ಪಡುಬಿದ್ರಿಯಲ್ಲಿ ಮತ್ತೆ ಕಡಲ್ಕೊರೆತ ಪ್ರಾರಂಭಗೊಂಡಿದ್ದು, ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯ ೧.೫ ಕೋಟಿ ವೆಚ್ಚದ ಬೀಚ್ ಅಭಿವೃದ್ಧಿ ಕಾಮಗಾರಿ ಸಮುದ್ರ ಪಾಲಾಗುವ ಭೀತಿ ಎದುರಾಗಿದೆ.

ಇದೇ ರೀತಿ ಸಮುದ್ರ ಕೊರೆತ ಮುಂದುವರಿದಲ್ಲಿ ಬೀಚ್ ಅಭಿವೃದ್ಧಿಗೆ ಮಾಡಿದ ರಂಗವೇದಿಕೆ, ಅಳವಡಿಸಿದ ಇಂಟರ್ಲಾಕ್ ಟೈಲ್ಸ್ ಗಳು, ಇಲೆಕ್ಟ್ರಿಕ್ ಪೋಲ್ ಗಳು, ಅತ್ಯುತ್ತಮ ಶೌಚಾಲಯ , ವಾಚಿಂಗ್ ಟವರ್, ವಿಶ್ರಾಂತಿ ಕೊಠಡಿ, ಹಟ್ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಗಳು ಸಮುದ್ರ ಪಾಲಾಗುವ ಸಾಧ್ಯತೆ ಇದೆ.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮುತುವರ್ಜಿಯಿಂದ ಪಾಂಗಾಳದ ಗುತ್ತಿಗೆ ದಾರರೊಬ್ಬರು ಸಮುದ್ರ ತಡೆಗೋಡೆ ಯ ಕೆಲಸ ಮಾಡುತ್ತಿದ್ದಾರೆ. ಆದರೆ ತ್ವರಿತ ಗತಿಯಲ್ಲಿ ಕೆಲಸ ಸಾಗುತ್ತಿಲ್ಲ.

ಪಡುಬಿದ್ರಿ ಕಾಡಿಪಟ್ಣ ಮೊಗವೀರ ಮಹಾಸಭಾ ಅಧ್ಯಕ್ಷ ಅಶೋಕ್ ಈ ಬಗ್ಗೆ ಮಾದ್ಯಮ ದೊಡನೆ ಮಾತನಾಡಿ, ಜಿಲ್ಲೆಯಲ್ಲಿ ಅತೀ ಸುಂದರವಾದ ಈ ಪಡುಬಿದ್ರಿ ಬೀಚ್ ಉಳಿವಿಗಾಗಿ ಸರ್ಕಾರ ಪ್ರಯತ್ನ ಪಡಬೇಕು. ಬಹಳಷ್ಟು ವರ್ಷಗಳ ಹಿಂದೆ ಈ ರೀತಿಯಲ್ಲಿ ಕೊರೆತ ಆಗಿದೆ. ಇದೀಗ ತೌಕ್ತೆ ಚಂಡಮಾರುತದ ನಂತರ ಈ ರೀತಿಯಲ್ಲಿ ಕಡಲ್ಕೊರೆತ ಜಾಸ್ತಿಯಾಗಿದೆ ಎಂದರು.

