Tag: rain

ಪ್ರಚಲಿತ

ನಾಳೆಯಿಂದ 6 ದಿನಗಳ‌ ಕಾಲ ಗುಡುಗು ಸಹಿತ ಧಾರಾಕಾರ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ನಾಳೆಯಿಂದ 6 ದಿನ ಗುಡುಗು ಸಹಿತ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ಬೆಂಗಳೂರು ನಗರ, ರಾಮನಗರ, ಚಾಮರಾಜನಗರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ ಜಿಲ್ಲೆಯಲ್ಲಿ ಸೋಮವಾರ ಮಳೆ ಆಗಲಿದೆ. ಗಾಳಿ ವೇಗವು ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಬೀಸಲಿದೆ ಎಂದು ಸೂಚಿಸಿದೆ.

ಕರಾವಳಿ

ಗೋವಾದಲ್ಲಿ ವರುಣನ ಅರ್ಭಟ- ಭೂಕುಸಿತ ಅಪಾಯದಂಚಿನಲ್ಲಿರುವ ಮನೆಗಳು

ಗೋವಾದಲ್ಲಿ ವರುಣನ ಅರ್ಭಟ– ಭೂಕುಸಿತ ಅಪಾಯದಂಚಿನಲ್ಲಿರುವ ಮನೆಗಳು ಪಣಜಿ, 30 :ಗೋವಾ ರಾಜ್ಯದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಅತಿ ಹೆಚ್ಚು ಮಳೆ ಈ ವರ್ಷ ಸಂಭವಿಸಿದೆ. ಇದರಿಂದಾಗಿ ಕೆಲವೆಡೆ ಮರಗಿಡಗಳು ಧರೆಗುರುಳಿವೆ. ಅಲ್ಲದೇ ಗೋವಾ ವಾಸ್ಕೊ ಸಡಾ ರುಮಡಾವಾಡಾ ಮಸೀದಿ ಬಳಿ ಅನೇಕ ಸ್ಥಳಗಳಲ್ಲಿ ಭೂ ಕುಸಿತ ಕಂಡು ಬಂದಿದೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಭೂ ಕುಸಿತದಿಂದಾಗಿ ಗುಡ್ಡದ ಮೇಲಿದ್ದ ಮನೆಯ ಶೌಚಾಲಯ ಗುಡ್ಡದ ಕೆಳಭಾಗದಲ್ಲಿದ್ದ ಮತ್ತೊಂದು ಮನೆಯ ಮೇಲೆ ಬಿದ್ದಿದೆ. ಶನಿವಾರ ಮುಂಜಾನೆ […]

ಕರಾವಳಿ

ಮಳೆ ಹಿನ್ನಡೆ:  ಮುಂದಿನ 2 ವಾರ ದೇಶದ ಪಾಲಿಗೆ ಅತ್ಯಂತ ಮಹತ್ವದ ಅವಧಿ

ಮಳೆ ಹಿನ್ನಡೆ:  ಮುಂದಿನ 2 ವಾರ ದೇಶದ ಪಾಲಿಗೆ ಅತ್ಯಂತ ಮಹತ್ವದ ಅವಧಿ ಪುಣೆ, ಆ 26 : ದೇಶದ ಶೇಕಡ 31ರಷ್ಟು ಭೂಭಾಗ ಅನಾವೃಷ್ಟಿಯ ಭೀತಿ ಎದುರಿಸುತ್ತಿದ್ದು, ಭಾರೀ ವೈಪರೀತ್ಯ ಸ್ಥಿತಿ ಈ ಭಾಗದಲ್ಲಿ ಬಂದಿದೆ ಎಂದು ಹವಾಮಾನ ಇಲಾಖೆ ಬಹಿರಂಗಪಡಿಸಿದೆ.  ಜುಲೈ 27 ರಿಂದ ಆಗಸ್ಟ್ 23ರ ಅವಧಿಯ ಸ್ಟಾಂಡರ್ಡೈಸ್ಡ್ ಪ್ರಿಸಿಪಿಟೇಶನ್ ಇಂಡೆಕ್ಸ್ (ಎಸ್‍ಪಿಐ) ಅಂಕಿ ಅಂಶಗಳಿಂದ ಇದು ದೃಢಪಟ್ಟಿದೆ.  ಇದು ಕೃಷಿ, ಬೆಳೆಯ ಇಳುವರಿ ಮತ್ತು ಮಣ್ಣಿನ ತೇವಾಂಶ ಮೇಲೆ ಮಹತ್ವದ ಪರಿಣಾಮ ಬೀರಲಿದೆ. […]

