ಎರ್ಮಾಳಿನಲ್ಲಿ ೧೯೬೪ನೇ ಮದ್ಯವರ್ಜನ ಶಿಬಿರ ಸಮಾರೋಪ
ಪಡುಬಿದ್ರಿ : ಪೂಜ್ಯ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಯೋಜನೆಗಳು ಜನಮಾನಸಕ್ಕೆ ಸದಾಸರೆಯನ್ನು ನೀಡುತ್ತಿದೆ. ಮನ ಪರಿವರ್ತನೆಯ ಮೂಲಕ ಕುಡಿತ ಚಟ ಮುಕ್ತಗೊಳಿಸುವ ಮದ್ಯವರ್ಜನ ಶಿಬಿರದ ಮೂಲಕ ಅದೆಷ್ಟೋ ಕುಟುಂಬಗಳು ಸುಂದರ ಬದುಕು ಕಾಣಲು ಸಾಧ್ಯವಾಗಿದೆ. ಇಂತಹ ಹಲವಾರು ಯೋಜನೆಗಳ ಮೂಲಕ ಮಹಿಳೆಯರ ಸಬಲೀಕರಣದೊಂದಿಗೆ ಕುಟುಂಬ ಕಟ್ಟು ಹಾಗೂ ಮಹಿಳೆಯರ ಕಣ್ಣೀರನ್ನು ಒರೆಸುವ ಶ್ರೇಷ್ಠ ಯೋಜನೆಗಳು ಪೂಜ್ಯ ಧರ್ಮಾಧಿಕಾರಿಗಳಗಳ ಯೋಜನೆಗಳಿಗೆ ಶೋಭೆಯನ್ನು ತರುತ್ತಿದೆ ಎಂದು ಕಾಪು ಕ್ಷೇತ್ರ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಹೇಳಿದರು.
ಅವರು ಎರ್ಮಾಳು ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಸಭಾಂಗಣದಲ್ಲಿ ಜುಲೈ ೨೧ರಿಂದ ಜುಲೈ ೨೮ರ ತನಕ ನಡೆದ ೧೬೯೪ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಪಾಲ್ಗೊಂಡು ಮಾತನಾಡಿದರು.
೧೯೬೪ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಉಚ್ಚಿಲ ಇದರ ಅಧ್ಯಕ್ಷರಾದ ಕೇಶವ ಮೊಯ್ಲಿ ಮಾತನಾಡಿ, ಮನುಷ್ಯ ಜನ್ಮದಲ್ಲಿ ಶ್ರೇಷ್ಠ ಸಾಧನೆಗಳ ಮೂಲಕ ಸಾರ್ಥಕ್ಯವನ್ನು ಕಾಣಬೇಕು. ದುಶ್ಚಟ ಮುಕ್ತರಾಗಿ ಸುಂದರ ಸಮಾಜ ನಿರ್ಮಿಸೋಣ ಎಂದರು.
ಈ ಸಂದರ್ಭದಲ್ಲಿ ತೆಂಕ ಗ್ರಾ.ಪಂ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಎರ್ಮಾಳು ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಎರ್ಮಾಳು ಬೀಡು ಅಶೋಕ್ ರಾಜ್, ಕಾಪು ತಾಲೂಕು ಜನ ಜಾಗೃತಿ ವೇದಿಕೆ ಅಧ್ಯಕ್ಷ ಸತ್ಯಾನಂದ ನಾಯಕ್, ಉಡುಪಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ನವಜೀವನ ಸಮಿತಿ ಸದಸ್ಯ ಶೇಖರ, ಜನಜಾಗೃತಿ ಸಮಿತಿ ಸದಸ್ಯರಾದ ಹರೀಶ್ ಕೋಟ್ಯಾನ್, ಜನಾರ್ದನ ಬೆಳ್ಮಣ್, ಶಂಕರ್ ಕುಂದರ್, ಯೋಗ ಶಿಕ್ಷಕರಾದ ಶ್ಯಾಮಲಾ ವಿ.ಎನ್, ಜ್ಯೋತಿ, ಉಚ್ಚಿಲ ವಲಯ ಮೇಲ್ವಿಚಾರಕಿ ವಿಜಯಾ, ಆರೋಗ್ಯ ಸಹಾಯಕಿ ರಂಜಿತಾ, ನಿತೇಶ್ ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕು ಯೋಜನಾಧಿಕಾರಿ ಜಯಂತಿ ಸ್ವಾಗತಿಸಿದರು.
ಶಿಬಿರದ ವ್ಯವಸ್ಥಾಪನಾ ಸಮಿತಿ ಕೋಶಾಧಿಕಾರಿ ಶಿವಪ್ರಸಾದ್ ಶೆಟ್ಟಿ ಎಲ್ಲದಡಿ ವಂದಿಸಿದರು. ಅಖಿಲ ಕರ್ನಾಟಕ ಜ.ಜಾ. ವೇದಿಕೆ ಟ್ರಸ್ಟ್ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿ ಗಣೇಶ್ ಆಚಾರ್ಯ ನಿರೂಪಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಕಾಪು ತಾಲೂಕು, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜನಾರ್ದನ ಜನ ಕಲ್ಯಾಣ ಸೇವಾ ಸಮಿತಿ ಎರ್ಮಾಳು, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಉಚ್ಚಿಲ ವಲಯ, ತೆಂಕ ಗ್ರಾಮ ಪಂಚಾಯತ್, ನವಜೀವನ ಸಮಿತಿ ಕಾಪು ತಾಲೂಕು, ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಒಕ್ಕೂಟ ಉಚ್ಚಿಲ ವಲಯ, ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತ ಮತ್ತು ಸಂಶೋಧನಾ ಕೇಂದ್ರ ಉಜಿರೆ ಇದರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ನಡೆದ ೧೬೯೪ನೇ ಮದ್ಯವರ್ಜನ ಶಿಬಿರದಲ್ಲಿ ೪೧ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.

