ಪಡುಬಿದ್ರಿಯಲ್ಲಿ ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಬ್ಯಾನರ್ ನ ಪಿಸುಮಾತು ಕನ್ನಡ ಮ್ಯೂಸಿಕ್ ವಿಡಿಯೋ ಅಲ್ಬಂ ಬಿಡುಗಡೆ
ಶುಭಾ ಶೆಟ್ಟಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಉಮೇಶ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ನಿರ್ಮಾಣದ ಪಿಸುಮಾತು ಕನ್ನಡ ಮ್ಯೂಸಿಕ್ ವಿಡಿಯೋದ ಬಿಡುಗಡೆಯು ಪಡುಬಿದ್ರಿಯ ಭಾರತ್ ಸಿನೇಮಾದಲ್ಲಿ ನಡೆಯಿತು.
ವಿನೂತನ ಕಥಾ ಹಂದರವನ್ನು ಹೊಂದಿರುವ ಮ್ಯೂಸಿಕ್ ವಿಡಿಯೋ ವನ್ನು ಕಾಪು ವಿನ ಮಾಜಿ ಶಾಸಕ ಲಾಲಾಜಿ ಆರ್ ಮೆಂಡನ್ ರವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಭವಾನಿ ಶಂಕರ್ ಹೆಗ್ಡೆ, ಸಂಜಯ್ ಶೆಟ್ಟಿ, ರತ್ನಾಕರ್, ಪಲ್ಲವಿ ಸಂತೊಷ್ ಶೆಟ್ಟಿ, ಮಿಥುನ್ ಹೆಗ್ಡೆ, ವಿಟ್ಟಲ್ ಶೆಟ್ಟಿ, ನಿರ್ಮಾಪಕರಾದ ಉಮೇಶ್ ಶೆಟ್ಟಿ, ಧನರಾಜ್ ಶೆಟ್ಟಿ, ನಾಯಕ ನಟ ಶೋಧನ್ ಶೆಟ್ಟಿ, ಶುಭಾ ಶೆಟ್ಟಿ, ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಉಪಾಧ್ಯಕ್ಷೆ ಯಶೋಧಾ ಪೂಜಾರಿ, ತಂತ್ರಜ್ಞರು, ನಟರು ಮತ್ತು ಇತರ ಗಣ್ಯರು ಉಪಸ್ತಿತರಿದ್ದರು.
ಈ ಸಂಧರ್ಭದಲ್ಲಿ ಪ್ರಾಣಿ ಪ್ರಿಯೆ ರಜನಿ ಶೆಟ್ಟಿ ಇವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು.
ಶುಭಾ ಶೆಟ್ಟಿ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಮ್ಯೂಸಿಕ್ ವಿಡಿಯೋದಲ್ಲಿ ಪ್ರಮುಖ ಪಾತ್ರದಲ್ಲಿ ಶೋಧನ್ ಶೆಟ್ಟಿ ಮತ್ತು ನಿರೀಕ್ಷಾ ಶೆಟ್ಟಿ ನಟಿಸಿದ್ದು, ಖ್ಯಾತ ಹಿನ್ನಲೆ ಗಾಯಕ ನಿಹಾಲ್ ತಾವ್ರೋ ಮತ್ತು ಡಿಯಲ್ ಡಿಸೋಜಾ ಧ್ವನಿ ನೀಡಿದ್ದಾರೆ.
ಶರತ್ ಪೂಜಾರಿ ನಿರ್ದೇಶನ ಮಾಡಿದ್ದು, ಪ್ರಸಾದ್ ಕೆ ಶೆಟ್ಟಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂದೀಪ್ ಸಿನೆಮಾಟೋಗ್ರಾಫಿ, ಪ್ರತಾಪ್ ಭಟ್ ರಚನೆ, ರವಿರಾಜ್ ಗಾಣಿಗ ಸಂಕಲನ ನಿರ್ವಹಿಸಿದ್ದಾರೆ.
ಸಾಹಿಲ್ ರೈ ಕಾರ್ಯಕ್ರಮ ನಿರ್ವಹಿಸಿದರು. ನೆರೆದಿದ್ದ ಪ್ರೇಕ್ಷಕರು ಮ್ಯೂಸಿಕ್ ವಿಡಿಯೋ ಕುರಿತಾಗಿ ಮೆಚ್ಚುಗೆಯ ಮಾತುಗಳನ್ನಾಡಿದರು.