ಕರಾವಳಿ

ರಾಜ್ಯದಲ್ಲಿ ಮತ್ತೆ 4 ದಿನ ಮಳೆ ಮುಂದುವರಿಕೆ

ರಾಜ್ಯದಲ್ಲಿ ಮತ್ತೆ 4 ದಿನ ಮಳೆ ಮುಂದುವರಿಕೆ ಬೆಂಗಳೂರು; ರಾಜ್ಯಾದ್ಯಂತ ಇನ್ನೂ ನಾಲ್ಕು ದಿನಗಳ ಕಾಲ ಭಾರಿ ಮಳೆ ಮುಂದುವರೆಯಲಿದೆ ಎನ್ನಲಾಗಿದ್ದು, 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜುಲೈ 26ರಂದು ಬೀದರ್, ಕಲಬುರಗಿ, ಉಡುಪಿ, ಬೆಳಗಾವಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಹಾಸನ, ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 27ರಂದು ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ, […]

ಕರಾವಳಿ ಶಾಲಾ ಕಾಲೇಜು

ಭಾರಿ ಮಳೆ: ನಾಳೆ (ಜು. 26) ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ: ನಾಳೆ (ಜು. 26) ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 26 ರಂದು ಬುಧವಾರ ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ  ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.   ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ, ಇಂಜಿನಿಯರಿಂಗ್, […]

ಕರಾವಳಿ

ಬುಧವಾರ (ಜು.26) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಬುಧವಾರ (ಜು.26) ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ   ಮಂಗಳೂರು, ಜು.25(ಕ.ವಾ): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಗಾಳಿ ಸಹಿತ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ರೆಡ್ ಅಲರ್ಟ್ ಘೋಷಣೆಯಾಗಿರುವುದರಿಂದ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರ, ಪ್ರಾಥಮಿಕ ಮತ್ತು ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಜು. 26ರ ಬುಧವಾರ ರಜೆ ಘೋಷಿಸಿ ಜಿಲ್ಲಾ ವಿಪತ್ತು ನಿರ್ವಹಣಾ […]

ಕರಾವಳಿ

ಕಾಪುವಿನ ಇನ್ನಂಜೆಯಲ್ಲಿ ಮಳೆಗೆ ಹಾನಿಯಾದ ಮನೆ ವೀಕ್ಷಿಸಿದ ಕಾಪು ಶಾಸಕ ಗುರ್ಮೆ, ಮನೆಯವರಿಗೆ ಸಾಂತ್ವನ

ಕಾಪುವಿನ ಇನ್ನಂಜೆಯಲ್ಲಿ ಮಳೆಗೆ ಹಾನಿಯಾದ ಮನೆ ವೀಕ್ಷಿಸಿದ ಕಾಪು ಶಾಸಕ ಗುರ್ಮೆ, ಮನೆಯವರಿಗೆ ಸಾಂತ್ವನ ಇನ್ನಂಜೆ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಇನ್ನಂಜೆ ಶಿವಾನಂದ ಪ್ರಭುರವರ ಮನೆಗೆ ಹಾನಿ ಉಂಟಾಗಿದ್ದು, ಮಂಗಳವಾರ ಸಂಜೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿ, ಮನೆಯವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಕಂದಾಯ ಅಧಿಕಾರಿಗಳಿಗೆ ಗರಿಷ್ಠ ಪರಿಹಾರ ನೀಡುವಂತೆ ಸೂಚಿಸಿದರು.    ಈ ಸಂದರ್ಭದಲ್ಲಿ ಕಂದಾಯ ಅಧಿಕಾರಿಗಳು, ಕಾಪು ಮಂಡಲ ಬಿಜೆಪಿ ಕಾರ್ಯದರ್ಶಿ  ಮಾಲಿನಿ ಇನ್ನಂಜೆ, ಪಾಂಗಾಳ […]

