• Home  
  • ಮಂಗಳೂರು ನಗರದ ಹಲವೆಡೆ ಕೃತಕ ನೆರೆ, ರಸ್ತೆ, ಅಂಗಡಿಗಳು ಮುಳುಗಡೆ
- ಕರಾವಳಿ - ವಿಡಿಯೋ

ಮಂಗಳೂರು ನಗರದ ಹಲವೆಡೆ ಕೃತಕ ನೆರೆ, ರಸ್ತೆ, ಅಂಗಡಿಗಳು ಮುಳುಗಡೆ

Share: ಮಂಗಳೂರು: ಕೆಲವು ದಿನಗಳಿಂದ ಕರಾವಳಿಯಾದ್ಯಂತ ಉತ್ತಮ ವರ್ಷಧಾರೆಯಾಗುತ್ತಿದ್ದು, ಮಂಗಳೂರು ನಗರದ ಹಲವೆಡೆ ಕೃತಕ ನೆರೆ ಆವರಿಸಿದೆ. ರಸ್ತೆ, ಅಂಗಡಿಗಳು ಮುಳುಗಡೆಯಾಗಿವೆ. ಪಂಪ್ ವೆಲ್ ಮೇಲ್ಸೇತುವೆ ಅಡಿಭಾಗದಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರಕ್ಕೆ ಪ್ರವೇಶಿಸಲು ಪಂಪ್ ವೆಲ್ ಪ್ರಮುಖ ಮಾರ್ಗವಾಗಿದ್ದು, ಇದೀಗ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ನೀರು ಕಾಲುವೆಯಲ್ಲಿ ಹರಿಯಲು ಸಾಧ್ಯವಾಗದೆ ಪಂಪ್ ವೆಲ್ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಕಟ್ಟಿ ನಿಂತಿದೆ. ಹೀಗಾಗಿ ಇಲ್ಲಿ ವಾಹನಗಳು ಚಲಿಸಲು ಸಾಧ್ಯವಾಗದೆ ಸಾಲುಗಟ್ಟಿ […]

ಮಂಗಳೂರು: ಕೆಲವು ದಿನಗಳಿಂದ ಕರಾವಳಿಯಾದ್ಯಂತ ಉತ್ತಮ ವರ್ಷಧಾರೆಯಾಗುತ್ತಿದ್ದು, ಮಂಗಳೂರು ನಗರದ ಹಲವೆಡೆ ಕೃತಕ ನೆರೆ ಆವರಿಸಿದೆ. ರಸ್ತೆ, ಅಂಗಡಿಗಳು ಮುಳುಗಡೆಯಾಗಿವೆ.

ಪಂಪ್ ವೆಲ್ ಮೇಲ್ಸೇತುವೆ ಅಡಿಭಾಗದಲ್ಲಿ ನೀರು ತುಂಬಿಕೊಂಡಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಮಂಗಳೂರು ನಗರಕ್ಕೆ ಪ್ರವೇಶಿಸಲು ಪಂಪ್ ವೆಲ್ ಪ್ರಮುಖ ಮಾರ್ಗವಾಗಿದ್ದು, ಇದೀಗ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ನೀರು ಕಾಲುವೆಯಲ್ಲಿ ಹರಿಯಲು ಸಾಧ್ಯವಾಗದೆ ಪಂಪ್ ವೆಲ್ ಮೇಲ್ಸೇತುವೆ ಕೆಳಗಿನ ರಸ್ತೆಯಲ್ಲಿ ಕಟ್ಟಿ ನಿಂತಿದೆ. ಹೀಗಾಗಿ ಇಲ್ಲಿ ವಾಹನಗಳು ಚಲಿಸಲು ಸಾಧ್ಯವಾಗದೆ ಸಾಲುಗಟ್ಟಿ ನಿಂತಿವೆ. ಕೆಲವು ವಾಹನಗಳು ನೀರಿನಲ್ಲಿ ಸಾಗಲು ಯತ್ನಿಸಿದರೂ ಸಾಧ್ಯವಾಗದೆ ಸಿಕ್ಕಿ ಬಿದ್ದಿವೆ.

ನಗರ ಭಾಗದಿಂದ ತಲಪಾಡಿ, ತೊಕ್ಕೊಟ್ಟು, ಬಿ.ಸಿ.ರೋಡ್ ಮುಂತಾದೆಡೆಗೆ ಸಾಗುವ ಬಸ್, ಇನ್ನಿತರ ವಾಹನಗಳು ಸಿಕ್ಕಿಬಿದ್ದು, ಮೇಲ್ಸೇತುವೆಯ ಅವೈಜ್ಞಾನಿಕ ಕಾಮಗಾರಿಗೆ ಚಾಲಕರು, ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.