂಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