ಶಾಲಾ ಕಾಲೇಜು

ಭಾರಿ ಮಳೆ: ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜುಲೈ 25 ರಂದು ರಜೆ ಘೋಷಣೆ

ಭಾರಿ ಮಳೆ: ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ಜುಲೈ 25 ರಂದು ರಜೆ ಘೋಷಣೆ  ಉಡುಪಿ:  ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯ ಆರೆಂಜ್ ಅಲರ್ಟ್ ಮುನ್ಸೂಚನೆಯಂತೆ ಹೆಚ್ಚು ಮಳೆಯಾಗುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದಿನಾಂಕ:25.07.2023 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಕರಾವಳಿ

ಮಂಗಳೂರು : ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆ, ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ

ಮಂಗಳೂರು : ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆ,ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ  ಮಂಗಳೂರು : ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆಯಾಗುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ   ಮುಳುಗಡೆಯಾಗಿದೆ.  ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಿದ್ದು, ಸುಬ್ರಹ್ಮಣ್ಯದ ಸ್ನಾನಘಟ್ಟದ ​​ಲಗೇಜ್ ಕೊಠಡಿಗಳು ಮತ್ತು ಶೌಚಾಲಯಗಳಿಗೆ ನದಿ ನೀರು ನುಗ್ಗಿದೆ. ಭಾರೀ ಮಳೆಯಿಂದಾಗಿ ನೇತ್ರಾವತಿ, ಫಲ್ಗುಣಿ, ನದಿಗಳು ಮತ್ತು ಇತರ ಜಲಮೂಲಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ.  ಮಂಜೇಶ್ವರ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಜಲಾವೃತವಾಗಿದ್ದು, ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.  ಸುಬ್ರಹ್ಮಣ್ಯ, […]

ಕರಾವಳಿ

ಪಡುಬಿದ್ರಿಯಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಉರುಳಿದ ಮರ: ಶಾಸಕ, ಅಧಿಕಾರಿಗಳ ಭೇಟಿ

ಪಡುಬಿದ್ರಿಯಲ್ಲಿ ಬಾರಿ ಗಾಳಿ ಮಳೆಗೆ ಮನೆ ಮೇಲೆ ಉರುಳಿದ ಮರ: ಶಾಸಕ, ಅಧಿಕಾರಿಗಳ ಭೇಟಿ   ಪಡುಬಿದ್ರಿ ಕಂಚಿನಡ್ಕದಲ್ಲಿ ಭಾನುವಾರ ಬೀಸಿದ ಬಾರೀ ಗಾಳಿ ಮಳೆಗೆ ಇಲ್ಲಿನ ನಿವಾಸಿ ಇಂದಿರಾ ಅವರ ಮನೆ ಮೇಲೆ ಮರ ಬಿದ್ದು ಹಾನಿ ಉಂಟಾಗಿದ್ದು, ಭಾನುವಾರ  ಇಲಾಖಾಧಿಕಾರಿಗಳೊಂದಿಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಭೇಟಿ ಪರಿಶೀಲನೆ ನಡೆಸಿದ್ದಾರೆ.   ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಗರಿಷ್ಠ ಪರಿಹಾರ ನೀಡುವಂತೆ ಶಾಸಕ ಗುರಮೆಯವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.  ಈ ಸಂದರ್ಭದಲ್ಲಿ ಪಡುಬಿದ್ರಿ ಗ್ರಾಮ […]

eMedia Kannada  @2025. All Rights Reserved.